ಶಿಕ್ಷಣ ಇಲಾಖೆ ಆಯುಕ್ತರಿಂದ ಉಪನಿರ್ದೇಶಕರಿಗೆ ನಿರ್ದೇಶನ | ಯಾದಗಿರಿಗೆ ಸಿಗಲಿದ್ದಾರೆ 603 ಅತಿಥಿ ಶಿಕ್ಷಕರು

ಯಾದಗಿರಿ : ರಾಜ್ಯದಲ್ಲಿ ಖಾಲಿಯಿರುವ 9 ಸಾವಿರಕ್ಕೂ ಹೆಚ್ಚು ಪ್ರೌಢ ಶಾಲೆ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಸೂಚನೆ ನೀಡಿದೆ.

ಇತ್ತೀಚೆಗಷ್ಟೇ ಶಿಕ್ಷಣ ಇಲಾಖೆ ಆಯುಕ್ತರು ವಿವಿಧ ಜಿಲ್ಲೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಲು ಹುದ್ದೆಗಳಿಗೆ ಮಂಜೂರಾತಿ ನೀಡಿದ್ದಾರೆ.

ವಿಶೇಷವಾಗಿ ಶೈಕ್ಷಣಿಕವಾಗಿ ಹಿಂದುಳಿದ ಯಾದಗಿರಿ ಜಿಲ್ಲೆಯ 603 ಹುದ್ದೆಗೆ ನೇಮಕಾತಿ ಆಗಲಿದೆ. ಅವಿಭಜಿತ ಯಾದಗಿರಿ, ಶಹಾಪೂರ ಹಾಗೂ ಸುರಪುರ ತಾಲೂಕುವಾರು ಖಾಲಿ ಇರುವ ಅಷ್ಟು ಹುದ್ದೆಗಳಿಗೆ ನೇಮಕವಾಗಲಿದೆ.

ತಾಲೂಕುವಾರು ಅತಿಥಿ ಶಿಕ್ಷಕರ ಸಂಖ್ಯೆ ನೋಡುವುದಾದರೆ, ಯಾದಗಿರಿ – 168, ಶಹಾಪೂರ – 187 ಹಾಗೂ ಸುರಪುರ -248 ಶಿಕ್ಷಕರ ನೇಮಕ ವಾಗಲಿದೆ. ಇದರಿಂದ ಗಡಿ ಜಿಲ್ಲೆಯ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ದೊರೆಯುವಂತಾಗಲಿ. ಕೇವಲ ಶಿಕ್ಷಕರ ನೇಮಕ ಮಾತ್ರ ಅಲ್ಲದೇ ಫಲಿತಾಂಶ ವೃದ್ಧಿಗೆ ಸಹಕಾರಿಯಾಗಲು ಹೊಸ ಕಾರ್ಯ ಯೋಜನೆ ರೂಪಿಸುವ ಜವಾಬ್ದಾರಿ ಸ್ಥಳೀಯ ಅಧಿಕಾರಿಗಳ ಮೇಲಿದೆ.

Spread the love

Leave a Reply

Your email address will not be published. Required fields are marked *

error: Content is protected !!