ಬೋರಬಂಡ ದಲ್ಲಿ ವೈಕುಂಠ ಏಕಾದಶಿ ಶ್ರೀಲಕ್ಷ್ಮಿ ತಿಮ್ಮಪ್ಪ ನ ದರ್ಶನ ಪಡೆದ ಭಕ್ತರು
ಗುರುಮಠಕಲ್: ದೇವರ ದರ್ಶನದಿಂದ ಮಾನವನು ತನ್ನ ಜೀವನದಲ್ಲಿ ಮಾನಸಿಕ ನೆಮ್ಮದಿ ಪಡೆಯಲು ಮತ್ತು ಅಧ್ಯಾತ್ಮ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅಭಿಪ್ರಾಯಪಟ್ಟರು.
ಬೋರಬಂಡ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಉತ್ತರದ್ವಾರವನ್ನು ಉದ್ಘಾಟಿಸಿ, ದೇವರ ದರ್ಶನ ಪಡೆದು ಮಾತನಾಡಿದ ಅವರು ಗಡಿಭಾಗದ ಈ ಪ್ರದೇಶದಲ್ಲಿ ಪೌರಾಣಿಕ ಹಿನ್ನಲೆಯುಳ್ಲ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವರ ದರ್ಶನ ಪಡೆದು ಸಂತೋಷವಾಗಿದೆ. ನರೇಂದ್ರ ರಾಠೋಡ ಅವರು ದೇವಸ್ಥಾನದ ಅಭಿವೃದ್ಧಿಗೆ ತುಂಬ ಶ್ರಮಿಸಿದ್ದಾರೆ ಎಂದರು.
ಈ ದೇವಾಲಯವನ್ನು ಆಧುನಿಕ ರೀತಿಯಲ್ಲಿ ಜೀರ್ಣೋದ್ಧಾರ ಮಾಡುವ ಮೂಲಕ ದೇವಾಲಯಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ದೈವಿಯ ಅನುಭವ ನೀಡುತ್ತದೆ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು. ಸುತ್ತಮುತ್ತಲಿನ ಪ್ರಕೃತಿಯ ಮಡಿಲಲ್ಲಿರುವ ಈ ದೇವಾಲಯವು ದೈನಂದಿನ ಜಂಜಾಟಗಳಿಂದ ಮಾನಸಿಕ ನೆಮ್ಮದಿ ನೀಡುತ್ತದೆವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಸ್ಥಾನದ ವ್ಯವಸ್ಥಾಪಕ ನರೇಂದ್ರ ರಾಠೋಡ ಅವರು ಯಾದಗಿರಿ ಶಾಸಕ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರಿಗೆ ಸ್ವಾಗತಿಸಿದರು. ಶ್ರೀ ಮಹಾವಿಷ್ಣುವಿನ ಪ್ರೀತಿಗೆ ಪಾತ್ರರಾಗಲು ಪೌರಾಣಿಕ ಹಿನ್ನಲೆಯುಳ್ಳ ವೈಕುಂಠ ಏಕಾದಶಿ ನಿಮಿತ್ಯಭಕ್ತರು ಉತ್ತರದ್ವಾರದ ಮೂಲಕ ದೇವರ ದರ್ಶನ ಪಡೆದರು.
ವೈಕುಂಠ ಏಕಾದಶಿ ನಿಮಿತ್ಯ ದೇವಸ್ಥಾನದಲ್ಲಿ ನಡೆದ ವಿವಿಧ ಪೂಜಾ ಸೇವೆಗಳಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವರು ಬೋರಬಂಡಾ ಗ್ರಾಮದ ಕ್ಷೇತ್ರನಾಥನಾಗಿ ಭಕ್ತರ ಮನೋಭಿಷ್ಟಗಳನ್ನು ಪೂರ್ತಿಗೊಳಿಸಿ ಭಕ್ತರ ಆಪತ್ಭಾಂಧವ ನಾಗಿದ್ದಾನೆ ಎಂದು ದೇವಸ್ಥಾನದ ವ್ಯವಸ್ಥಾಪಕ ನರೇಂದ್ರ ರಾಠೋಡ ಹೇಳಿದರು
ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವರಿಗೆ ವಿವಿಧ ಸೇವೆಗಳ ಜೊತೆಗೆ ವಿಶೇಷ ಅಭಿಷೇಕ ಪೂಜೆ,ಮಹಾಮಂಗಳಾರತಿ ಸೇವೆಗಳು ನಡೆದವು. ಸಾಯಂಕಾಲ ವಿಷ್ಣು ಸಹಸ್ರನಾಮ ಪಾರಾಯಣ,ಪಲ್ಲಕ್ಕಿ ಸೇವೆ,ಅಷ್ಟಾವಧಾನ ಸೇವೆಗಳು ವಿಜೃಂಬಣೆಯಿಂದ ನಡೆದವು. ವಿವಿಧ ಗ್ರಾಮಗಳ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು.
