ಪತ್ರಕರ್ತರಿಗೆ ಸ್ವಾಗತ ಮತ್ತು ಬೀಳ್ಕೋಡಿಗೆ ಸಮಾರಂಭ | ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಮೋಘ
ಯಾದಗಿರಿ: ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಮೋಘವಾಗಿದೆ. ಎಲ್ಲ ವೃತ್ತಿಗಿಂತಲೂ ಪವಿತ್ರವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಕರ್ತ ಪ್ರವೀಣಕುಮಾರ್ ಅವರ ಬೀಳ್ಕೊಡಿಗೆ ಮತ್ತು ಪತ್ರಕರ್ತ ಮಲ್ಲಿಕಾರ್ಜುನ ನಾಲವಾರ ಅವರ ಸ್ವಾಗತ ಸಮಾರಂಭದಲದಲಿ ಮಾತನಾಡಿದರು.
ಪತ್ರಿಕೋದ್ಯಮದ ಮೌಲ್ಯಗಳನ್ನು ಕಾಪಾಡುವುದು ಅಗತ್ಯವಿದೆ. ಇದನ್ನು ಎಲ್ಲ ಪತ್ರಕರ್ತರು ಗಂಭೀರವಾಗಿ ಪರಿಗಣಿಸಬೇಕು. ನಿರ್ಲಕ್ಷ್ಯ ವಹಿಸಿದರೇ ಸಮಾಜದ ಮೇಲೆ ವ್ಯತಿರಿಕ್ತವಾದ ಪರಿಣಾಮ ಭೀರುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಪತ್ರಕರ್ತ ಪ್ರವೀಣಕುಮಾರ್ ಮಾತನಾಡಿ, ಪತ್ರಕರ್ತರಾದವರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿ, ಪರಿಶೀಲಿಸಿ ಸುದ್ದಿ ಮಾಡಿದರೇ ಅದು ನೈಜ ವರದಿಯಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದರು.
ಯಾದಗಿರಿ ಈ ಜಿಲ್ಲೆ ನಿಜವಗಿಯೂ ಎಲ್ಲ ರೀತಿಯಿಂದಲ್ಲೂ ಶ್ರೀಮಂತಿಕೆ ಕೂಡಿದೆ, ಆದರೂ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಹೊತ್ತಿದೆ. ಇಲ್ಲಿ ಪತ್ರಕರ್ತರಿಗೆ ಕೆಲಸ ಮಾಡಲು ವಿಫುಲ ಅವಕಾಶಗಳಿವೆ. ನಾನು 6 ವರ್ಷದಲ್ಲಿ ಸಾಕಷ್ಟು ಕಡೆ ಖುದ್ದಾಗಿ ಸಂಚರಿಸಿ ವಿಶೇಷ ಲೇಖನಗಳನ್ನು ಬರೆದಿದ್ದೆನೆ. ಇಲ್ಲಿ ಕೆಲಸ ಮಾಡಿದ ತೃಪ್ತಿ ತಮಗಿದೆ ಎಂದರು.
ಪತ್ರಕರ್ತ ಶರಣು ಗೊಬ್ಬುರ್ ಮಾತನಾಡಿ, ಪತ್ರಕರ್ತ ಪ್ರವೀಣ್ ಕುಮಾರ್ ಅವರು ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಪತ್ರಕರ್ತ ಮಲ್ಲಿಕಾರ್ಜುನ ನಾಲವಾರ ಮಾತನಾಡಿ, ಜಿಲ್ಲೆಯ ಸಮಸ್ಯೆಗಳ ಅರಿತುಕೊಂಡು ಬೆಳಕು ಚೆಲ್ಲುವ ಕೆಲಸ ಮಾಡುತ್ತೇನೆ ಎಂದರು.
ಸಂಘದ ಉಪಾಧ್ಯಕ್ಷ ರಾಜು ನಲ್ಲಿಕರ್ ಮಾತನಾಡಿ, ಪತ್ರಕರ್ತ ಪ್ರವೀಣ್ ಕುಮಾರ್ ಅವರು ಕಳೆದ 6 ವರ್ಷಗಳ ಕಾಲ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಪತ್ರಕರ್ತರು ತನಿಖಾ ವರದಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆಯಲ್ಲಿ ಕುಳಿತು ವರದಿ ತಯಾರಿಸಬಾರದು. ಸ್ಥಳಕ್ಕೆ ಭೇಟಿ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಇದೇ ವೇಳೆ ಉಭಯ ಪತ್ರಕರ್ತರಿಗೆ ಹಲವು ಸಂಘ ಸಂಸ್ಥೆಗಳ ಮುಖಂಡರು ಸನ್ಮಾನಿಸಿದರು.
ಸಾಜೀದ್ ಹಯ್ಯಾತ್, ಗಣೇಶ್ ಪಾಟೀಲ್, ಪರಶುರಾಮ ಐಕೂರು, ಅಮೀನ್ ಹೊಸೂರು, ರವಿರಾಜ ಕಂದಳ್ಳಿ, ನಾಗರಾಜ ಮಗದುಮ, ದೇವರಾಜ ನಾಯಕ ವರ್ಕನಳ್ಳಿ, ನಾಗಪ್ಪ ನಾಯ್ಕಲ್, ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ನಾಗರಾಜ ಬೀರನೂರ, ಉಮೇಶ ಮುದ್ನಾಳ್, ಮರೆಪ್ಪ ನಾಯಕ ಮದಗಂಪುರ, ಬಸವರಾಜ ಕಾಂಬಳೆ, ಅರುಣ ಮಾಸನ್, ನಾಗರಾಜಗೌಡ ಬಿಳ್ಹಾರ, ಭೀರಲಿಂಗಪ್ಪ, ಮಹೇಶ್ ಗಣೇರ್ ಸೇರಿದಂತೆ ಇನ್ನಿತರರಿದ್ದರು. ಪತ್ರಕರ್ತ ಎಸ್.ಎಸ್.ನಾಯಕ್ ನಿರೂಪಿಸಿ, ವಂದಿಸಿದರು.
