ಗುರುಮಠಕಲ್ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಆಚರಣೆ | ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ | ಶರಣಪ್ಪ ಚಿಂತಕುಂಟಾರಿಂದ ವಿಶೇಷ ಉಪನ್ಯಾಸ | ಎಲ್ಹೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಬಸ್ಸಪ್ಪ ಕಾವಲಿ ರಿಂದ ಧ್ವಜಾರೋಹಣ | ಕನ್ನಡಪರ ಸಂಘಟನೆಗಳ ಸಂಭ್ರಮ
ಚಿನ್ನದ ಮೇಲಿನ ಮೋಹ ರನ್ನನ ಮೇಲಿದಿದ್ದರೇ…, ಆಸ್ತಿಯ ಮೇಲಿನ ಮೋಹ ಮಾಸ್ತಿಯ ಮೇಲಿದಿದ್ದರೆ…, ಕೇಶದ ಮೇಲಿನ ಮೋಹ ಕೇಶಿರಾಜನ ಮೇಲಿದಿದ್ದರೆ, ಕನ್ನಡಿಯ ಮೇಲಿನ ಮೋಹ ಕನ್ನಡದ ಮೇಲಿದಿದ್ದರೆ ಎನ್ನ ಕನ್ನಡ ಬಡವಾಗುವ ಬದಲು ಬಂಗಾರವಾಗುತಿತ್ತು….!
ಗುರುಮಠಕಲ್: ಕರ್ನಾಟಕ ರಾಜ್ಯೋತ್ಸವ ಕೇವಲ ಸಂಭ್ರಮಾಚರಣೆಯಲ್ಲ . ಅದು ಕನ್ನಡಿಗರ ಒಗ್ಗಟ್ಟು ,ಸ್ವಾಭಿಮಾನ, ಭಾಷಾಭಿಮಾನ ಹಾಗೂ ನಾಡಿನ ಮೇಲಿನ ಗೌರವವನ್ನು ಸಾರುವ ಮಹತ್ವದ ದಿನವಾಗಿದೆ ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅಭಿಪ್ರಾಯಪಟ್ಟರು.
ಗುರುಮಠಕಲ್ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ ಕರ್ನಾಟಕ ರಾಜೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ನಾಡು ನುಡಿ, ಜಲ ಸಂಸ್ಕೃತಿಯ ರಕ್ಷಣೆಗೆ ಪತಿಯೊಬ್ಬರೂ ಕೈಜೋಡಿಸಬೇಕು ಎಂಬ ಸಂದೇಶ ದೊಂದಿಗೆ ಕಾರ್ಯಕ್ರಮದಲ್ಲಿ ಕನ್ನಡದ ಅಭಿಮಾನವನ್ನು ಮೆರೆದರು.
ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಶರಣಪ್ಪ ಚಿಂತಕುಂಟ, ಕರ್ನಾಟಕ ಏಕೀಕರಣದ ಹಿಂದೆ ಅನೇಕ ಮಹನೀಯರ ಪರಿಶ್ರಮ ತ್ಯಾಗ ಮತ್ತು ಹೋರಾಟವಿದೆ. ವಿಶೇಷವಾಗಿ ಆಲೂರು ವೆಂಕಟರಾವ್ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಾರರ ಕೊಡುಗೆ ಅಪಾರವಾಗಿದೆ ಎಂದರು.
ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ನಮ್ಮ ಸಂಸ್ಕೃತಿ ಪರಂಪರೆ ಇತಿಹಾಸ ಹಾಗೂ ಅಸ್ಥಿತೆಯ ಪ್ರತೀಕವಾಗಿದೆ. ಕನ್ನಡವೇ ನಮ್ಮ ಉಸಿರು ಕನ್ನಡವೇ ನಮ್ಮ ಬದುಕು ಎಂಬ ಭಾವನೆ ಪತಿಯೊಬ್ಬ ಕನ್ನಡಿಗನಲ್ಲೂ ಮೂಡಬೇಕು. ಕನ್ನಡ ನಾಡಿನ ಏಳಿಗೆಗಾಗಿ ಹಾಗೂ ಕನ್ನಡ ಭಾಷೆಯ ಬೆಳವಣಿಗೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶಮಿಸಬೇಕು ಎಂದು ಕರೆ ನೀಡಿದರು.
