ಎಸ್ ಎಸ್ ಕೆ ಸಮಾಜದಿಂದ ಸಶಕ್ತ ನಾರಿ ಸಧೃಡ ಸಮಾಜ ಸಂಕಲ್ಪ | ಮಹಿಳೆಯರು ಸಾಮಾಜಿಕ ಕಾರ್ಯದಲ್ಲಿ ಸಕ್ರಿಯ ತೊಡಗಿಸಿಕೊಳ್ಳಲು ಕರೆ | ಪ್ರತಿಭೆಗಳ ಗುರುತಿಸುವ ಕಾರ್ಯ, ಮಹಿಳೆಯರ ನೇತೃತ್ವ | ಸಮಾವೇಶದ ಭಿತ್ತಿಪತ್ರ ಬಿಡುಗಡೆ
ಯಾದಗಿರಿ/ಗುರುಮಠಕಲ್: ನಾವು ಕ್ಷತ್ರೀಯರು ಯಾವುದರಲ್ಲಿ ಕಮ್ಮಿಯಿಲ್ಲ, ನಮ್ಮ ಪ್ರಾಬಲ್ಯವನ್ನು ತೋರಬೇಕಿದೆ. ಸಂಖ್ಯೆಯಲ್ಲಿ ಕಡಿಮೆ ಅನಿಸಬಹುದು ಆದರೇ ನಮ್ಮ ಶಕ್ತಿ ತೋರಿಸಬೇಕು ಎಂದು ರಾಜ್ಯ ಎಸ್ ಎಸ್ ಕೆ ಸಮಾಜದ ಸಹ ಕಾರ್ಯದರ್ಶಿ ಸಂಜಯ್ ಮಿಸ್ಕಿನ್ ಕರೆ ನೀಡಿದರು.
ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು. ದಾವಣಗೆರೆ ಜಿಲ್ಲೆ ಹರಿಹರ ನಗರದ ಪಿ.ಬಿ. ರಸ್ತೆಯ ಭಾಗೀರಥಿ ಕನ್ವೆನ್‌ಷನ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಎಸ್. ಎಸ್. ಕೆ. ಮಹಿಳಾ ಘಟಕ ಸಮಾವೇಶ ಆಯೋಜಿಸಲಾಗಿದೆ ಎಂದರು.
ಈ ಭಾಗದ ಕಲಬುರಗಿ ಹೊರತುಪಡಿಸಿ ಗುರುಮಠಕಲ್ ನಲ್ಲಿ ಹೆಚ್ಚಿನ ಜನರು ಸಮಾಜದವರಿದ್ದು, ಕಾಲಕಾಲಕ್ಕೆ ಸಮಾಜ ಹಲವೆಡೆ ವಿಸ್ತರಿಸಿದೆ. 21ನೇ ಶತಮಾನದಲ್ಲಿದ್ದೇವೆ. ರಾಜ್ಯದ 20 ಜಿಲ್ಲೆಗಳಲ್ಲಿ ಸಮಾಜದವರು ನೆಲೆಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆ ಅಗತ್ಯವಿದೆ. ಪುರುಷರಷ್ಟೇ ಮಹಿಳೆಯರು ಮುಖ್ಯವಾಗಿದ್ದಾರೆ. ಅಲ್ಲದೇ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವೂ ನಡೆಯಲಿದೆ ಎಂದರು.
ಸಶಕ್ತ ನಾರಿ ಸದೃಢ ಸಮಾಜ ಎಂಬ ಘೋಷ ವಾಕ್ಯದೊಂದಿಗೆ ನೆರವೇರಿಸಲು ನಿಶ್ಚಯಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಯ ಎಸ್.ಎಸ್.ಕೆ. ಸಮಾಜದ ಮಾತಾ, ಭಗಿನಿ, ಸಹೋದರಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಿದರು.
ಸಮಾಜದ ಅಧ್ಯಕ್ಷ ಚಂದುಲಾಲ್ ಚೌಧರಿ ಮಾತನಾಡಿ, ಮಹಿಳಾ ಸಶಕ್ತಿಕರಣ ಕುರಿತು ರಾಜ್ಯ ಮಟ್ಟದ ಸಮಾವೇಶ ಆಯೋಜನೆ ಸಾಕಷ್ಟು ಮಹತ್ವದ್ದಾಗಿದೆ ಎಂದರು. ಕಾರ್ಯಕ್ರಮ ಆಯೋಜನೆ ಮಾಡಿರುವ ಸಮಾಜದ ರಾಜ್ಯದ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಬುಡ್ಡಪ್ಪ ಜನಾರ್ಧನ ಮಾತನಾಡಿ, ರಾಜ್ಯಾಧ್ಯಕ್ಷ ಡಾ.ಶಶಿಕಾಂತ ಮೆಹರ್ವಡೆ ನೇತೃತ್ವದಲ್ಲಿ ಸಮಾಜ ಬಲಿಷ್ಠವಾಗಿ ಬೆಳೆಯುತ್ತಿದೆ. ಮಹಿಳಾ ಸಶಕ್ತಿಕರಣ ಮಾಡುವ ಸಂಕಲ್ಪ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಸಮಾಜದಲ್ಲಿ ಸಾಕಷ್ಟು ಬದಲಾವಣೆ, ಜಾಗೃತಿಯಾಗುತ್ತಿದೆ ಎಂದರು.
ಸಮಾಜದ ಗೌರವಾಧ್ಯಕ್ಷ ರಾಮಕಿಶನ್ ರಾವ್ ಗೊಂಗಲೆ, ಡಾ. ನರಸಿಂಗರಾವ್ ಕಾಶಿಗಾವ್, ಲಕ್ಷ್ಮಣರಾವ್ ಚೌಧರಿ, ಅಂಬಾದಾಸ ಜೀತ್ರಿ, ಯಶವಂತ ರಾವ್ ಚೌಧರಿ, ಯುವ ಅಧ್ಯಕ್ಷ ವಿನಾಯಕ ಜನಾರ್ಧನ, ಆರ್ಯ ಸಮಾಜ ಅಧ್ಯಕ್ಷ ಲಕ್ಷ್ಮಣರಾವ ಪತಂಗೆ, ಜವಹಾರಲಾಲ್ ಮೇಂಗಜಿ, ರೇಣುಕಾ ಗೊಂಗಲೆ, ಸುಷ್ಮಾ ಚೌಧರಿ ಇತರರಿದ್ದರು. ಸಮಾಜದ ಗಣ್ಯರು, ಮಹಿಳೆಯರ ಭಾಗವಹಿಸಿದ್ದರು.
