ಸಿದ್ದರಾಮಯ್ಯ ಸರ್ಕಾರದಲ್ಲಿದ್ದ ಸಚಿವ ದಶರ್ನಾಪುರ  | ಗಿರಿ ಜಿಲ್ಲೆಯಲ್ಲಿ 3 ಕೈ ಶಾಸಕರಾಗಿದ್ದರು ಸಿಗದ ಸಚಿವ ಸ್ಥಾನ |  ಅಳೆದು ತೂಗಿ ಹೈಕಮಾಂಡ್ ತಂತ್ರ? | 6 ಜನ ಮಹಿಳಾ ಜನಪ್ರತಿನಿಧಿಗಳ ಬದಿಗೊತ್ತಿ ಎಂಎಲ್ಸಿ ಗೆ ಸಚಿವ ಪಟ್ಟ

ಬೆಂಗಳೂರು/ಯಾದಗಿರಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಸೇರುವ ಸಚಿವರ ಪಟ್ಟಿ ಬಿಡುಗಡೆಯಾಗಿದೆ. ಅಳೆದು ತೂಗಿ ಹೈಕಮಾಂಡ್ ಸಿದ್ಧ ಪಡಿಸಿದ ಪಟ್ಟಿ ಹೊರ ಬಿದ್ದಿದೆ. ಆದರೇ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಕೇಳಿಬರುತ್ತಿದ್ದು, ರಾಜ್ಯದ ಗಡಿ ಜಿಲ್ಲೆ ಯಾದಗಿರಿಗೆ ಸಚಿವ ಸ್ಥಾನ ಸಿಗದೇ ತೀವ್ರ ನಿರಾಸೆ ಮೂಡಿದೆ. ಈ ಪಟ್ಟಿಗೆ ಇತರೆ 7 ಜಿಲ್ಲೆಗಳೂ ಸೇರಿವೆ.

ನೂತನ ಸಚಿವರ ಪಟ್ಟಿಯಲ್ಲಿ ಹಳಬರ ಜೊತೆಗೆ 11 ಜನ ಹೊಸಬರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಶಹಾಪೂರ ಶಾಸಕ ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ಸಚಿವ ಸ್ಥಾನ ದಕ್ಕಿತ್ತು. ಇದೀಗ ನೂತನ ಮುಖ್ಯಮಂತ್ರಿಯಾಗಿ ಡಿಕೆಶಿ ಅಧಿಕಾರ ವಹಿಸಿಕೊಂಡ ಬಳಿಕ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದೆ.ಯಾದಗಿರಿ ಜಿಲ್ಲೆಯಲ್ಲಿ ಮೂವರು ಕಾಂಗ್ರೆಸ್ ಶಾಸಕರಲ್ಲಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು ಜಗಜ್ಜಾಹೀರು. ಹಾಗಾಗಿ ಗೌಡ್ರು ಮಂತ್ರಿ ಆಗಿಯೇ ಆಗ್ತಾರೆ ಎನ್ನುವದು ಅವರ ಅಭಿಮಾನಿಗಳು ನಂಬಿದ್ದರು. ಆದರೇ ಇದೀಗ ಲೆಕ್ಕಾಚಾರ ತಲೆಕೆಳಗಾಗಿದೆ ಎನ್ನುವ ರಾಜಕೀಯ ಚರ್ಚೆಗಳು ನಡೆಯುತ್ತಿವೆ.ನೂತನ ಸಚಿವರ ಪಟ್ಟಿ ಹೀಗಿದೆ : ಪಿ.