ಯಾದಗಿರಿ: ಮಾಜಿ ಶಾಸಕ ದಿ.ವೆಂಕಟರಡ್ಡಿ ಮುದ್ನಾಳ್ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಇದೇ ಸೆ.17 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುದ್ನಾಳ್ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪಕ್ಷದ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ಮನವಿ ಮಾಡಿದರು.
ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯಾದಗಿರಿ ವಿಧಾನಸಭಾ ಕ್ಷೇತ್ರದ ಜನತೆ ಯಾವತ್ತೂ ಮುದ್ನಾಳ್ ಮನೆತನದ ಶ್ರೇಯಸ್ಸನ್ನು ಬಯಸಿ ಸದಾ ಆಶಿರ್ವಾದ ಮಾಡಿದ್ದಾರೆ. ಕ್ಷೇತ್ರಕ್ಕೆ ವೆಂಕಟರಡ್ಡಿ ಮುದ್ನಾಳ್ ಅವರ ಸೇವೆ ಇನ್ನೂ ಬೇಕಿತ್ತು. ಆದರೆ, ವಿಧಿಯಾಟದಿಂದ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದರು.
ಅಭಿಮಾನಿಗಳ ಮತ್ತು ಕಾರ್ಯಕರ್ತರ ಆಶಯದಂತೆ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ರಾಜಕೀಯ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಪಕ್ಷದ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಮಾತನಾಡಿ, ನಮ್ಮ ತಂದೆ ಮತ್ತು ತಾತನವರು ಹಾಕಿಕೊಟ್ಡ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇನೆ. ಕಾರ್ಯಕ್ರಮದ ನಿಮಿತ್ತ ರಕ್ತದಾನ ಮತ್ತು ನೇತೃ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಜನತೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಮಲ್ಲಣ್ಣಗೌಡ ಪಾಟೀಲ್ ಹತ್ತಿಕುಣಿ, ವೆಂಕಟರೆಡ್ಡಿ ಮಾಲಿ ಪಾಟೀಲ್, ಸಿದ್ರಾಮರಡ್ಡಿ ಅಣಿಬಿ, ಸದಶಿವರಡ್ಡಿ ಅಣಿಬಿ, ಸಾಹೇಬಗೌಡ ಅಲಿಪುರ, ಬಸವರಾಜ ಖಂಡೆರಾವ, ಪರಮಣ್ಣಗೌಡ ಮಾಲಿಪಾಟೀಲ, ರಾಚನ್ನಗೌಡ ದಿಬ್ಬಿಮನಿ, ಆರ್.ವಿಶ್ವನಾಥರಡ್ಡಿ ಪಾಟೀಲ್, ನಿಂಗಪ್ಪ ತಳಕ, ಅಮೀನರಡ್ಡಿ ಪಾಟೀಲ್, ಗ್ರಾ.ಪಂ. ಸದಸ್ಯ ಸಾಬಣ್ಣ ಬೈರಿ, ಶೇಖಪ್ಪ ಹೊರುಂಚಿ, ಗೋವಿಂದಪ್ಪ ನಾಯಕ, ಚನ್ನಬಸರಡ್ಡಿ ಪಾಟೀಲ್, ಪರ್ತಪ್ಪ ನಾಯಕ, ಮರೆಪ್ಪ ಪೂಜಾರಿ, ಗ್ರಾ.ಪಂ. ಸದಸ್ಯ ರವಿ ಜಾದವ್, ಮನೋಹರ ಪವಾರ್, ಚನ್ನರಡ್ಡಿ ಬೊಮಶಟ್ಹಳ್ಳಿ, ಚಂದ್ರಕಾಂತಗೌಡ ಸಿಂಗನಳ್ಳಿ, ಬಲವಂತ ಪುಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ವೇಳೆ ತಳಕ, ಬೊಮ್ಮಶೆಟ್ಟಹಳ್ಳಿ, ಠಾಣಗುಂದಿ, ವಿಶ್ವಾಸಪುರ, ಅಬ್ಬೆತುಮಕೂರು,ಯರಗೋಳ,ಹತ್ತಿಕುಣಿ ಗ್ರಾಮಗಳಲ್ಲಿ ಸಭೆ ನಡೆದವು.
