ಯಾದಗಿರಿ: ಕೃಷ್ಣ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಜುಲೈ.28 ರಿಂದಲೇ ಕಾಲುವೆ ಜಾಲಕ್ಕೆ ನೀರು ಹರಿಸಲು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ನಿರ್ಧರಿಸಿದೆ.

ಕೃಷ್ಣ ಭಾಗ್ಯ ಜಲ ನಿಗಮದ ಜೆಬಿಸಿ ವೃತ್ತದ ಅಧೀಕ್ಷಕ ಅಭಿಯಂತರರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಗಮನದಲ್ಲಿಟ್ಟುಕೊಂಡು 14 ದಿನ ಚಾಲು ಹಾಗೂ 10 ದಿನ ಬಂದ್ ಪದ್ಧತಿಯಂತೆ ನೀರು ಪೂರೈಸಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಶಹಾಪುರ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ ಮತ್ತು ಮುಡಬೂಳ ಶಾಖಾ ಕಾಲುವೆಯ ಅಚ್ಚುಕಟ್ಟು ಪ್ರದೇಶಗಳಿಗೆ ಈ ವೇಳಾಪಟ್ಟಿಯಂತೆ ನೀರು ದೊರೆಯಲಿದೆ. ಕಾಲುವೆ ನೀರು ಪೂರೈಕೆಯ ವೇಳಾಪಟ್ಟಿ ವಿವರ ಈ ಕೆಳಗಿನಂತಿದೆ.

ಕಾಲುವೆ ಚಾಲೂ ಇರುವ ದಿನಾಂಕಗಳ ವಿವರ: ಜುಲೈ  28 2026 ರಿಂದ ಆಗಸ್ಟ್ 10 (14 ದಿನಗಳು), ಆ. 21 ರಿಂದ ಸೆ.03 (14 ದಿನಗಳು), ಸೆ.14 ರಿಂದ 27 (14 ದಿನಗಳು), ಅ.08 ರಿಂದ 21(14 ದಿನಗಳು) ನ.01 ರಿಂದ 10 (10 ದಿನಗಳು) ಸೇರಿ ಒಟ್ಟು 66 ದಿನಗಳು.

ಕಾಲುವೆ ಬಂದ ಇರುವ ದಿನಾಂಕಗಳ ವಿವರ: ಆ.11 ರಿಂದ 20 (10 ದಿನಗಳು), ಸೆ.04 ರಿಂದ 13 (10 ದಿನಗಳು), 28 ರಿಂದ ಅ. 07 (10 ದಿನಗಳು),ಅ. 22 ರಿಂದ 31 (10 ದಿನಗಳು), ನ. 11 ರಿಂದ 20 (10 ದಿನಗಳು) ಸೇರಿ ಒಟ್ಟು 50 ದಿನಗಳು.

ಕಾಲುವೆ ಗೇಟ್‍ಗಳಿಗೆ ಹಾನಿ ಮಾಡುವುದು, ಎಸ್ಕೇಪ್‍ಗಳ ಮೂಲಕ ಹಳ್ಳಕ್ಕೆ ನೀರು ಹರಿಸುವುದು, ಸೈಫನ್‍ಗಳ ಮೂಲಕ ಮಣ್ಣಿನ ಏರಿಯಲ್ಲಿ ನೀರು ಎತ್ತಿಕೊಡುವುದು ಮತ್ತು ಪಂಪ್‍ಸೆಟ್‍ಗಳ ಮೂಲಕ ನೀರು ಎತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ರೈತರು ಕೇವಲ ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಿ ಸಹಕರಿಸಲು  ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!