ಯಾದಗಿರಿ: ರೈತರ ಪರವಾಗಿ ನಿರಂತರ ಹೋರಾಟ ನಡೆಸಿದ ಶಾಸಕರ ದೃಢ ನಿಲುವಿಗೆ ಕೊನೆಗೂ ಜಯ ಸಿಕ್ಕಿದೆ. ಹೈದ್ರಾಬಾದ್–ಬೆಂಗಳೂರು ಕೈಗಾರಿಕಾ ಅಭಿವೃದ್ಧಿ ಕಾರಿಡಾರ್ ಯೋಜನೆಯಡಿ ಭೂಸ್ವಾಧೀನಕ್ಕೆ ಒಳಪಡಿಸಲಾಗಿದ್ದ ಜಮೀನುಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದು, ಇದರಿಂದ ಸಾವಿರಾರು ರೈತರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಶಾಸಕರು ಅಧಿವೇಶನದಲ್ಲಿ ಅನೇಕ ಬಾರಿ ರೈತರ ಸಮಸ್ಯೆಗಳನ್ನು ಎತ್ತಿಹಿಡಿದು, ಭೂಸ್ವಾಧೀನದಿಂದ ಉಂಟಾದ ಅನ್ಯಾಯವನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ಅವರ ನಿರಂತರ ಒತ್ತಡ, ಕಾಳಜಿ ಮತ್ತು ಹೋರಾಟದ ಫಲವಾಗಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಕಡೆಚೂರು, ದದ್ದಲ್, ಶೆಟ್ಟಿಹಳ್ಳಿ ಹಾಗೂ ರಚನಳ್ಳಿ ಗ್ರಾಮಗಳ ರೈತರು ಇಷ್ಟು ದಿನ ರೆಜಿಸ್ಟ್ರೇಷನ್, ಮ್ಯೂಟೇಶನ್ ಮತ್ತು ಬ್ಯಾಂಕ್ ಸಾಲ ಪಡೆಯುವಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದೀಗ ಈ ಎಲ್ಲ ಸಮಸ್ಯೆಗಳಿಗೆ ತೆರೆ ಬಿದ್ದಿದ್ದು, ರೈತರ ಬದುಕಿಗೆ ಹೊಸ ಭರವಸೆ ಮೂಡಿದೆ.

ಇದಕ್ಕೆ ಸಂಬಂಧಿಸಿದಂತೆ ವಿಷಯ ತಿಳಿಯುತ್ತಿದ್ದಂತೆಯೇ ಶೆಟ್ಟಹಳ್ಳಿ ಗ್ರಾಮದ ಜೆಡಿಎಸ್ ಪಕ್ಷದ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ರೈತರ ಮುಖದಲ್ಲಿ ಸಂತೋಷ ಮೂಡಿದೆ.“ರೈತರ ಹಿತವೇ ಮೊದಲ ಆದ್ಯತೆ” ಎಂಬ ಸಂದೇಶವನ್ನು ತಮ್ಮ ಹೋರಾಟದ ಮೂಲಕ ಶಾಸಕರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಈ ಸಂಧರ್ಭದಲ್ಲಿ ಶ್ರೀಧರ್ ರೆಡ್ಡಿ ಪರ್ಲ್, ಹಣಮಂತ್ರಯ ಗುಡ್ಲೆ ,ಮಲ್ಲನಗೌಡ ಮಾಲಿಪಾಟೀಲ್ ,ಸುರೇಶ್ ಶಿವನೂರ್ ,ಶಿವರೆಡ್ಡಿ, ದಶರಥ ಮಂತ್ರಿ ಹೂಸಮನಿ ,ಮಹದೇವಪ್ಪ ವಾಣಿಕೆರ್ ,ಮಲ್ಲಪ್ಪ ,ಹನುಮಂತ ನೀಲಹಳ್ಳಿ , ಪೋಳಪ್ಪ ,ಮಹೇಶ್ , ಹನುಮಂತ ಕಾಣೆಕಲ್ ,ಹನುಮಂತ ಪೂಜಾರಿ , ಸಿದ್ದು ,ಬುಗ್ಗಪ್ಪ ,ಬಸವರಾಜ್ ,ಹನುಮಂತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!