ಸರ್ಕಾರಿ ಬಾಲಕೀಯರ ಪದವಿ ಕಾಲೇಜು ವಿದ್ಯಾರ್ಥಿಗಳ ಸಾಧನೆ | ವಿವಿಧ ಕ್ರೀಡೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗಿ

ಗುರುಮಠಕಲ್‌: ಸರ್ಕಾರಿ ಬಾಲಕಿಯರ ಪದವಿ ಕಾಲೇಜು ವಿದ್ಯಾರ್ಥಿಗಳು ಇತ್ತೀಚೆಗೆ ಜರುಗಿದ ಕಾಲೇಜು ಜಿಲ್ಲಾ ಮಟ್ಟದ ವಿವಿಧ ಗುಂಪು ಮತ್ತು ವೈಯಕ್ತಿಕ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.  ಇತ್ತೀಚೆಗೆ ಯಾದಗಿರಿಯಲ್ಲಿ ನಡೆದ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡೆಗಳಲ್ಲಿ ಕಬಡ್ಡಿ ಪ್ರಥಮ ಸ್ಥಾನ, ಶೆಟಲ್ ಪ್ರಥಮ ಸ್ಥಾನ, ಬಾಲ್‌ಬ್ಯಾಡ್ಮಿಂಟನ್ ಪ್ರಥಮ ಸ್ಥಾನ, 4*400 ರಿಲೇ ಪ್ರಥಮ ಸ್ಥಾನ, ಯೋಗ ಪ್ರಥಮ ಸ್ಥಾನ, 3000 ಮೀಟರ್ ಓಟ ಪಥಮ ಸ್ಥಾನ, ಲಾಂಗ್ ಜಂಪ್ ಪ್ರಥಮ ಸ್ಥಾನ, 1500 ಮೀಟರ್ ಓಟ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜುನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಹೊಸಮನಿ, ಹಿರಿಯ ಉಪನ್ಯಾಸಕ ರಾಮಲು, ವೆಂಕಟರೆಡ್ಡಿ, ನಂದಕಿಶೋರ್, ಪದಮಮ್ಮ ಹಾಗೂ ಎಲ್ಲ ಅತಿಥಿ ಉಪನ್ಯಾಸಕರು ಕಾಲೇಜು ಅಭಿವೃದ್ಧಿ ಸಮಿತಿಯ ಉಪ ಅಧ್ಯಕ್ಷರಾದ ನರಸರೆಡ್ಡಿ ಪಾಟೀಲ ಗಡ್ಡೆಸೂಗೂರು, ನಾಗಭೂಷಣ್ ಅವಂಟಿ, ಬಾನುಪ್ರಕಾಶ್ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿ, ರಾಜ್ಯ ಮಟ್ಟದ ಕ್ರೀಡೆಯಲ್ಲಿಯೂ ಉತ್ತಮ ಸಾಧನೆ ಮಾಡಲು ಶುಭ ಹಾರೈಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!