ಭವ್ಯ ನವರಾತ್ರಿ ಉತ್ಸವಕ್ಕೆ ಚಾಲನೆ| ಯಾದಗಿರಿ ಹಿಂದೂ ಸೇವಾ ಸಮಿತಿಯ ದಸರಾ ಉತ್ಸವ | ಎಸ್ ಎಸ್ ಕೆ ಸಮಾಜದಿಂದ ಘಟ ಸ್ಥಾಪನೆ | ದೇವಿ ಭವ್ಯ ಮೆರವಣಿಗೆ ಮೂಲಕ ಪ್ರತಿಷ್ಠಾಪನೆ | ಹೆಡಗಿಮದ್ರ ಶ್ರೀ ಗಳಿಂದ 10ನೇ ವರ್ಷದ ಮೌನ ಅನುಷ್ಠಾನ

ಯಾದಗಿರಿ/ಗುರುಮಠಕಲ್: ಜಿಲ್ಲೆಯಲ್ಲಿ ನವರಾತ್ರಿ ಉತ್ಸವಕ್ಕೆ ಭವ್ಯ ಚಾಲನೆ ದೊರೆತಿದೆ. ರವಿವಾರ ನಗರದಲ್ಲಿ ಭವಾನಿ ದೇವಿಯ ಘಟಸ್ಥಾಪನೆ ಹಿನ್ನಲೆಯಲ್ಲಿ ಅದ್ದೂರಿ ಮೆರವಣಿಗೆ ಜರುಗಿತು.

ಭೀಮಾ ನದಿಯಲ್ಲಿ ದೇವಿಗೆ ಗಂಗಾಸ್ನಾನ ನೆರವೇರಿಸಿದ ನಂತರ ಮೆರವಣಿಗೆ ಮುಖಾಂತರ ಬಂದು ನಿಗದಿತ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಜಿಲ್ಲೆಯಲ್ಲಿ  ಸಂಭ್ರಮ ಮನೆ ಮಾಡಿದೆ.

