ಗುರುಮಠಕಲ್: ತಾಲೂಕಿನ ಕಾಕಲವಾರ ಗ್ರಾಮದ ಮನೆಯೊಂದರ ಚಪ್ಪರದ ಫರ್ಸಿ ತೆಗೆದು ಬೆಳ್ಳಿಯ ಕಡೆ, ಚಿನ್ನದ ಉಂಗುರ ಹಾಗೂ ದ್ವಿಚಕ್ರ ವಾಹನ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಮಠಕಲ್ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯಲ್ಲಿ ಆರೋಪಿಯನ್ನು ಅಂದರ್ ಮಾಡಿದ್ದಾರೆ.
ಎಮ್.ಡಿ ಸಲೀಮ್ ಅಬ್ದುಲ್ ಖಾದರಸಾಬ ಅವರ ಮನೆಯೊಳಗೆ ಇಳಿದು ಅಲುಮಾರಿಯಲ್ಲಿರುವ ಬೆಳ್ಳಿಯ ಕಡಗಗಳು, ಬಂಗಾರದ ಉಂಗುರ ಮತ್ತು ಮೋಟರ ಸೈಕಲ(ಸ್ಕೂಟ) ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಅ.12 ರಂದು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಪತ್ತೆಗಾಗಿ ಪೊಲೀಸ ಹಿರಿಯ ಅಧಿಕಾರಿ ಮಾರ್ಗದರ್ಶನದಲ್ಲಿ ಪಿ. ಐ ದೌಲತ ಎನ್.ಕೆ ನೇತೃತ್ವದಲ್ಲಿ ಅಲ್ಲಾಭಕ್ಷಾ ಶ್ಯಾಬಾದಿ ಪಿ.ಎಸ್.ಐ, ಚಂದ್ರಪ್ಪ ಎ.ಆರ್.ಎಸ್.ಐ. ನರಸಿಂಗರಾವ್ ,ರೇಣುಕರಾಜು, ನರೇಂದ್ರರೆಡ್ಡಿ, ನಾರಾಯಣ, ರಹೀಮ, ಆಶೋಕ , ಗೋವಿಂದ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಘಟನೆಯ ಮಾಹಿತಿ ಕಲೆ ಹಾಕಿ ಪೊಲೀಸರು ಆರೋಪಿತನ ಪ್ರಕರಣ ಭೇದಿಸಿ, ಅದೇ ಗ್ರಾಮದ ಆರೋಪಿ ಮೊಹಮ್ಮದ್ ಮುಸ್ತಾಖ್ ಮೊಲ್ಲಾ (24) ನನ್ನು ದಸ್ತಗಿರಿ ಮಾಡಿ ಸದರಿ ಆರೋಪಿತನಿಂದ 1 ಕೆ.ಜಿ (1000 ಗ್ರಾಂ) ತೂಕದ ಬೆಳ್ಳಿಯ ಕಡಗಗಳು, 3 ಗ್ರಾಂ ತೂಕದ 1 ಬಂಗಾರದ ಸುತ್ತುಂಗುರ ಹಾಗೂ ಕ್ಟಿವ(ಸ್ಕೂಟಿ) ನೊಂದಣಿ ಸಂಖ್ಯೆ ಕೆಎ-04-ಜೆಡಿ-5486 ಅಲ್ಲದೇ ಮತ್ತೊಂದು ಪ್ರಕರಣದ ದ್ವಿಚಕ್ರ ವಾಹನ ಮಾರಿರುವ ನಗದು 10 ಸಾವಿರ ಸೇರಿ ಒಟ್ಟು ₹3.61ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
