ಪೊಲೀಸ್ ಠಾಣೆ ಮಾರ್ಗದ ಎಸ್ ಎಸ್ ಕೆ ವೃತ್ತ | ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸೇರಿದಂತೆ ಗಣ್ಯರು ಭಾಗಿ | ಯುವಕರಿಂದ ದಾಸೋಹ ಸೇವೆ |ದಾನಿಗಳ ಸಾಥ್ | ಜನರಿಗೆ ಅನ್ನ ಬಡಿಸಿದ ಶ್ರೀಗಳು
ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಸುನೀಲ್ ಹೌಜಿ ದಂಪತಿಗಳ ಮಗಳು ಶ್ರೀ ರಾಮನ ವೇಷದಲ್ಲಿ ಕಂಡದ್ದು ಹೀಗೆ…
ರಕ್ಕಸರ ಸಂಹಾರವಾಗಲಿ, ಸಜ್ಜನರ ರಕ್ಷಣೆಯಾಗಲಿ ಸನಾತನ ಸದ್ಧರ್ಮವು ನೆಲೆಗೊಳ್ಳಲಿ ಭುವಿಯಲಿ…!
ಗುರುಮಠಕಲ್: ದೇಶಾದ್ಯಂತ ಭವ್ಯ ಶ್ರೀರಾಮ ಪರ್ವ ಹಿನ್ನೆಲೆ ಗುರುಮಠಕಲ್ ಪಟ್ಟಣದ ವಿವಿಧೆಡೆ ಶ್ರೀ ರಾಮ ನವಮಿ ಆಚರಣೆ ನಡೆಯಿತು.
ಇಲ್ಲಿನ ಎಸ್ ಎಸ್ ಕೆ(ಸೋವವಂಶ ಸಹಸ್ತ್ರಾರ್ಜುನ ಕ್ಷತ್ರೀಯ) ವೃತ್ತದಲ್ಲಿ ಬೆಳಗ್ಗೆ ಶ್ರೀ ಸೀತಾ ಸಹಿತ ರಾಮಾಂಜನೇಯ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡಿದರು.
ಇದಕ್ಕೂ ಮುನ್ನ ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ಚಂದುಲಾಲ ಚೌದರಿ ಮಾತನಾಡಿ, ಸತ್ಯ, ಧರ್ಮ ಹಾಗೂ ತ್ಯಾಗವೇ ಶ್ರೀರಾಮ ಎಂದು ನುಡಿದರು. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರರ ಜೀವನ ಸಕಲರಿಗೆ ಆದರ್ಶವಾಗಿದೆ ಎಂದರು. ಪ್ರತಿಯೊಬ್ಬರು ಧರ್ಮದ ಮಾರ್ಗದಲ್ಲಿ ಸಾಗಿ ಜೀವನ ಪಾವನ ಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ವೃತ್ತ, ನಗರೇಶ್ವರ ದೇವಸ್ಥಾನ ಸೇರಿದಂತೆ ಹಲವೆಡೆ ಶ್ರೀ ರಾಮ ನವಮಿ ಆಚರಣೆ ನಡೆಯಿತು.
ಪ್ರಮುಖರಾದ ಬುಡ್ಡಪ್ಪ ಜನಾರ್ಧನ, ನವಾಜರೆಡ್ಡಿ, ರವಿ ಗವಿನೋಳ, ನರಸಿಂಹಲು ಗಂಗನೋಳ್, ಮಹೇಶ್ ಬುರಬುರೆ, ವಿಠ್ಠಲ್ ಮಿಸ್ಕಿನ್ ಪೂಜಾರಿ, ಮೋಹನ್ ಬುರಬುರೆ, ರಾಮು, ಹೀರಾಲಾಲ ಬಸೂದೆ, ಸತೀಶ್ ಜೀತ್ರಿ, ಯಶವಂತರಾವ ಚೌಧರಿ, ವಸಂತ ಹಬೀಬ್, ಗೋವಿಂದ ರಾವ್ ಮೇಂಗಜಿ, ನಂದಕಿಶೋರ್ ಗೊಂಗಲೆ, ಭೀಮಾಶಂಕರ ಪಡಿಗೆ, ಕಾಶಪ್ಪ ಬಿ, ಅನ್ವರ್ ಅಹ್ಮದ್, ತುಕಾರಾಮ ಧಡಂಗೆ, ಅಂಬಾದಾಸ ಧಡಂಗೆ, ಹಣಮಂತರಾವ ರಂಗಾಪುರ
ಭೀಮರಾವ್ ಗೊಂಗಲೆ, ಪವನ ಎಂ, ಭರತ ಜೀತ್ರಿ, ಜಗದೀಶ ಮೇಂಗಜಿ, ರವೀಂದ್ರರೆಡ್ಡಿ ಪೊತುಲ್, ಲಕ್ಷಣ ಮಡಿವಾಳ, ಮೋಹನ್ ಬುರಬುರೆ, ಓಂ ಪ್ರಕಾಶ್ ಚೌದರಿ, ಕಿಷ್ಟಪ್ಪ ಬೈಂಡ್ಲ, ಚರಣ್ ಚೌದರಿ, ಅಂಜಪ್ಪ, ತುಲಸಿ ಚೌದರಿ, ರಾಹುಲ್ ಚೌದರಿ ಸೇರಿದಂತೆ ಹಲವರು ಇದ್ದರು. ಇದೇ ವೇಳೆ ಪ್ರಮುಖರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು.