ಇಲ್ಲಿನ ಸ್ಟೇಶನ್ ಏರಿಯಾದಲ್ಲಿ ಹಿಂದೂ ಸೇವಾ ಸಮಿತಿಯಿಂದ ಆಚರಣೆ ಮಾಡುವ ದಸರಾ ಉತ್ಸವ ಅತ್ಯಂತ ಪ್ರಸಿದ್ದಿ ಪಡೆದುಕೊಂಡಿದೆ. ಭೀಮಾನದಿಯಿಂದ ಪ್ರಾರಂಭವಾದ ಭವಾನಿ ಉತ್ಸವ ಮೂರ್ತಿ ಮೆರವಣಿಗೆ ಸುಭಾಶ್ಚಂದ್ರ ಬೋಸ್ ವೃತ್ತ, ಶಾಸ್ತಿç ಚೌಕ್ ಮುಖಾಂತರ ಶಿವನಗರದ ಭವಾನಿ ಮಂದಿರದವರೆಗೆ ನಡೆಯಿತು. ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಹೆಂದೆ ಪರಿವಾರ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಗದ್ಗುರು ಮೌನೇಶ್ವರ ದೇವಸ್ಥಾನದ ಅಧ್ಯಕ್ಷ ರಾಜು ಹೆಂದೆ, ಲಕ್ಷ್ಮಣರಾವ್ ಹೆಂದೆ, ಲಕ್ಷ್ಮೀಕಾಂತ ಹೆಂದೆ, ಆನಂದ , ಕೃಷ್ಣ , ವಿಶ್ವನಾಥ ಶಿರವಾಳ, ಚನ್ನಪ್ಪಗೌಡ ಮೋಸಂಬಿ ಸೇರಿದಂತೆ ಹಲವರು ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿದ್ದ ಭಕ್ತರಿಗೆ ಹೆಂದೆ ಪರಿವಾರದಿಂದ ಪ್ರಸಾದ ವಿತರಿಸಿತು. ಹಿಂದು ಸೇವಾ ಸಮಿತಿ ಅಧ್ಯಕ್ಷ ತಿಪ್ಪರಡ್ಡಿ ಸೇರಿದಂತೆ ಹಿಂದು ಸಮಾಜದವರು ಭಾಗವಹಿಸಿದ್ದರು.ಗುರುಮಠಕಲ್ ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ ಬೆಳಿಗ್ಗೆ ವಿಶೇಷ ಯಜ್ಞ ಕಾರ್ಯಕ್ರಮ ನೆರವೇರಿತು. ಸಂಜೆ ಘಂಟಿ ಸ್ಥಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದೆ. ಇನ್ನು ಬಿಡಕಿಕಟ್ಟಾ ಬಡವಣೆಯ ಗಣೇಶ ಮಂದಿರದಲ್ಲಿ ಭವ್ಯ ದೇವಿವಿಗ್ರಹ ಪ್ರತಿಷ್ಠಾಪನೆ ನಡೆಯಿತು. ಇದಕ್ಕು ಮುನ್ನ ಪಟ್ಟಣದ ನಗರೇಶ್ವರ ದೇವಸ್ಥಾನದದಿಂದ ಮೆರವಣೆಗೆ ಮುಖ್ಯ ಬೀದಿಗಳ ಮೂಲಕ ದೇವಸ್ಥಾನ ತಲುಪಿತು. ಮಹಿಳೆಯರು, ಮುಖಂಡರು ಹಾಗೂ ಯುವಕರು ಶ್ರಾದ್ಧ ಭಕ್ತಿಯಿಂದ ಪಾಲ್ಗೊಂಡಿದ್ದರು. ಈ ವೇಳೆ ಎಸ್ ಎಸ್ ಕೆ ಸಮಾಜದ ಗೌರವಾಧ್ಯಕ್ಷ ರಾಮಕಿಶನ್ ರಾವ್ ಗೊಂಗಲೆ, ಅಧ್ಯಕ್ಷ ಚಂದುಲಾಲ್ ಚೌಧರಿ, ಬುಡ್ಡಪ್ಪ ಜನಾರ್ಧನ, ತುಳಸಿರಾಮ್ ಗೊಂಗಲೆ, ಯಶವಂತ ರಾವ್ ಚೌಧರಿ, ಸತೀಶ್ ಜೀತ್ರಿ, ಯುವ ಅಧ್ಯಕ್ಷ ವಿನಾಯಕ ಜನಾರ್ಧನ, ಮಹಿಳಾ ಮಂಡಲ ಅಧ್ಯಕ್ಷೆ ಶೋಭಾ ಬಾಯಿ, ಇಂದುಬಾಯಿ ಮೇಂಗಜಿ, ಅಂಬಿಕಾ ಹೌಜಿ, ರೇಣುಕಾ ಗೊಂಗಲೆ, ಸುಷ್ಮಾ ಚೌಧರಿ, ತೇಜಸ್ವಿನಿ, ವನೀತಾ ಅರಸಿದ್, ವಿಜಯಲಕ್ಷ್ಮಿ ಜನಾರ್ಧನ, ಧನವಂತರಾವ ಕಾಶಿಗಾವ್, ಶಶಿಕಾಂತ ಜೆ, ರಾಮು ಠಾಕೂರ್, ವಿಠ್ಠಲರಾವ ಮಿಸ್ಕಿನ್ ಪೂಜಾರಿ, ವಸಂತರಾವ ಹಬೀಬ್, ನರೇಶ್ ಗೊಂಗಲೆ, ನಾಗೇಶ್ ಚೌಧರಿ, ಸುರೇಶ ಗೊಂಗಲೆ, ತುಕಾರಾಮ ಧಡಂಗೆ, ಅನೀಲ ಜೀತ್ರಿ, ಯಶವಂತ ಮೇಂಗಜಿ, ಮೋಹನ್ ಬುರಬುರೆ, ಭರತ ಜೀತ್ರಿ, ಹೀರಾಲಾಲ್ ಬಸೂದೆ, ಮೋಹನ್ ಚಮಕುರ, ಪವನ್ ಮೇಂಗಜಿ, ನಿತೀನ್ ತಗಡಘರ, ಅಶೋಕ್ ಠಾಕೂರ್, ಹಣಮಂತರಾವ ರಂಗಾಪೂರ, ಜಗದೀಶ್ ಮೇಂಗಜಿ ಸೇರಿದಂತೆ ಸಮಾಜದವರು ಭಾಗಿಯಾಗಿದ್ದರು.ಶಾಂತ ಮಲ್ಲಿಕಾರ್ಜುನ ಶ್ರೀಗಳ ಮೌನಾನುಷ್ಠಾನ : ಶರನ್ನವರಾತ್ರಿ ಹಬ್ಬದ ನಿಮಿತ್ಯ ತಾಲೂಕಿನ ಹೆಡಗಿಮದ್ರಾ ಗ್ರಾಮದ ಶ್ರೀ ಶಾಂತ ಶಿವಯೋಗಿಗಳ‌ ಮಠದಲ್ಲಿ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು 10ನೇ ವರ್ಷದ ಮೌನಾನುಷ್ಠಾನ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀ ಮಠದಲ್ಲಿ ನಿತ್ಯ ಬೆಳಗ್ಗೆ ಶಾಂತ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಪಾರಾಯಣ, ಹೋಮ ಅಷ್ಟೋತ್ತರ ಶತನಾಮಾವಳಿ ಜರುಗಲಿವೆ. ಸಂಜೆ ಶ್ರೀ ಚಕ್ರ ಯಂತ್ರಕ್ಕೆ ಕುಂಕುಮಾರ್ಚನೆ ಜರುಗಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದ್ಗುರುವಿನ ಕೃಪೆಗೆ ಪಾತ್ರರಾಗುವಂತೆ ಮಠದ ವತಿಯಿಂದ ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!