ಕ್ಷೇತ್ರದಲ್ಲಿ ಮಳೆ-ಬೆಳೆ ಸಮೃದ್ಧಿಯಾಗಲಿ | ಸರ್ವರ ಕಷ್ಟ ದೂರವಾಗಲಿ | ಬಿಡಕಿಕಟ್ಟಾ ಮಂದಿರದಲ್ಲಿ ದೇವಿ ದರ್ಶನ ಪಡೆದ ಶಾಸಕ ಶರಣಗೌಡ ಕಂದಕೂರ
ಗುರುಮಠಕಲ್: ದುರ್ಗಾದೇವಿ ಸರ್ವರಿಗೂ ಸನ್ಮಂಗಲವನ್ನು ಕರುಣಿಸಲಿ, ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರ ಹೊಲಗಳಲ್ಲಿ ಸಮೃದ್ಧವಾದ ಬೆಳೆ ಬೆಳೆಯಲಿ ಎಂದು ಶಾಸಕ ಶರಣಗೌಡ ಕಂದಕೂರ ಪ್ರಾರ್ಥಿಸಿದರು.
ಗುರುಮಠಕಲ್ನ ಬಿಡಕಿಕಟ್ಟಾ ಗಣೇಶ ಭವಾನಿ ಮಂದಿರಕ್ಕೆ ಭೇಟಿ ನೀಡಿದ ಶಾಸಕ ಶರಣಗೌಡ ಕಂದಕೂರ ಅವರು, ದುರ್ಗಾದೇವಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯ ಲಭಿಸಲಿ. ರೈತಾಪಿ ವರ್ಗಕ್ಕೆ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಸಮೃದ್ಧಿಯಿಂದ ಸಾಗಲಿ ಎಂದು ದೇವಿಯಲ್ಲಿ ಬೇಡಿಕೊಂಡು, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ಪಟ್ಟಣದ ನಾರಾಯಣಪುರ ಬಡವಣೆಯ ಅಂಬಾಭವಾನಿ ದೇವಸ್ಥಾನದಲ್ಲಿ ಅಷ್ಟಮಿಯಂದು ವಿಶೇಷ ಪೂಜೆ ನೆರವೇರಿತು. ದೇವಸ್ಥಾನಲ್ಲಿ ಪ್ರತಿಷ್ಠಾಪಿಸಲಾದ ದೇವಿ ಮೂರ್ತಿ.
ಈ ವೇಳೆ ಎಸ್ ಎಸ್ ಕೆ ಸಮಾಜದ ಬುಡ್ಡಪ್ಪ ಜನಾರ್ಧನ,ಯುವ ಅಧ್ಯಕ್ಷ ವಿನಾಯಕ ಜನಾರ್ಧನ, ದಶರಥರಾವ ಧಡಂಗೆ, ಧನವಂತರಾವ ಕಾಶಿಗಾವ್, ತುಲಸಿರಾಮ್ ಗೊಂಗಲೆ, ಅಂಬಾದಾಸ ಜೀತ್ರಿ,ಮಲ್ಲಣ್ಣ ಗೌಡ ಕೌಳೂರು, ಶರಣು ಆವುಂಟಿ, ಪ್ರಕಾಶ ನೀರೆಟಿ, ರವಿ ಪಾಟೀಲ್, ಶರಣಪ್ಪ ಹೂಗಾರ್, ನವಾಜರೆಡ್ಡಿ ಪಾಟೀಲ್, ಭಾನು ಪ್ರಕಾಶ, ರಾಮು ಠಾಕೂರ್, ಜಗದೀಶ್ ಶ್ರೀಗಿರಿ, ಆಶನ್ನ ಬುದ್ಧ, ಗುರು ತಲಾರಿ, ಬಾಲರಾಜ್, ರಾಜು ಅರಸಿದ್, ಶ್ರೀನಿವಾಸ ಅರಸಿದ, ಶಿವು ಎಂ.ಟಿ.ಪಲ್ಲಿ ಸೇರೇದಂತೆ ಹಲವರು ಇದ್ದರು.
