ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ | ವಿವಿಧ ಸ್ಪರ್ಧೆಗಳಲ್ಲಿ ಯಲ್ಹೇರಿ ಪ್ರೌಢ ಶಾಲೆ ಮಕ್ಕಳು ಭಾಗಿ
ಗುರುಮಠಕಲ್: ತಾಲೂಕಿನ ಸಮೂಹ ಸಂಪನ್ಮೂಲ ಕೇಂದ್ರ ಯಲ್ಹೇರಿ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಯಲ್ಹೇರಿ ಸರ್ಕಾರಿ ಪ್ರೌಢ ಶಾಲೆ ಮಕ್ಕಳು ಸಾಧನೆ ಮಾಡಿದ್ದಾರೆ.
ಕಾಳಬೆಳಗುಂದಿಯಲ್ಲಿ ಆಯೋಜನೆಗೊಂಡ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಪ್ರತಿಭೆಯನ್ನು ಪ್ರದರ್ಶಿಸಿ ಶಾಲೆ ಹಾಗೂ ಗ್ರಾಮಕ್ಕೆ ಹೆಸರು ತಂದಿದ್ದಾರೆ ಎಂದು ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಬಸ್ಸಪ್ಪ ಕಾವಲಿ ಹಾಗೂ ಮುಖ್ಯ ಗುರು ಮೊಗಲಪ್ಪ ಕೆ ಅವರು ಮಕ್ಕಳನ್ನು ಅಭಿನಂದಿಸಿದ್ದಾರೆ.
ಪ್ರಬಂಧ ಸ್ಪರ್ಧೆಯಲ್ಲಿ 9 ನೇ ತರಗತಿಯ ಅಕ್ಷತಾ ಪ್ರಥಮ, ಚರ್ಚಾ ಸ್ಪರ್ಧೆಯಲ್ಲಿ ಭೀಮಾಶಂಕರ ಪ್ರಥಮ, ರಸ ಪ್ರಶ್ನೆ ಸ್ಪರ್ಧೆಯಲ್ಲಿ ಮಹಾದೇವಪ್ಪ, ಅನಿತಾ ದ್ವಿತೀಯ ಸ್ಥಾನ, ಮಿಮಿಕ್ರಿ ಭೀಮಾಶಂಕರ ದ್ವಿತೀಯ, ಚಿತ್ರ ಕಲೆ ಉಮಾದೇವಿ ದ್ವಿತೀಯ, ಹಿಂದಿ ಭಾಷಣ ಆಕಾಶ್ ದ್ವಿತೀಯ, ಭಾವಗೀತೆ ಸಾವಿತ್ರಾ ದ್ವಿತೀಯ, ಹಿಂದಿ ಕಂಠಪಾಠ ಸಂದೀಪ್ ದ್ವಿತೀಯ, ಹಾಡು ಸಾವಿತ್ರಾ ದ್ವಿತೀಯ, ಕನ್ನಡ ಕಂಠಪಾಠ ಸಂದೀಪ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮಕ್ಕಳ ಸಾಧನೆಗೆ ಎಸ್ ಡಿ ಎಂ ಸಿ ಸದಸ್ಯರು ಹಾಗೂ ಶಿಕ್ಷಕರರಾದ ಹುಸನಪ್ಪ ಸಕ್ರಿ, ಬಸವರಾಜ, ಟಿ.ರಾಮುಲು, ಶಾಂತಪ್ಪ ಯಾಳಗಿ, ಶ್ರೀದೇವಿ, ಮುಸ್ಕಾನ್, ಎಐ ಶಿಕ್ಷಕ ಅನೀಲ ಕುಮಾರ ಅಭಿನಂದಿಸಿದ್ದಾರೆ.
