ಬೆಂಗಳೂರು: ಅಖಿಲ ಭಾರತ ಕಾರ್ಮಿಕರ ಸಮನ್ವಯ ಸಮಿತಿ ಕಲಬುರಗಿ ವ್ಯಾಪ್ತಿಯ ಅಧ್ಯಕ್ಷರನ್ನಾಗಿ ಬಸವರಾಜ ಎಸ್ ಅವರು ಆಯ್ಕೆಯಾಗಿದ್ದು, ರಾಜ್ಯ ಸಂಚಾಲಕ ಹೆಚ್ ನಾರಾಯಣಸ್ವಾಮಿ ಆದೇಶ ನೀಡಿದ್ದಾರೆ.

ರಾಷ್ಟ್ರೀಯ ಅಧ್ಯಕ್ಷರಾದ ಡಾ. ಡಿ. ರಮೇಶ್, ರಾಜ್ಯ ಉಸ್ತುವಾರಿ ಸುಜೇಂದ್ರ ಶೆಟ್ಟಿ ಕಿಲಂಕೇರಿ ಮತ್ತು ರಾಜ್ಯಾಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ ಅವರ ಅವರ ಅನುಮೋದನೆಯಿಂದ ಬಸವರಾಜ.ಎಸ್ ಅವರನ್ನು ಕರ್ನಾಟಕದ ಅಖಿಲ ಭಾರತ ಕಾರ್ಮಿಕರ ಸಮನ್ವಯ ಸಮಿತಿಯ ಕಲಬುರಗಿ ಸಂಸತ್ ಕ್ಷೇತ್ರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾದ ಆದೇಶ ಪತ್ರ ನೀಡಿದರು.

ತಕ್ಷಣದಿಂದ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಂಡು, ಚಟುವಟಿಕೆಗಳನ್ನು ಸಂಘಟಿಸುವ, ಮಾರ್ಗದರ್ಶನ ಮಾಡುವ ಮತ್ತು ಬಲಪಡಿಸುವ ಜವಾಬ್ದಾರಿ ನಿರ್ವಹಿಸಿ, ಯಶಸ್ಸಿಗೆ ಹಾರೈಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!