ಗುರುಮಠಕಲ್:  ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ಸೇನೆಯ ಸಭೆಯಲ್ಲಿ  ಗುರುಮಠಕಲ್ ತಾಲೂಕು ಯುವ ಘಟಕದ ಅಧ್ಯಕ್ಷ ಶರಣು ಬೋಯಿನ್ ಚಿಂತಕುಂಟ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಯಿತು.

ಗುರುಮಠಕಲ್ ತಾಲೂಕು ಅಧ್ಯಕ್ಷ ಅಬ್ದುಲ್ ರಿಯಾಜ್ ಸಾಹುಕಾರ್ ನೇತೃತ್ವದಲ್ಲಿ ಹಾಗೂ ಯಾದಗಿರಿ ಜಿಲ್ಲಾ ಅಧ್ಯಕ್ಷ ವಿಶ್ವರಾಧ್ಯ ದಿಮ್ಮೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಿ ಜವಾಬ್ದಾರಿ ವಹಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಕುಮಾರಿ ಶ್ರೀದೇವಿ ಕಟ್ಟಿಮನಿ, ಅಬ್ದುಲ್ ಅಜೀಜ್ ,ವೀರೇಶ್ ಸಜ್ಜನ್ ಕಡೇಚೂರು, ದೇವು ಘಂಟಿ ಬಾಡಿಯಾಳ್, ಭಿಮು ಮಲ್ಲಳ್ಳಿ, ಶರಣು ಅರ್ಜುಣಗಿ, ಸಚಿನ್ ಪವಾರ್, ಸೇರಿದಂತೆ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನೂತನವಾಗಿ ನೇಮಕಗೊಂಡ ಶರಣು ಬೋಯಿನ್ ಚಿಂತಕುಂಟ ಅವರಿಗೆ ಅಭಿನಂದನೆ ತಿಳಿಸಿ ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಕನ್ನಡಿಗರ ಹಿತಕ್ಕಾಗಿ ಸಂಘಟನೆಯ ತತ್ವ ಮತ್ತು ಆಶಯಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿ, ಯುವಶಕ್ತಿಯನ್ನು ಒಗ್ಗೂಡಿಸಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಹೇಳಿದರು.

Spread the love

Leave a Reply

Your email address will not be published. Required fields are marked *

error: Content is protected !!