ಯಾವುದೇ ಅವ್ಯವಹಾರ ನಡೆದಿಲ್ಲ | ಯಾವ ತನಿಖೆ ನಡೆಸಿದರೂ ಎಲ್ಲಾ ದಾಖಲೆ ತೋರಿಸುತ್ತೇವೆ | ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಭಕ್ತರ ಮನಸ್ಸಿಗೆ ಘಾಸಿ | ಟ್ರಸ್ಟ್ ಸದಸ್ಯರ ಸಭೆ ಕರೆದು ಮುಂದಿನ ಕ್ರಮದ ನಿರ್ಧಾರ| ಜಗಜೀವನರೆಡ್ಡಿ, ಪಿ.ಕಿಷ್ಟಪ್ಪ ಹೇಳಿಕೆ
ಸೇಡಂ /ಗುರುಮಠಕಲ್: ಯಾನಗುಂದಿಯ ಮಾತಾ ಮಾಣಿಕೇಶ್ವರಿ ಅಮ್ಮನವರ ಆಶ್ರಮಕ್ಕೆ ಕಳಂಕ ತರಲು ಪ್ರಯತ್ನಿಸುತ್ತಿರುವುದು ವಿಷಾದಕರ ಎಂದು ಟ್ರಸ್ಟ್ ಸದಸ್ಯ ಜಗಜೀವನರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಸೇಡಂ ತಾಲೂಕಿನ ಯಾನಗುಂದಿ ಸೂರ್ಯನಂದಿ ಬೆಟ್ಟದ ಆಶ್ರಮದಲ್ಲಿ ಸುದ್ದಿಘೋಷ್ಠಿ ಯಲ್ಲಿ ಮಾತನಾಡಿ ಅವರು, ಕೆಲವು ಈ ಹಿಂದೆ ಟ್ರಸ್ಟ್ ನಲ್ಲಿದ್ದವರು, ಆಸ್ತಿಗಾಗಿ ಸಂಚಿಕೆ ರೂಪಿಸುತ್ತಿರುವ, ಟ್ರಸ್ಟ್ ನಲ್ಲಿ ಸದಸ್ಯತ್ವ ಸಿಗದ ಕೆಲವರು ಷಡ್ಯಂತ್ರ ನಡೆಸುತ್ತಿರುವುದು ಇಡೀ ಭಕ್ತರ ಮನಸ್ಸು ಘಾಸಿಗೊಳಿಸುತ್ತಿದೆ ಎಂದರು.
ಆಶ್ರಮದ ಅಧ್ಯಕ್ಷ ಶಿವಯ್ಯ ಸ್ವಾಮಿ ಅವರ ಕುರಿತು ಅವಹೇಳನ ಶಬ್ದಗಳಿಂದ ನಿಂದಿಸುತ್ತಿರುವುದು ನಮ್ಮ ಟ್ರಸ್ಟ್ ಖಂಡಿಸುತ್ತದೆ. ಟ್ರಸ್ಟ್ ನಲ್ಲಿ ಅವ್ಯವಹಾರ ಆರೋಪಿಸಿ ತನಿಖೆ ನಡೆಸಲು ನಮ್ಮ ಅಭ್ಯಂತರವಿಲ್ಲ. ನಾವು ಎಲ್ಲವನ್ನು ಪಾರದರ್ಶಕವಾದ ಲೆಕ್ಕಾ ಇಟ್ಟಿದ್ದೇವೆ ಎಂದರು.
ಶಿವಯ್ಯ ಸ್ವಾಮಿ ಅವರು 1992 ರಿಂದ ಆಶ್ರಮಕ್ಕೆ ಸೇವೆ ಸಲ್ಲಿಸಿ ಎಲ್ಲವನ್ನು ತ್ಯಾಗ ಮಾಡಿರುವ ತ್ಯಾಗಮಯಿ ಆಗಿದ್ದಾರೆ. ಅಮ್ಮನವರೇ ಶಿವಯ್ಯ ಸ್ವಾಮಿ ಅವರನ್ನು ಜೇಷ್ಠ ಭಕ್ತ ಎಂದು ಘೋಷಿಸಿದ್ದಾರೆ. ಪಾರ್ವತಿ, ವಿನಾಯಕ ಹೆಗೆಯೋ ಶಿವಯ್ಯ ತನಗೆ ಹಾಗೆ ಎಂದು ಅಮ್ಮನವರೇ ಹೇಳಿದ ವಿಡಿಯೋ ಚಿತ್ರೀಕರಣ ಇದೆ. ಸಾವಿರಾರು ಭಕ್ತರ ಸಮೂಹ ಮಧ್ಯದಲ್ಲಿ ಅಮ್ಮನವರು ಶಿವಯ್ಯ ಕುರಿತು ಸ್ಪಷ್ಟವಾಗಿ ಹೇಳಿದ್ದಾರೆ, ಅಂದ ಮೇಲೆ ಅವರ ಬಗ್ಗೆ ಇಲ್ಲಸಲ್ಲದ್ದು ಹೇಳುವುದು ಸರಿಯಲ್ಲ ಎಂದರು.
ಟ್ರಸ್ಟ್ ಸದ್ಯಸ ಪಿ. ಕಿಷ್ಟಪ್ಪ ಮಾತನಾಡಿ, ಪಟ್ಟಭದ್ರ ಹಿತಾಶಕ್ತಿಗಳು ತಮ್ಮ ಸ್ವಹಿತಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಅಮ್ಮನವರ ತತ್ವ ಗಳ ಕುರಿತು ಪ್ರಚಾರ ಮಾಡುವುದು ಬಿಟ್ಟು ಮೊದಲುನಿಂದಲೂ ಶಿವಯ್ಯ ಸ್ವಾಮಿ ಮೇಲೆ ನಿಂದನೆ ಮಾಡುತ್ತ ಬಂದಿದ್ದಾರೆ. ಅಮ್ಮನವರು ಇದ್ದಾಗಲೇ ಇವರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.
ಕೋಟಿಲಿಂಗ ಸ್ಥಾಪನೆ ಅಮ್ಮನ ಸಂಕಲ್ಪ: ಹೋರಾಟ ಮಾಡುವವರು ಈ ಹಿಂದಿನಿಂದಲೂ ಅಮ್ಮನ ಮಾರ್ಗದಲ್ಲಿಯೇ ನಡೆದರಾಗಿದ್ದಾರೆ, ಕೋಟಿಲಿಂಗ ಸ್ಥಾಪನೆ ಅಮ್ಮನ ಸಂಕಲ್ಪ ಎಂಬೂದು ಎಲ್ಲರಿಗೂ ಗೊತ್ತಿರುವ ವಿಷಯ ಅದರಂತೆ ಶಿವಯ್ಯ ಸ್ವಾಮಿ ಹಾಗೂ ಟ್ರಸ್ಟ್ ಈ ಕಾರ್ಯವನ್ನು ಮುನ್ನಡೆಸಿ ಅಮ್ಮನವರ ಸಂಕಲ್ಪ ಈಡೇರಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಟ್ರಸ್ಟ್ ಸದ್ಯಸರಾದ ಜ್ಞಾನೇಶ್ವರ್, ರಾಮಕೃಷ್ಣ, ಶಶಿಕಲಾ, ತುಳಜಮ್ಮಾ, ಅನಂತಪ್ಪ ಯಾದಲಾಪುರ್,ರವಿ ಇಟಕಾಲ, ನರೇಂದ್ರ ಇಟಕಾಲ್, ಬ್ರಹ್ಮ ನಂದ ರೆಡ್ಡಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
