ಯಾದಗಿರಿ: ಜಿಲ್ಲೆಯ ವಡಗೇರ ತಾಲ್ಲೂಕಿನ ಸಂಗಮ ದಿಂದ ಯಾದಗಿರಿ ಬರುವಾಗ ಬೆಳಿಗ್ಗೆ ಬಸ್ ವಡಗೇರಿಯ ಹಾದಿ ಬಸವಣ್ಣ ಹತ್ತಿರ ಕಂದಕಕ್ಕೆ ಉರುಳಿ 15 ಜನರು ಗಾಯಗೊಂಡ ಘಟನೆ ನಡೆದಿದ್ದು, ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಎದುರು ಬರುವ ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ಬಸ್ ಪಲ್ಟಿಯಾಗಿ ಎನ್ನಲಾಗಿದೆ. ಬೈಕ್ ಸವಾರನಿಗೆ ತಲೆ ಮತ್ತು ಮುಖಕ್ಕೆ ಗಂಭೀರ ರೀತಿಯಲ್ಲಿ ಗಾಯಗೊಂಡಿರುತ್ತಾನೆ.
ಬಸ್ ಚಾಲಕ ಮತ್ತು ಬಸ್ ನಲ್ಲಿ ಇರುವ ಪ್ರಯಾಣಿಕರು ಪ್ರಾಣ ಪಾಯದಿಂದ ಪಾರಾಗಿರುತ್ತಾರೆ. ಘಟನೆಯಲ್ಲಿ 15 ಜನಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಗಾಯಗೊಂಡಿರುತ್ತಾರೆ. ಸ್ಥಳೀಯರು ಬಂದು ಆಂಬ್ಯೂಲೆನ್ಸ್ ಕರಿಸಿ ಗಾಯಗೊಂಡವರನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿರುತ್ತಾರೆ.
