1931 ಜೂನ್ 16 ರಂದು ಜನನ | ನಾಡು ಕಂಡ ಹಿರಿಯ ರಾಜಕಾರಣಿ ಇನ್ನಿಲ್ಲ

ಯಾದಗಿರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ವಿಧಿವಶವಾಗಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಸಂತಾಪ ವ್ಯಕ್ತಪಡಿಸಿದೆ.

ಸಮಾಜದ ಸೇವೆಗೆ ತಮ್ಮ ಜೀವನವನ್ನೇ ಅರ್ಪಿಸಿದ್ದ ಮಹಾನ್ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಮಾರ್ಗದರ್ಶನ, ದೂರದೃಷ್ಟಿ ಮತ್ತು ಸೇವಾಭಾವ ಸದಾ ನಮಗೆ ಪ್ರೇರಣೆಯಾಗಿ ಉಳಿಯುತ್ತದೆ.

ಈ ದುಃಖದ ಹೊತ್ತಿನಲ್ಲಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಹಾಗೂ ಸಮಸ್ತ ವೀರಶೈವ–ಲಿಂಗಾಯತ ಸಮಾಜಕ್ಕೆ ಭಗವಂತನು ಧೈರ್ಯ ನೀಡಲಿ ಎಂದು ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧರಾಜರೆಡ್ಡಿ, ಉಪಾಧ್ಯಕ್ಷ ಸಂಗಾರೆಡ್ಡಿಗೌಡ ಮಲ್ಹಾರ, ಅಡಿವೆಪ್ಪ ಜಾಕಾ,ಅನ್ನಪೂರ್ಣ ಸಿ ಪಾಟೀಲ, ನರಸರೆಡ್ಡಿ ಪಾಟೀಲ ನಜರಾಪೂರ,ಖಜಾಂಚಿ ಬಸನಗೌಡ ಕನ್ಯಾಕೋಳೂರ, ಕಾರ್ಯದರ್ಶಿ ಬಸವರಾಜ ಅರುಣಿ, ಚನ್ನಮಲ್ಲಿಕಾರ್ಜುನ ಅಕ್ಕಿ, ಮಹೇಶ ಆನೇಗುಂದಿ, ಕಮಲಾ ಇಂದೂಧರ ಸಿನ್ನೂರ,ಯು ಘಟಕದ ಜಿಲ್ಲಾಧ್ಯಕ್ಷ ಸುರೇಶ ಜಾಕಾ, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ಸೇರಿದಂತೆ ಹಲವರು ಶೋಕ ವ್ಯಕ್ತಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!