ರಕ್ಷಾ ಬಂಧನದ ಸಂಭ್ರಮ | ಅಣ್ಣ – ತಮ್ಮಂದಿರಿಗೆ ರಾಖಿ ಕಟ್ಟಿದ ಸಾನ್ವಿ | ಸಕ್ಕರೆ ಬೆಲೆ ದುಬಾರಿ ಹಿನ್ನೆಲೆ ಉಡುಗೊರೆ ನೀಡಿದ ಚಿಣ್ಣರು

ಬೀದರ್ : ಕೆಜಿಗೆ 70 ರೂ. ಗಡಿ ದಾಟಿರುವ ಚಿಲ್ಲರೆ ಸಕ್ಕರೆ ಬಡವರ ಬಾಯಿ ಸುಡುತ್ತಿರುವ ಸಂದರ್ಭದಲ್ಲಿ ರಕ್ಷಾ ಬಂಧನ ಹಿನ್ನೆಲೆ ಬೀದರ್ ನಲ್ಲಿ ಚಿಣ್ಣರು ರಾಕಿ ಕಟ್ಟಿಸಿಕೊಂಡು ಉಡುಗೊರೆಯಾಗಿ ಸಕ್ಕರೆ ಪ್ಯಾಕೇಟ್ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

ಕಳೆದ ವಾರ ಏಕಾಏಕಿ ಸಕ್ಕರೆ ಬೆಲೆ ಏರಿಕೆಯಿಂದ ಬಡ ಜನರು ತತ್ತರಿಸಿದ್ದು, ಸಾಮಾನ್ಯ ಜನರು ಸಾಕಷ್ಟು ಚಿಂತೆಯಲ್ಲಿ ಮುಳುಗಿದ್ದಾರೆ. ಈ ಮಧ್ಯೆಯೇ ಪೆಟ್ರೋಲ್ ನಲ್ಲಿ ಎಥೆನಾಲ್ ಬಳಕೆಯಿಂದಾಗಿ ಕಬ್ಬಿನಿಂದ ದ್ರವ ತೆಗೆಯುವುದರಿಂದ ಸಕ್ಕರೆ ಬೆಲೆ ಏರಿಕೆಯಾಗಿದೆ ಎನ್ನುವ ವದಂತಿಗಳು ಕೇಳಿಬರುತ್ತಿದೆ.

ನಗರದ ಲಾಡಗೇರಿಯ ಶಿವಪೂರ ಕಾಲೋನಿಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕು. ಸಾನ್ವಿ ತನ್ನ ಅಣ್ಣ ತಮ್ಮಂದಿರಿಗೆ ಪ್ರೀತಿಯಿಂದ ರಾಖಿ ಕಟ್ಟಿ, ಸಹೋದರತ್ವ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದಳು.

ರಾಖಿ ಕಟ್ಟಿದ ಸಂತಸಕ್ಕೆ ಪ್ರತಿಯಾಗಿ ಅಣ್ಣ ತಮ್ಮಂದಿರು ಸಾನ್ವಿಗೆ ಉಡುಗೊರೆಯಾಗಿ ದುಬಾರಿ ಬೆಲೆಯ ಸಕ್ಕರೆ ಪ್ಯಾಕೇಟ್ ನೀಡಿ ಸಂತಸ ಹಂಚಿಕೊಂಡರು. ಸರಳವಾಗಿ ನಡೆದ ಈ ರಕ್ಷಾ ಬಂಧನ ಆಚರಣೆ ಕುಟುಂಬಸ್ಥರಲ್ಲಿ ಸಂತಸ ಮೂಡಿಸಿತು. ಈ ಸಂದರ್ಭದಲ್ಲಿ ಸಂಕಲ್ಪ ಭಾವಿಕಟ್ಟಿ, ಕೃಷ್ಣ ಭಾವಿಕಟ್ಟಿ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!