ಪ್ರಕೃತಿ ಸೌಂದರ್ಯದ ಮಧ್ಯೆ ಗುಡ್ಡದ ಮೇಲಿರುವ ದರ್ಗಾ | ಪುಣ್ಯ ಕ್ಷೇತ್ರಕ್ಕೆ ಬಂದು ಸಮಸ್ಯೆಗಳಿಗೆ ಪೂಜ್ಯ ತಿಪ್ಪಯ್ಯ ಮುತ್ಯರಿಂದ ಪರಿಹಾರ ಕಂಡುಕೊಳ್ಳುತ್ತಿರುವ ಭಕ್ತರು

ಸುಕ್ಷೇತ್ರ ರಾಘಪೂರ ಹಜರತ್ ಮೌಲಾಲಿ ದರ್ಗಾ ಜಾತ್ರಾ ಮಹೋತ್ಸವವು  ಭವ್ಯವಾಗಿ ನಡೆಯಲಿದೆ. ಮಾರ್ಚ್ 25 ರಿಂದ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಜಾತ್ರಾ ಮಹೋತ್ಸವ ನಿಮಿತ್ತ ವಿಶೇಷ ಲೇಖನ ಇದಾಗಿದೆ.

ಸೇಡಂ : ತಾಲೂಕಿನ ರಾಘಪೂರದ ಪ್ರಕೃತಿ ಸೌಂದರ್ಯದಲ್ಲಿ ಗುಡ್ಡದ ಮೇಲೆ ನೆಲೆಸಿರುವ ಹಜರತ್ ಮೌಲಾಲಿ ಪುಣ್ಯ ಕ್ಷೇತ್ರದಲ್ಲಿ ನಂಬಿ ಬರುವ ಭಕ್ತರು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಇಲ್ಲಿನ ಜೈ ಭಾರತ ಸೇವಾ ಸಮಿತಿ ಟ್ರಸ್ಟ್ ಮೂಲಕ ನಿರ್ವಹಣೆ ಮಾಡಲಾಗುತ್ತಿರುವ ಹಜರತ್ ಮೌಲಾಲಿ ಮುತ್ಯಾ ದರ್ಗಾಕ್ಕೆ ಸರ್ವ ಧರ್ಮದ ಭಕ್ತಿ, ಶ್ರದ್ದೆಯಿಂದ ನಂಬುವ ಜನರಿದ್ದಾರೆ. ರಾಜ್ಯ ಅಲ್ಲದೇ ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದ ಭಕ್ತರು ಆಗಮಿಸಿ ಪೂಜ್ಯ ತಿಪ್ಪಯ್ಯ ಮುತ್ಯಾ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ ಎನ್ನುತ್ತಾರೆ ಇಲ್ಲಿನ ಭಕ್ತರು. ಮನೆಯ ಸಮಸ್ಯೆ, ಆರೋಗ್ಯ, ವ್ಯವಹಾರ, ಮದುವೆ, ಮಕ್ಕಳು ಹೇಗೆ ಜೀವನದಲ್ಲಿ ನೋವು ಅನುಭವಿಸುತ್ತಿರುವವರು, ಹತ್ತು ಹಲವು ಸಮಸ್ಯೆಗಳಿರುವ ಜನ ಪರಿಹಾರಕ್ಕಾಗಿ ಸಾಲುಗಟ್ಟಿ ಕೂತಿರುವುದು ಕಾಣುತ್ತದೆ.

ಮದುವೆಯಾಗಿ ಸುಮಾರು ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ಕೋರಗುತ್ತಿದ್ದ ಹೈದ್ರಾಬಾದ್ ಮೂಲದ ಭಕ್ತರು ಕೆಲವರಿಂದ ಮೌಲಾಲಿ ದರ್ಗಾದ ತಿಪ್ಪಯ್ಯ ಮುತ್ಯಾ ಅವರ ಕುರಿತು ಕೇಳಿ, ಒಳ್ಳೆಯದಾಗುತ್ತದೆ ಎಂದು ನಂಬಿಕೆಯಿಂದ ನಡೆದು, ಇಲ್ಲಿಗೆ ಬಂದಾಗಿನಿಂದ ಒಳ್ಳೆಯದಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ನಿಮಗೆ ಸತ್ಯ ಎನಿಸಿದರೆ, ನಿಮಗೆ ಒಳ್ಳೆಯದಾದರೆ ನಂಬಿ ಎಂದು ಪ್ರತಿಯೊಬ್ಬರಿಗೂ ಹೇಳುವ ಮುತ್ಯ ಅವರು ಹೇಳುವ ಮಾರ್ಗ ಅನುಸರಿಸಿದರೆ, ಸಮಸ್ಯೆಗಳು ದೂರ ಆಗುತ್ತಿವೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ಮಾತು. ಇಲ್ಲಿಗೆ ಬಂದು ಸಾಕಷ್ಟು ಜೀವನದಲ್ಲಿ ಬದಲಾವಣೆ ಕಂಡಿದ್ದೇವೆ ಎಂದು ಸುತ್ತಮುತ್ತಲಿನ ಜನರು ಅಭಿಪ್ರಾಯ ವ್ಯಕ್ತಪಡಿಸಿದರು.

ಕುಡಿತದ ಚಟಕ್ಕೆ ದಾಸರಾಗಿ, ಅದೆಷ್ಟೋ ಯುವ ಜನ ಜೀವನ ಹಾಳು ಮಾಡಿಕೊಳ್ಳುತ್ತಾರೆ, ಮಕ್ಕಳನ್ನು ಈ ದುಶ್ಚಟಗಳಿಂದ ಹೇಗೆ ರಕ್ಷಿಸಬೇಕು ಎಂದು ಚಿಂತೆಯಲ್ಲಿರುವ ಜನಕ್ಕೆ ಕುಡಿತದ ಚಟ ಬಿಡಿಸುವುದು ಸವಾಲೇ ಸರಿ. ಅಂತವರೂ ಸರಿಯಾದ ಮಾರ್ಗದಲ್ಲಿ ಜೀವನ ನಡೆಸುವಂತೆ ಮಾಡಿದ್ದಾರೆ. ತಿಪ್ಪಯ್ಯ ಮುತ್ಯರನ್ನು ನಡೆದಾಡುವ ದೇವರು ಎಂದೇ ಇಲ್ಲಿನ ಭಕ್ತರು ನಂಬಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!