ಕನ್ನಡಕ್ಕೆ ಸಾವಿರಾರು ವರ್ಷಗಳ ಸಾಹಿತ್ಯ ಪರಂಪರೆಯಿದೆ. ಪಂಪ ರನ್ನ, ಜನ್ಮ, ಬಸವಣ್ಣ, ಅಕ್ಕಮಹಾದೇವಿ, ಕನಕದಾಸರು, ಪುರಂದರದಾಸರು, ಕುವೆಂಪು, ಬೇಂದ್ರೆ, ಶಿವರಾಮ ಕಾರಂತರು ಸೇರಿದಂತೆ ಅನೇಕ ಮಹನೀಯರು ಕನ್ನಡ ಸಾಹಿತ್ಯವನ್ನು ಶೀಮಂತಗೊಳಿಸಿದ್ದಾರೆ. ಕುವೆಂಪು ಅವರು ರಚಿಸಿದ ನಾಡಗೀತೆ ನಮ್ಮೆಲ್ಲರಿಗೂ ನಾಡಿನ ಬಗ್ಗೆ ಅಭಿಮಾನ ಮೂಡಿಸುತ್ತದೆ.
ಇದಕ್ಕೂ ಮೊದಲು ತಾಯಿ ಭುವನೇಶ್ವರಿ ದೇವಿಯ ಭಾವಚಿತಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಗುರುಮಠಕಲ್ ಪುರಸಭೆ ಮುಖ್ಯ ಅಧಿಕಾರಿ ಶರಣಪ್ಪ ಮಡಿವಾಳ ಅರಕಕ ನಿರೀಕ್ಷಕ ದೌಲತ್ ಎನ್ ಕೆ., ಸಂತೋಷ ನೀರೆಟಿ ಡಾ. ನೀಲಾಂಬಿಕಾ, ಶಶಿಕಿರಣ ಹಜಾರೆ, ತಾ.ಪಂ. ನಿರ್ದೇಶಕ ರಾಮಚಂದರಾವ ಬಸೂದೆ, ಮಲ್ಲಿಕಾರ್ಜುನ ಸಂಗ್ವಾರ್, ಬಸರೆಡ್ಡಿ ಎಂ. ಟಿ ಪಲ್ಟಿ , ಕರವೇ ಅಧ್ಯಕ್ಷ ಶರಣಪ್ಪ ಕೆ ಎಲ್ಹೇರಿ, ರವೀಂದ ಚವಾಣ್, ನಾರಾಯಣರೆಡ್ಡಿ ಪಾಟೀಲ್, ಬಾಲಪ್ಪ ಸಿರಿಗೆ, ಅರಣ್ಯ ಇಲಾಖೆಯ ಭೀಮಾಶಂಕರ, ನರಸರೆಡ್ಡಿ ಗೆಡೆಸೂಗೂರು, ರಾಜೇಂದ್ರ ಕಲಾಲ್, ಮಹೇಶ ಕಲಾಲ್, ಅಶೋಕ ಶನಿವಾರಂ ಇತರರು ಇದ್ದರು.
