ದೇವಸ್ಥಾನ ಅಧ್ಯಕ್ಷ ಪ್ರವೀಣ ಪಟೇಲ್ ಮಾಹಿತಿ | ಬುದ್ದಿವಂತಿಕೆಯ ಪ್ರತೀಕ ಕಾರ್ಯಕ್ರಮ

ಗುರುಮಠಕಲ್ :  ಪಟ್ಟಣದ ಲಕ್ಷ್ಮೀನಗರ ಬಡಾವಣೆಯಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅಗಷ್ಟ 6 ರಂದು ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಸಮೀತಿ ಅಧ್ಯಕ್ಷ ಪ್ರವೀಣ ಪಟೇಲ್ ತಿಳಿಸಿದ್ದಾರೆ.

ಶ್ರಾವಣಮಾಸದ ನಿಮಿತ್ಯ ವಿದ್ಯೆ ಮತ್ತು ಬುದ್ದಿವಂತಿಕೆಯ ಪ್ರತೀಕವಾದ ಅಕ್ಷರಾಭ್ಯಾಸ ಕಾರ್ಯಕ್ರಮವು ಮಳಖೇಡ ಮೂಲಾಧಾರ ಮಠದ ಶ್ರೀ 108 ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಪಾಲಕರು ಈವಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದ್ದಾರೆ. ಪುರಸಭೆ ಸದಸ್ಯ ಬಾಲಪ್ಪ ದಸರಿ, ಉದ್ಯಮಿ ಶಿವಕುಮಾರ ಜಾಡರ್, ಆನಂದ ನೀರಟ್ಟಿ, ಶಿಕ್ಷಕಿ ವಿಜಯಲಕ್ಷ್ಮಿ ಸೇರಿದಂತೆ ದೇವಸ್ಥಾನ ಸಮೀತಿಯ ಬಸ್ಸಪ್ಪ ಸಂಜನೋಳ, ಮಲ್ಲಿಕಾರ್ಜುನ ಕಾಕಲವಾರ, ಗೋಪಾಲ ಕಂದೂರ ವೀರಪ್ಪ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!