ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಶಾಸಕ ಶರಣಗೌಡ ಕಂದಕೂರ | ಜನರ ಸಮಸ್ಯೆ ಆಲಿಕೆ | ತಕ್ಷಣ ಸ್ಪಂದಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು
ಗುರುಮಠಕಲ್ : ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಶಿಕ್ಷಣ ಅಗತ್ಯವಿದೆ. ಹಾಗಾಗಿ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿ ಅಗತ್ಯ ಸೌಲಭ್ಯ ಒದಗಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಯಾದಗಿರಿ 2025-26 ನೇ ಸಾಲಿನ ಸಿ.ಎಮ್.ಐ.ಡಿ.ಪಿ. ಯೋಜನೆಯಡಿಯಲ್ಲಿ ಮಂಜೂರಾದ ಗುರುಮಠಕಲ್ ಮತಕ್ಷೇತ್ರದ ಅರಕೇರಾ (ಬಿ) ಗ್ರಾಮದ ಕೊರಮ ಅಲೆಮಾರಿ ಸಮುದಾಯ ಭವನ ನಿರ್ಮಾಣ 20 ಲಕ್ಷ, ವೆಂಕಟೇಶ ನಗರ ತಾಂಡಾದ ದಾಮಾಸಾಬ್ ದೇವಸ್ಥಾನ ಶಿಖರ ನಿರ್ಮಾಣಕ್ಕಾಗಿ 10 ಲಕ್ಷ, ಬಂದಳ್ಳಿ ಗ್ರಾಮದ ಗುಂಬಲಮ್ಮ ದೇವಸ್ಥಾನ ಅಭಿವೃದ್ದಿ 10 ಲಕ್ಷ, ಬುದೂರು ಗ್ರಾಮದಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿಗಳ ನಿರ್ಮಾಣ ಕಾಮಗಾರಿ 10 ಲಕ್ಷ, ಕಾಕಲವಾರ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ಅಭಿವೃದ್ದಿ 10 ಲಕ್ಷ, ಗುರುಮಠಕಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದುರಸ್ತಿ ಮತ್ತು ಸುಣ್ಣ ಬಣ್ಣ 30 ಲಕ್ಷದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕಾಕಲವಾರ ಗ್ರಾಮದ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಎರಡು ದಿನದಲ್ಲಿ ಕಲ್ಪಿಸಿ, ಫೋಟೋ ಕಳಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಬೂದುರು ಗ್ರಾಮದ ಕಾಮಗಾರಿ ಗುಣಮಟ್ಟದಿಂದ ನಿರ್ವಹಣೆ ಮಾಡಿ ತುರ್ತಾಗಿ ಮುಗಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು. ಸ್ಥಳೀಯರು ಸಹಕಾರ ಮಾಡಲು ಹೇಳಿದರು.
ಮಳೆಗಾಲ ಆರಂಭವಾಗಲಿದ್ದು, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿ, ನೀರಿನ ವ್ಯವಸ್ಥೆ ಕಲ್ಪಿಸಲು ತಿಳಿಸಿದರು. ಆರ್ ಐ, ವಿ,ಎಗಳು ಕೇಂದ್ರ ಸ್ಥಾನದಲ್ಲಿ ಇದ್ದು ಮಳೆ ಹಾನಿ ಇತರೆ ಜನರ ಸೇವೆ ನೀಡಬೇಕು ಎಂದು ತಿಳಿಸಿದರು.
ಬೂದುರು ಗ್ರಾಮದ ಶಾಲೆಯ ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸಿದರು. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಶಿಕ್ಷಣದ ವಾತಾವರಣ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಇರಬೇಕು. ಸಮಸ್ಯೆ ಏನಾದರೂ ಇದ್ದರೆ ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸಿದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಶುಭಾಷಶ್ಚಂದ್ರ ಕಟಕಟಿ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಪ್ರಾಚಾರ್ಯ ಪ್ರೊ.ಪುರುಷೋತ್ತಮ ಜೋಶಿ, ಅಧಿಕಾರಿ ಬನ್ನಪ್ಪ, ಗ್ರೇಡ್ 2 ತಹಶೀಲ್ದಾರ್ ನರಸಿಂಹ ಸ್ವಾಮಿ, ತಾ.ಪಂ.ಅಧಿಕಾರಿ ರಾಮಚಂದ್ರ ಬಸೂದೆ, ವಿಶ್ವನಾಥ್ ರೆಡ್ಡಿ ದೇಶಮುಖ್, ಪ್ರಕಾಶ ನೀರೆಟಿ, ಬಸ್ಸಣ್ಣ ದೇವರಹಳ್ಳಿ, ಅಶೋಕ ಕಲಾಲ್, ನವಾಜರೆಡ್ಡಿ ಪಾಟೀಲ್, ಬಾಲಪ್ಪ ದಾಸರಿ, ರವಿ ಗವಿನೋಳ, ಹಣಮಂತ, ಸಿದ್ರಾಮರೆಡ್ಡಿ ಎಂ.ಟಿ.ಪಲ್ಲಿ, ಭಾನುಪ್ರಕಾಶ್ ಮೇದ ಸೇರಿದಂತೆ ಸ್ಥಳೀಯ ನಾಯಕರು, ಅಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.
