ಪ.ಜಾ.ಪ.ಪಂ. ಬಡಾವಣೆಯಲ್ಲಿ ಪೊಲೀಸರ ಸಭೆ | ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ| ಸಮಾಜ ಶಾಂತಿಗಾಗಿ ಪೊಲೀಸರೊಂದಿಗೆ ಜನರ ಸಹಕಾರ ಅಗತ್ಯ :  ಎಸ್ಪಿ  ಪೃಥ್ವಿಕ್ ಶಂಕರ

ಗುರುಮಠಕಲ್: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜನರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹಾರಿಸಲು ಪೊಲೀಸ್‌ರು ಜನಸ್ನೇಹಿ ಆಗಿರಲು ಜನರ ಸಹಕಾರ ಅಗತ್ಯವಾಗಿದೆ ಎಂದು ಯಾದಗಿರಿ ಎಸ್‌ಪಿ ಪೃಥ್ವಿಕ್ ಶಂಕರ ತಿಳಿಸಿದರು. ಪಟ್ಟಣದ ಅಂಬೇಡ್ಕರ್ ನಗರ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ ಪ.ಜಾತಿ ಮತ್ತು ಪ.ಪಂ ಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ರಸ್ತೆ ಸುರಕ್ಷತೆ ಕಾಪಾಡಿಕೊಳ್ಳಲು ದ್ವಿಚಕ್ರ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಮನೆಕಳ್ಳತನ ಆಗದಂತೆ ಮನೆಯ ಮಾಲೀಕರು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಹಾಗೂ ಸೈಬರ್ ಅಪರಾಧ ಬಗ್ಗೆ ಅರಿವು ಇರಬೇಕು ಎಂದರು.

ಸಮಾಜದಲ್ಲಿ ಯಾವುದೇ ಅಪರಾಧಗಳು ನಡೆಯದಂತೆ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕಾಗಿದೆ. ದಲಿತರಿಗೆ ಯಾವುದೇ ತೊಂದರೆ ಯಾದರೆ ನಮ್ಮ ಪೊಲೀಸ ಇಲಾಖೆ ನಿಮ್ಮ ಜತೆಗೆ ಇದೆ. ಕಾನೂನು ನಿಮಗೆ ಸುರಕ್ಷತೆ ನೀಡುತ್ತದೆ ಎಂದು ತಿಳಿಸಿದರು. ಸಮುದಾಯದ ಪ್ರಮುಖರು ಸಮಸ್ಯೆಗಳ ಕುರಿತು ಗಮನಕ್ಕೆ ತಂದರು.ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮ: ಮನೆ ಮನೆಗೆ ಪೊಲೀಸ್ ಸೇವೆ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಲು ಪೊಲೀಸರಿಗೆ ನೆರವಾಗಲಿದೆ ಎಂದು ಯಾದಗಿರಿ ಎಸ್.ಪಿ ಪೃಥ್ವಿಕ್ ಶಂಕರ ಹೇಳಿದರು.

ಗುರುಮಠಕಲ್ ಪೊಲೀಸ್ ಠಾಣೆಯಿಂದ ಸೋಮವಾರ ಏರ್ಪಡಿಸಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಜನರಲ್ಲಿ ಸುರಕ್ಷತಾ ಭಾವ ಸೃಷ್ಟಿಯಾಗುತ್ತದೆ’ ಎಂದರು.

ಜನರು ಪೊಲೀಸ್ ಠಾಣೆಗೆ ಹೋಗುವುದನ್ನು ಯಾರೂ ಅಪೇಕ್ಷಿಸುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ಆಡಳಿತ ಸ್ನೇಹಿಯಾಗಿಸಲು ಇಲಾಖೆ ಮುಂದಾಗಿದೆ. ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಆತಂಕ ದೂರ ಮಾಡಲು ಸ್ಥಳೀಯ ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸಲಿದ್ದಾರೆ’ ಎಂದರು.ಈ ಕಾರ್ಯಕ್ರಮದ ಮೂಲಕ ಕೆಲವು ಮನೆಗಳ ಸಮೂಹ ರಚಿಸಿ, ಪ್ರತಿ ಬೀಟ್ ಪೊಲೀಸ್‌ಗೆ ಆಯಾ ಜವಾಬ್ದಾರಿ ನೀಡಿ, ಸಾರ್ವಜನಿಕರೊಂದಿಗೆ ಸಂವಾದ ಮಾಡಲಾಗುತ್ತದೆ. ಓಣಿಗೆ ಪೊಲೀಸರು ಬಂದು ಮಾತನಾಡುತ್ತಾರೆ. ಸಮಸ್ಯೆಗಳಿದ್ದರೆ ಠಾಣಾ ವ್ಯಾಪ್ತಿ, ಉಪವಿಭಾಗ ಹೀಗೆ ವಿವಿಧ ಹಂತಗಳಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮನೆಯಲ್ಲಿದ್ದ ಜನರಿಗೆ ಮಾಹಿತಿ ನೀಡಿದರು.

ಇದೆ ವೇಳೆ ಡಿ.ವೈ.ಎಸ್.ಪಿ ಸುರೇಶ, ಗುರುಮಠಕಲ್ ಪಿ.ಐ ವೀರಣ್ಣ ದೊಡ್ಡಮನಿ, ತಾಲೂಕ ಪಂಚಾಯತ್ ಇ.ಓ ಅಮರೇಶ್ ಪಾಟೀಲ್, ಉಪತಹಸೀಲ್ದಾರ್ ನರಸಿಂಹಸ್ವಾಮಿ, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಮರೆಪ್ಪ, ಪುರಸಭೆ ಸದಸ್ಯ ಬಾಬು ತಲಾರಿ, ಹಿರಿಯ ಮುಖಂಡರಾದ ಭೀಮಶಪ್ಪ ಗೂಡಿಸೆ, ಹಣಮಂತ ಶನಿವಾರಂ, ಅಶೋಕ ಶನಿವಾರಂ, ರಂಗ ಸ್ವಾಮಿ, ಅನಂತಪ್ಪ ಮುಕುಡಿ, ಮಾಣಿಕ್ ಮುಕುಡಿ, ಲಾಲಪ್ಪ ತಲಾರಿ, ಕಿಷ್ಟಪ್ಪ, ವೆಂಕಟಪ್ಪ, ಮಲ್ಲಿಕಾರ್ಜುನ, ವೀರಪ್ಪ, ಬಂದೆಪ್ಪ, ಮಧು, ಪೊಲೀಸ್ ಸಿಬ್ಬಂದಿಗಳಾದ ಎ.ಎಸ್.ಐ ಭೀಮಶಪ್ಪ ಕಾನಗಡ್ಡ, ಶರಣಪ್ಪ ಪಸರ್, ಶಿವರಾಮ್ ರೆಡ್ಡಿ, ಶ್ರೀಶೈಲ, ರೇಣುಕರಾಜ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!