ಶಾಸಕ ಶರಣು ಸಲಗರರಿಂದ ಗೋವು ಕಟ್ಟಿದ್ದ ಅಡ್ದೆ ಮೇಲೆ ದಾಳಿ | ಕ್ಷೇತ್ರದಲ್ಲಿ ಗೋ ಹತ್ಯೆ ನಡೆಯಲು ಬಿಡುವುದಿಲ್ಲ ಎಂದಿದ್ದ ಶಾಸಕ | ಕೊಟ್ಟ ಮಾತಿನಂತೆ ಸ್ವತಃ ಪೊಲೀಸರ ಜೊತೆ ಗ್ರೌಂಡ್ ಗಿಳಿದು ರಕ್ಷಣೆ | ಮಾದರಿ ನಡೆಗೆ ಎಲ್ಲೆಡೆ ಪ್ರಶಂಸೆ 

ಬೀದರ : ತಮ್ಮ ಕ್ಷೇತ್ರದಲ್ಲಿ ಗೋವುಗಳ ಹತ್ಯೆಯನ್ನು ನಡೆಯಲು ಬಿಡುವುದಿಲ್ಲ. ಎಲ್ಲಿಯಾದರೂ ಗೋ ಹತ್ಯೆ ನಡೆಯುತ್ತಿದೆ ಎಂದು ಮಾಹಿತಿ ತಿಳಿದರೆ ನೇರವಾಗಿ ತಮಗೆ ತಿಳಿಸಿ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದ ಮೂಲಕ ಜಾಗೃತಿ ಮೂಡಿಸಿದ್ದರು.

ಕೊಟ್ಟ ಮಾತಿನಂತೆ ಬಸವಕಲ್ಯಾಣದಲ್ಲಿ ಅಡ್ಡೆಯಲ್ಲಿ ಕಟ್ಟಿ ಹಾಕಿದ್ದ ಅಂದಾಜು 40 ಗೋವುಗಳ ರಕ್ಷಣೆ ಮಾಡುವ ಮೂಲಕ ಶಾಸಕರು ದಿಟ್ಟತನ ಮೆರೆದಿದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ಅಲ್ಲಿನ ಜನರಿಗೆ “ನೀವು ಗೋವಿನ ಹಾಲು ಕುಡಿದಿಲ್ಲವೇ, “ಈ ಆಕಳನ್ನು ರಕ್ಷಿಸದೇ ಇರಲು ಸಾಧ್ಯವೇ“, ಅಂ…ಷ್ ಇದನ್ನು ಕಡಿಯಲು ಬಿಡಬೇಕೇನ್ರೀ… ಎಂಬಿತ್ಯಾದಿ ಕರುಳು ಹಿಂಡುವ ನೋವಿನ ಮಾತುಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಶಾಸಕರ ಗೋ ಪ್ರೇಮ, ಕಾಳಜಿ ಕುರಿತು ಎಲ್ಲೆಡೆ ಹಿಂದು ಪರ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ವರ್ಣನೆ ಮಾಡುತ್ತಿದ್ದಾರೆ.

ಸಲಗರ ಇತರರಿಗೆ ಮಾದರಿಯಾಗಿದ್ದಾರೆ ಎಂಬಿತ್ಯಾದಿ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಬಲಿಯಾಗುತ್ತಿದ್ದ ಅಮಾಯಕ ಗೋವುಗಳ ಪ್ರಾಣ ರಕ್ಷಣೆ ಮಾಡಿರುವ ಕಾರ್ಯ ಶ್ಲಾಘನೀಯ.

Spread the love

Leave a Reply

Your email address will not be published. Required fields are marked *

error: Content is protected !!