ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ 100 ದಿನಗಳ ಕ್ಷಯಮುಕ್ತ ಭಾರತ ಅಭಿಯಾನ | ಯಿಮ್ಸ್ ಆವರಣದಲ್ಲಿ  ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರಿಂದ ಜನಜಾಗೃತಿ ವಾಹನಕ್ಕೆ ಚಾಲನೆ

ಯಾದಗಿರಿ: ಕ್ಷಯರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಕ್ಷಯರೋಗ ವಾಸಿಯಾಗುವಂತಹ ರೋಗವಾಗಿದ್ದು, ಆರಂಭಿಕ ಹಂತದಲ್ಲಿಯೇ ಕ್ಷಯರೋಗಿ ಸೂಕ್ತವಾದ ಪೂರ್ಣ ಅವಧಿ ಚಿಕಿತ್ಸೆಯನ್ನು ಪಡೆದರೆ ಗುಣಮುಖವಾಗಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಹೇಳಿದರು.

ಯಾದಗಿರಿಯ ಯಿಮ್ಸ್ ಆವರಣದಲ್ಲಿ ಜನಜಾಗೃತಿ ವಾಹನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಮಾತನಾಡಿದರು. ಜಿ.ಪಂ.ಸಿಇಓ ಲಾವೀಶ್ ಒರಾಡಿಯಾ ಮಾತನಾಡಿ, ಆರೋಗ್ಯದ ಕಾಳಜಿಯ ಬಗ್ಗೆ ತಿಳಿಸುತ್ತಾ ಕ್ಷಯರೋಗಿಗಳನ್ನು ದತ್ತು ಪಡೆದು ನಿಕ್ಷಯ ಮಿತ್ರರಾಗಿ ನೋಂದಾಯಿಸಿಕೊಂಡು ಪೌಷ್ಠಿಕ ಆಹಾರದ ಬುಟ್ಟಿಗಳನ್ನು ಸ್ವ ಇಚ್ಛೆಯಿಂದ ನೀಡಲು ಮುಂದಾಗಬೆಕೇಂದು ಹೇಳಿದರು. ಸುರಪೂರ ತಾಲೂಕಿನ ಕೊಡೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಲ್ಲಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಬುಟ್ಟಿಗಳನ್ನು ನೀಡಿರುತ್ತಾರೆ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಬಿರಾದರ ಮಾತನಾಡಿ, ಕ್ಷಯ ರೋಗಿಗಳಿಗೆ ಚಿಕಿತ್ಸೆ ಜೊತೆಗೆ ಪೌಷ್ಠಿಕ ಆಹಾರ ಮತ್ತು ನಿಕ್ಷಯ ಪೋಷಣಾ ಯೋಜನೆಯಲ್ಲಿ ಪ್ರತಿ ಮಾಹೆ ₹1000 ಅನ್ನು ಕ್ಷಯರೋಗಿಯ ಚಿಕಿತ್ಸೆ ಮುಗಿಯುವವರೆಗೆ DBT ಮುಖಾಂತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್ ಮಾತನಾಡಿ, ಕ್ಷಯ ರೋಗದ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

4 ಪಂಚಾಯಿತಿ ಗೆ ಕ್ಷಯ ಮುಕ್ತ ಪ್ರಮಾಣ ಪತ್ರ ವಿತರಣೆ:ಕ್ಷಯ ಮುಕ್ತ ಭಾರತ ಅಭಿಯಾನದಡಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ಗ್ರಾಮ ಪಂಚಾಯತಿಗಳನ್ನು ಕ್ಷಯ ಮುಕ್ತ ಗ್ರಾಮ ಪಂಚಾಯತಿಗಳೆಂದು 2025ನೇ ಸಾಲಿನಲ್ಲಿ ಆಯ್ಕೆಯಾಗಿರುವ ಗ್ರಾಮ ಪಂಚಾಯತಿ ಕೊಂಕಲ PDO ಸರಸ್ವತಿ, ಗೋನಾಲ PDO ಸಿ.ಬಿ ಪಾಟೀಲ್, ಬಿಳಾರ PDO ಶಿವಪ್ಪ ಹಾಗೂ ಶಿವರಾಜ PDO ಹಾಲಗೇರಾಗೆ ಜಿಲ್ಲಾಧಿಕಾರಿಗಳು  ಕ್ಷಯಮುಕ್ತ ಗ್ರಾಮ ಪಂಚಾಯತಿ ಪ್ರಮಾಣ ಪತ್ರವನ್ನು ವಿತರಿಸಿದರು.

ಡಾ. ಸಂದೀಪ ಹೆಚ್. Dean ರವರು ಯಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ DRTB ಕ್ಷಯ ರೋಗಿಗಳಿಗೆ 20 ಹಾಸಿಗೆಗಳ ಪ್ರತ್ಯೇಕ ಕೋಣೆಯನ್ನು (Chest & TB Ward Department of Pulmonology) ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಯಿಮ್ಸ್ ಮೆಡಿಕಲ್ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಡಾ. ಸಂದೀಪ ಹೆಚ್. ಡಾ. ಪ್ರಶಾಂತ HOD, ಡಾ. ಅವಿನಾಶ Pulmonologist, ಡಾ.ನವಾಜ್ ಉಮರ್, ಪ್ರಾಂಶುಪಾಲರು, ಡಾ. ಸಂತೋಷ ಲಕ್ಷಣ, ವೈದ್ಯಕೀಯ ಅಧೀಕ್ಷಕರು, ಕಾಶಿನಾಥ ಡಿ.ಬಿ ಅಲ್ಲೂರ, ಮುಖ್ಯ ಲೆಕ್ಕಾಧಿಕಾರಿಗಳು ಮತ್ತು ಆರ್ಥಿಕ ಸಲಹೆಗಾರರು, ಮಂಜುನಾಥ ಕಲಾಲ ಸಹಾಯಕ ಔಷಧ ನಿಯಂತ್ರಕರು, ಡಾ. ಹಣಮಂತರೆಡ್ಡಿ, ತಾಲೂಕಾ ಆರೋಗ್ಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!