ಸಮಾಜದಲ್ಲಿ ಗುರುತಿಸಿಕೊಳ್ಳಲು ವಿದ್ಯೆಯೇ ಸಾಧನ | ಸದುಪಯೋಗ ಪಡೆದು ಕೀರ್ತಿ ತರಲು ಸಲಹೆ
ಗುರುಮಠಕಲ್: ನಮ್ಮಲ್ಲಿನ ಪ್ರತಿಭೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಲು ವಿದ್ಯೆಯೇ ಮಕ್ಕಳ ಸಾಧನ ಎಂದು ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ಚಂದುಲಾಲ್ ಚೌಧರಿ ಹೇಳಿದರು.
ಪಟ್ಟಣದ ಅಂಕಮ್ಮ ದೇವಸ್ಥಾನ ಆವರಣದಲ್ಲಿ ಸಮಾಜದ 200 ಮಕ್ಕಳಿಗೆ ನವಯುವಕ ಸಂಘದಿಂದ ಆಯೋಜಿಸಿದ್ದ ನೋಟ್ ಬುಕ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಮಾಜದಿಂದ ಹಲವು ಪ್ರಯತ್ನಗಳು ಮಾಡಲಾಗುತ್ತದೆ. ಇದರ ಸದುಪಯೋಗ ಪಡೆದು ಸಮಾಜ ಮತ್ತು ಪಾಲಕರಿಗೆ ಕೀರ್ತಿ ತರಲು ಕಿವಿ ಮಾತು ಹೇಳಿದರು.
ಉಪಾಧ್ಯಕ್ಷ ಬುಡ್ಡಪ್ಪ ಜನಾರ್ಧನ ಮಾತನಾಡಿ, ಯುವಕ ಸಂಘದಿಂದ ಮಕ್ಕಳು ಚೆನ್ನಾಗಿ ಓದಿ ಸಾಧನೆ ಮಾಡಲು ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯ ಎಂದರು. ಉನ್ನತ ಗುರಿ ಹೊಂದಿರುವ ಮೂಲಕ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಖಜಾಂಚಿ ಯಶವಂತ ರಾವ್ ಚೌಧರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಮಾಜದಿಂದ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಲಾಗುತ್ತಿದೆ. ಸದುಪಯೋಗ ಪಡೆದು ಸಾಧನೆ ಮಾಡಲು ಹೇಳಿದರು.
ಈ ವೇಳೆ ಸಮಾಜದ ಗೌರವ ಅಧ್ಯಕ್ಷ ರಾಮ್ ಕಿಶನ್ ರಾವ್ ಗೋಂಗಲೆ, ಸತೀಶ್ ಜೀತ್ರಿ, ಅಂಬಾದಾಸ ಜೀತ್ರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಕಾಂತ ಜನಾರ್ಧನ್, ಪತ್ರಕರ್ತ ಅನೀಲ ಬಸೂದೆ, ಅನೀಲ್ ಜೀತ್ರಿ ವೇದಿಕೆಯಲ್ಲಿದ್ದರು. ಮೋಹನ್ ಚಮಕುರ, ನಿತೀನ್ ತಗಡಘರ್, ಭರತ ಜೀತ್ರಿ, ಪವನ್ ಮೇಂಗಜಿ, ಮೋಹನ್ ಬುರಬುರೆ, ಹೀರಾಲಾಲ ಬಸೂದೆ, ರಾಮುಸಾ ಹೌಜಿ, ವಿಠ್ಠಲ್ ಮಿಸ್ಕಿನ್ ಇತರರು ಇದ್ದರು.
