ಪಟ್ಟಣದ ಸರ್ಕಾರಿ ಭಾಷಾ ಅಲ್ಪಸಂಖ್ಯಾತರ ಹಿರಿಯ ಪ್ರಾಥಮಿಕ ಶಾಲೆ ನಾರಾಯಣಪುರದ ಶಿಕ್ಷಕ | ಸಿಡುಕಿನ ಸ್ವಭಾವವಿದ್ದರೂ ಮಾದರಿಯಾಗಿರುವ ಸರಳ ವ್ಯಕ್ತಿ
ಗುರುಮಠಕಲ್: ಶಿಕ್ಷಕ ವೃತ್ತ ಪರಿತವಾದುದು. ಈ ನಿಟ್ಟಿನಲ್ಲಿ ಹಲವು ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಮೊಹ್ಮದ್ ಮುಕ್ತಾರ್ ಅಹ್ಮದ್ ಅವರ ಪ್ರಾಮಾಣಿಕ ಸೇವೆ ಶ್ಲಾಘನೀಯವಾದುದು ಎಂದು ಶಿಕ್ಷಣ ಸಂಯೋಜನ ರವೀಂದ್ರ ಚವ್ಹಾಣ ಹೇಳಿದರು.
ಪಟ್ಟಣದ ಸರ್ಕಾರಿ ಭಾಷಾ ಅಲ್ಪಸಂಖ್ಯಾತರ ಹಿರಿಯ ಪ್ರಾಥಮಿಕ ಶಾಲೆ ನಾರಾಯಣಪುರ ಓಣಿಯಲ್ಲಿ ನಿವೃತ್ತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿವೃತ್ತಿ ಹೊಂದಿರುವ ಶಿಕ್ಷಕ ಮಾರ್ಗದರ್ಶನ ಯಾವತ್ತು ಕಿರಿ ಶಿಕ್ಷಕರಿಗೆ ಇರಲಿ ಎಂದು ಆಶಯ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ್ ನೀರೆಟಿ ಮಾತನಾಡಿ, ಸದೃಢ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರ ಪ್ರಾಮಾಣಿಕ ಸೇವೆಯ ಪ್ರತಿಫಲವಾಗಿ ಮಕ್ಕಳು ಉನ್ನತ ಸ್ಥಾನದಲ್ಲಿದ್ದದ್ದು ಕಾಣುತ್ತೇವೆ ಎಂದರು. ನಿವೃತ್ತಿ ಜೀವನದಲ್ಲಿ ಕುಟುಂಬದ ಜೊತೆ ಕಾಲ ಕಳೆಯುವ ಸಮಯ ಎಂದರು.
ಮುಸ್ಲಿಂ ಸಮಾಜದ ಅಧ್ಯಕ್ಷ ಸೈಯದ್ ಖಾಜಾ ಮೈನೋದ್ದೀನ್ಸ್ ಮಾತನಾಡಿ, ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಎನ್ನುವುದು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ಶಿಕ್ಷಕ ಮೊಹ್ಮದ್ ಮುಕ್ತಾರ್ ಅಹಮದ್ ಅವರ ಸೇವೆಯ ಗುಣಗಾನ ಮಾಡಿದರು.
ಉರ್ದು ಕ್ಲಸ್ಟರ್ ಸಿಆರ್ಪಿ ಬಂದೇನವಾಜ ಮಾತನಾಡಿ, ಶಿಕ್ಷಕರ ವೃತ್ತಿ ಪವಿತ್ರವಾದದ್ದು, ಸಮಾಜದ ಆದರ್ಶವಾಗಿದ್ದಾನೆ. ಪತಿಯೊಬ್ಬ ವ್ಯಕ್ತಿ, ವಕ್ತಿತ್ವ ನಿರ್ಮಾಣ ಮಾಡಿ ಬದುಕು ರೂಪಿಸುವ ನಿರ್ಮಾತ್ಮ “ಶಿಕ್ಷಕ” ಎಂದರು.
ನಾರಾಯಣರೆಡ್ಡಿ ಪ್ರೊ.ಪಾಟೀಲ್ ಮಾತನಾಡಿ, ಪ್ರಾಮಾಣಿಕ ಪರಿಶ್ರಮ, ಕರ್ತವ್ಯ ನಿಷ್ಠೆ, ಸಮಯ ಪಜ್ಞೆ ಪರಿಪಾಲಿಸುವ ಆದರ್ಶ ಶಿಕ್ಷಕರಾಗಿದ್ದಾರೆ. ಸರ್ಕಾರಿ ಸೇವೆ ಮುಗಿಯಿತು ಈಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.
ಉಪಪಾಚಾರ್ಯ ಕೃಷ್ಣಾ ರೆಡ್ಡಿ, ಮುಖ್ಯಗುರು ಮುಸಿಯುದ್ದೀನ್, ಶಶಿಕಾಂತ ಜನಾರ್ಧನ ಪ್ರ.ಮುಖ್ಯಗುರು ಅನುರಾಧಾ, ಬಾಲರಾಜ್, ಬಿಅರ್ಪಿ ಚಂದು ಜಾದವ್, ಸಿಆರ್ಪಿ ಬಾಲಪ್ಪ ಸಿರಗಂ, ಚಂದ್ರಕಾಂತ, ಮಾಣಿಕಪ್ಪ, ಫಯಾಜ್ ಅಹ್ಮದ್, ಸೈಯದ್ ಬಾಬಾ, ಇಸ್ಮಾಯಿಲ್ ಪ್ಯಾರೆ, ಎಕ್ಬಾಲ್ ಅಹ್ಮದ್, ಖಾನಸಾಬ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಶಿಕ್ಷಕಿ ಜಯಂತಿ ನಿರೂಪಿಸಿದರು.
ಸೇವೆ ತೃಪ್ತಿ ತಂದಿದೆ: ಗುರುಮಠಕಲ್ ಸೇರಿದಂತೆ ಸುತ್ತಲಿನ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಮಕ್ಕಳಿಗೆ ಉತ್ತಮ ಬೋಧನೆ ಮಾಡಿ, ಶಿಲ್ಪಿ ಕಲ್ಲನ್ನು ಕೆತ್ತನೆ ಮಾಡಿ ಹೇಗೆ ರೂಪ ನೀಡುತ್ತಾರೋ, ಹಾಗೇ ಮಕ್ಕಳು ವಿದ್ಯಾಭ್ಯಾಸ ಮಾಡಿ ಉನ್ನತ ಗುರಿ ಸಾಧಿಸಲು ಪ್ರೇರಣೆ ನೀಡಲಾಗಿದೆ. ಸರ್ಕಾರಿ ಸೇವೆಯು ತೃಪ್ತಿ ನೀಡಿದೆ ಎಂದು ವಯೋ ನಿವೃತ್ತಿ ಹೊಂದಿದ ಶಿಕ್ಷಕ ಮೊಹ್ಮದ್ ಮುಕ್ತಾರ್ ಅಹ್ಮದ್ ಅಭಿಪ್ರಾಯಪಟ್ಟರು.
