ನನ್ನ ಅವಧಿಯ ಕೆಲಸ ಯಶಸ್ವಿಯಾಗಿ ನೂರಾರು ಎಕರೆ ಕೃಷಿ ಜಮೀನಿಗೆ ಅನುಕೂಲ |ಬೇರೆಯವರು ತಾವು ಮಾಡಿರುವುದಾಗಿ ಹೇಳಿಕೊಳ್ಳುತ್ತಿರುವವರಿಗೆ ಏನು ಹೇಳಬೇಕು ? | ಕ್ಷೇತ್ರದ ಜನರಿಗೆ ಎಲ್ಲಾ ಗೊತ್ತಿದೆ, ಉಸಿರಿರುವರೆಗೆ ಜನರ ಸೇವೆ ಮಾಡುವೆ | ಗುರುಮಠಕಲ್ ತಾಲೂಕು ಬರ ಘೋಷಣೆಯಾಗಲಿದೆ | ಬಾಬುರಾವ್ ಚಿಂಚನಸೂರ ಮಾತು

ಗುರುಮಠಕಲ್: ನಾನು ಶಾಸಕರಾಗಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾದಗಿರಿ ಮಿನಿ ವಿಧಾನಸೌಧ ಉದ್ಘಾಟನೆ ಬಂದಾಗ ಭರವಸೆಯಂತೆ ಯೋಜನೆ ಮಂಜೂರಾಗಿದೆ. ಕ್ಷೇತ್ರದ ರೈತರ ಬಾಳು ಹಸನಾಗಿಸಲು ಕೆರೆ ತುಂಬುವ ಯೋಜನೆಗೆ ನನ್ನ ಅವಧಿಯಲ್ಲಿ ಆಗಿದೆ ಎಂದು ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು.

ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಡಾ. ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಿಯಾಂಕ ಖರ್ಗೆ ಅವರ ಮನವೊಲಿಸಿ 440ಕೋಟಿ ಅನುದಾನ ತಂದಿದ್ದು, ನಾನು ಕೆರೆ ತುಂಬಿದ್ದು ದೇಶಕ್ಕೆ ಗೊತ್ತಿದೆ. ತೆರೆದ ಇತಿಹಾಸವಿದೆ. ಆದರೇ ಬೇರೆಯವರು ತಾವು ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ತಾಲೂಕು ಬರ ಪೀಡಿತ ಪಟ್ಟಿಯಲ್ಲಿ ಬರುತ್ತೆ. ಎನ್ ಡಿ ಆರ್ ಎಫ್ ನಿಯಮಗಳಂತೆ ಆಗುವ ಭರವಸೆಯಿದೆ. ಕಾಂಗ್ರೆಸ್ ಪಕ್ಷ ರೈತರ ಪರವಾಗಿದೆ. ಶೀಘ್ರವೇ ಬರ ಘೋಷಣೆಯಾಗಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವ ಪ್ರಿಯಾಂಕ್ ಖರ್ಗೆ, ಶರಣು ಪ್ರಕಾಶ ಪಾಟೀಲ ಅವರೊಂದಿಗೆ ಮಾತನಾಡಿದ್ದೇನೆ ಎಂದರು.

ಜಿಲ್ಲಾಧ್ಯಕ್ಷರಾಗಿ ಬಸರೆಡ್ಡಿ ಅವರನ್ನು ಮುಂದುವರೆಸಿದ್ದು, ಎಐಸಿಸಿ, ಕೆಪಿಸಿಸಿ ನಾಯಕರಿಗೆ ಅಭಿನಂದನೆ ಸಲ್ಲಿಸಿದರು. ಪಕ್ಷ ಸಂಘಟನೆಗೆ ಒಳ್ಳೆಯ ಬಲವರ್ಧನೆಗೆ ಶ್ರಮಿಸಿದ್ದಾರೆ ಎಂದರು. ತಮಗೆ ತಾಯಿ ತಂದೆ ಇಲ್ಲ, ಮಕ್ಕಳಿಲ್ಲ ನಿನಗೇನೂ ಆಸೆ ಇಲ್ಲ. ಒಳ್ಳೆಯ ಕೆಲಸ ಮಾಡಿ ಹೆಸರು ಮಾಡುವೆ ಎಂದರು. ಚಿತ್ತಾಪುರ ತಾಲೂಕಿನಲ್ಲಿ ಸ್ಪರ್ದೆ ಮಾಡುವಾಗ 6 ಕಂಪನಿಗಳಿದ್ದವು, ದಾನ, ಧರ್ಮ ಮಾಡಿದ್ದೇನೆ. ಕುಟುಂಬಕ್ಕೆ ಕಾಲೇಜು, ದಾಲ್ ಮಾತ್ರ ಉಳಿಸಿಕೊಂಡಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ಮಾತನಾಡಿ, ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲ ಇಲ್ಲ, ಪಕ್ಷ ಯಾರಿಗೆ ಟಿಕೇಟ್ ಕೊಡುತ್ತೆ ಅವರಿಗಾಗಿ ಕಾರ್ಯಕರ್ತರು ಕೆಲಸ ಮಾಡುತ್ತೇವೆ.

2023ರಲ್ಲಿ ಸೋತ ಅಭ್ಯರ್ಥಿಗೆ ಟಿಕೇಟ್ ಎಂದು ಬಿ.ಕೆ. ಹರಿಪ್ರಸಾದ್ ಅವರು ಹೇಳಿದ್ದಾರೆ. ಹುಟ್ಟುಹಬ್ಬ, ಅಭಿನಂದನೆ ಸಮಾರಂಭ ಅವರ ವೈಯಕ್ತಿಕ ವಿಚಾರ ಎಂದರು.

ಸೈದಾಪುರ ಬ್ಲಾಕ್ ಅಧ್ಯಕ್ಷ ನಿರಂಜನ ರೆಡ್ಡಿ, ರವೀಂದ್ರ ರೆಡ್ಡಿ, ದಶರಥರಾವ ಧಡಂಗೆ, ಶ್ರೀನಿವಾಸ ಗುಮಡಾಲ್, ಸೈಯದ್ ಮೈನೋದ್ದೀನ, ಬಸವರಾಜ ದಳಪತಿ, ಬಾಬು ತಲಾರಿ, ಆನಂದ ಬೋಯಿನಿ, ಬಸವಂತರಾಜ ನೀರಟಿ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!