ಮ್ಯಾನ್ ಹೋಲ್ ತುಂಬಿ ಹೊರಹರಿಯುತ್ತಿರುವ ಕೊಳಚೆ ನೀರು| ಆಸ್ಪತ್ರೆ ರಸ್ತೆಯಲ್ಲಿ ಜನರ ಸಂಕಟ
ಗುರುಮಠಕಲ್: ಪಟ್ಟಣದಲ್ಲಿ ನಿರ್ಮಾಣವಾದ ಒಳಚರಂಡಿ ಯೋಜನೆಯಿಂದ ಉಪಯೋಗಕ್ಕಾಗಿ ಕತೆ ಹೆಚ್ಚು ಅನಾನುಕೂಲವಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ಬಡಾವಣೆಗಳಲ್ಲಿ ಒಳಚರಂಡಿ ಉದ್ಘಾಟನೆಗೂ ಮುನ್ನ ವೇ ಚಾಲನೆ ಗೊಂಡು, ಕೆಲವು ಮನೆಗಳ ನೀರು ಹರಿಯಲು ಸಂಪರ್ಕ ನೀಡಲಾಗಿದೆ. ಇದರಿಂದ ಚರಂಡಿಗೆ ಹರಿಯುವ ಕೊಳಚೆ ನೀರು ಚೇಂಬರ್ ಗೆ ವರ್ಗವಾಗಿದೆ. ಆದರೆ ಇದರೊಟ್ಟಿಗೆ ಅವಾಂತರವೂ ಎದುರಾಗಿದೆ.
ಕೊಳಚೆ ನೀರು ಕೆಲವು ಕಡೆ ರಸ್ತೆ ಗೆ ಹರಿದರೂ ಸ್ವಚ್ಛತಾ ಸಿಬ್ಬಂದಿ
ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಿದ್ದಾರೆ. ಸ್ಥಳೀಯರರು ದೂರು ನೀಡಿದರು ಸಕಾಲಕ್ಕೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಇಂದಿರಾ ಕ್ಯಾಂಟೀನ್ ಮಾರ್ಗವಾಗಿ ಸರ್ಕಾರಿ ಆಸ್ಪತ್ರೆಗೆ ತೆರಳುವ ರಸ್ತೆಯಲ್ಲಿ ಒಳಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದು, ದುರ್ನಾತ ಬೀರುತ್ತಿದೆ. ಇದರಿಂದ ರೋಗಗಳು ಹೊರಡುವ ಮಿತಿ ಎದುರಾಗಿದ್ದು, ಜನರು ಮೂಗು ಮುಚ್ಚಿಕೊಂಡು ನಡೆದಾಡುತ್ತಿದ್ದಾರೆ.
ಪುರಸಭೆ ಇದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಶೀಘ್ರವೇ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿದ್ದಾರೆ.