ಎಲ್ಹೇರಿ ಸರ್ಕಾರಿ ಪ್ರೌಢ ಶಾಲೆ: ಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಬಸ್ಸಪ್ಪ ಕಾವಲಿ ಅವರು ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಹಿರಿಯ ಶಿಕ್ಷಕ ಹುಸೇನಪ್ಪ ಸಕ್ರಿ ಮಾತನಾಡಿ, 1973 ನ.1ರಂದು ಕರ್ನಾಟಕ ಏಕೀಕರಣ ಆಯಿತು. ಕನ್ನಡದ ಕಂಪು ಪಸರಿಸಲು ಸಾಕಷ್ಟು ಹೋರಾಟ ಮಾಡಿದ ಮಹನೀಯರ ಸ್ಮರಿಸಿ, 8 ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು ಕನ್ನಡದ ಹೆಮ್ಮೆ. ಕನ್ನಡ ಉಳಿಸಿ, ಬೆಳೆಸುವ ಮೂಲಕ ಇತರೆ ಭಾಷೆಗಳನ್ನು ಗೌರವಿಸೋಣ ಎಂದರು.
ಶಿಕ್ಷಕ ಬಸವರಾಜ ಮಾತನಾಡಿದರು. ಆಗಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರ ಅವಧಿಯಲ್ಲಿ ಕರ್ನಾಟಕ ನಾಮಕರಣ ಆಯಿತು ಎಂದು ವಿವರಿಸಿದರು. ಶಾಂತಪ್ಪ ಯಾಳಗಿ ಮಾತನಾಡಿ, ಕನ್ನಡ ಭಾಷೆಯ ಶ್ರೀಮಂತಿಕೆಯ ಕುರಿತು ವಿವರಿಸಿದರು.
1956 ನ.1ರಂದು ಕನ್ನಡ ಮಾತನಾಡುವ ಪ್ರಾಂತ್ಯ ಒಂದಾಗಿ ಮೈಸೂರು ರಾಜ್ಯ ರಚನೆಯಾಯಿತು. ಇದಕ್ಕೆ ಆಲೂರು ವೆಂಕಟರಾಯರು ಸೇರಿ ಹಲವರು ಶ್ರಮಿಸಿದ್ದಾರೆ ಎಂದರು. 1973 ನ.1 ಅಖಂಡ ಕರ್ನಾಟಕ ನಾಮಕರಣ ಆಯಿತು ಎಂದು ಕನ್ನಡ ಶಿಕ್ಷಕಿ ಶ್ರೀದೇವಿ ಹಿರೇಮಠ ಕನ್ನಡದ ಐತಿಹಾಸಿಕ ಹಿರಿಮೆಯನ್ನು ವಿವರಿಸಿದರು.
ಎಐ ಅತಿಥಿ ಶಿಕ್ಷಕ ಅನೀಲ ಕುಮಾರ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬ ಮಗುವೂ ಶಾಲಾ ಆವರಣದಲ್ಲಿ ಕನ್ನಡದಲ್ಲಿಯೇ ಮಾತನಾಡು ಸಂಕಲ್ಪ ಮಾಡುವ ಕಿವಿ ಮಾತು ಹೇಳಿದರು.
ಇದೇ ವೇಳೆ ಶಾಲೆಯಲ್ಲಿ 2026ರ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ ಅನಿತಾ ಸಾಬಯ್ಯ ಅವರಿಗೆ ಕರವೇ ಅಧ್ಯಕ್ಷ ಶರಣಪ್ಪ ಕೆ ಎಲ್ಹೇರಿ ಅವರಿಂದ ಕೊಡ ಮಾಡುವ ಪ್ರಶಸ್ತಿ ವಿತರಣೆ ಮಾಡಲಾಯಿತು. ಹಿರಿಯ ಶಿಕ್ಷಕ ಟಿ. ರಾಮುಲು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿ, ನಿರೂಪಿಸಿದರು. ಎಸ್ಡಿಎಂಸಿ ಸದಸ್ಯ ಮೌಲಾನ ಸಾಬ್, ಅತಿಥಿ ಶಿಕ್ಷಕಿ ಮುಸ್ಕಾನ್, ಅಶ್ವಿನಿ, ಅನಂತಮ್ಮ ಇದ್ದರು.