ಎಂ ನರೇಂದ್ರಸ್ವಾಮಿ ಮಳವಳ್ಳಿ (2ನೇ ಬಾರಿ ಸಚಿವ ಸ್ಥಾನ ), ಶಿವರಾಜ ತಂಗಡಗಿ ಕನಕಗಿರಿ (4ನೇ ಬಾರಿ ಸಚಿವ ಸ್ಥಾನ), ರುದ್ರಪ್ಪ ಲಮಾಣಿ ಹಾವೇರಿ (ಮೊದಲ ಬಾರಿ ಸಚಿವ ಸ್ಥಾನ), ಕೆ.ಎಸ್ ಬಸವಂತಪ್ಪ ಮಾಯಕೊಂಡ (ಮೊದಲ ಬಾರಿ ಸಚಿವ ಸ್ಥಾನ),  ಬಿ.ನಾಗೇಂದ್ರ ಬಳ್ಳಾರಿ (2ನೇ ಬಾರಿ ಸಚಿವ ಸ್ಥಾನ),ಟಿ ರಘುಮೂರ್ತಿ ಚಳ್ಳಕೆರೆ (ಮೊದಲ ಬಾರಿ ಸಚಿವ ಸ್ಥಾನ), ಜಮೀರ್ ಅಹಮದ್ ಖಾನ್ ಚಾಮರಾಜಪೇಟೆ (4 ಬಾರಿ ಸಚಿವ ಸ್ಥಾನ), ರಿಜ್ವಾನ್ ಅರ್ಷದ್ ಶಿವಾಜಿನಗರ (ಮೊದಲ ಬಾರಿ ಸಚಿವ ಸ್ಥಾನ), ಸಂತೋಷ್ ಲಾಡ್‌ ಕಲಘಟಗಿ (3ನೇ ಬಾರಿ ಸಚಿವ ಸ್ಥಾನ), ಮಧು ಬಂಗಾರಪ್ಪ ಸೊರಬ (2ನೇ ಬಾರಿ ಸಚಿವ ಸ್ಥಾನ), ಸಿ ಪುಟ್ಟರಂಗಶೆಟ್ಟಿ ಚಾಮರಾಜನಗರ (2ನೇ ಬಾರಿ ಸಚಿವ ಸ್ಥಾನ), ಡಾ. ಅಜಯ್ ಸಿಂಗ್ ಜೇವರ್ಗಿ (ಮೊದಲ ಬಾರಿ ಸಚಿವ ಸ್ಥಾನ), ಎನ್. ಚಲುವ ರಾಯಸ್ವಾಮಿ ನಾಗಮಂಗಲ (3ನೇ ಬಾರಿ ಸಚಿವ ಸ್ಥಾನ),  ಕೆ.ಎಂ ಶಿವಲಿಂಗೇಗೌಡ ಅರಸೀಕೆರೆ ( ಮೊದಲ ಬಾರಿ ಸಚಿವ ಸ್ಥಾನ), ಎಚ್.ಸಿ ಬಾಲಕೃಷ್ಣ ಮಾಗಡಿ (ಮೊದಲ ಬಾರಿ ಸಚಿವ ಸ್ಥಾನ), ಗಾಯತ್ರಿ ಶಾಂತೇಗೌಡ ಪರಿಷತ್ ಸದಸ್ಯೆ (ಮೊದಲ ಬಾರಿ ಶಾಸಕಿ, ಮೊದಲ ಬಾರಿ ಸಚಿವ ಸ್ಥಾನ), ಬಸವರಾಜ್ ರಾಯರೆಡ್ಡಿ ಯಲಬುರ್ಗಾ (4ನೇ ಬಾರಿ ಸಚಿವ ಸ್ಥಾನ), ವಿಜಯಾನಂದ ಕಾಶಪ್ಪನವರ್ ಹುನಗುಂದ (ಮೊದಲ ಬಾರಿ ಸಚಿವ ಸ್ಥಾನ) ಸೇರಿದಂತೆ ಲಕ್ಷ್ಮಣ ಸವದಿ ಅಥಣಿ (3ನೇ ಬಾರಿ ಸಚಿವ ಸ್ಥಾನ) ಡಿಕೆಶಿ ಅವರ ಸಂಪುಟ ಸೇರಲಿರುವ ನೂತನ ಸಚಿವರಾಗಿದ್ದಾರೆ. ಇನ್ನೊಂದೆಡೆ ಪಟ್ಟಿಯಿಂದ ಮಂಕಾಳ ವೈದ್ಯ ಅವರ ಹೆಸರಿನ ಬದಲಿಗೆ ಎಸ್ ಎಸ್ ಮಲ್ಲಿಕಾರ್ಜುನ ಅವರ ಹೆಸರು ಸೇರಿದ್ದು,  ಅವಾಂತರ ಸೃಷ್ಟಿಸಿದೆ. ಇದನ್ನು ಹೈಕಮಾಂಡ್ ಯಾವ ರೀತಿ ನಿಭಾಯಿಸುತ್ತೋ ಕಾದು ನೋಡಬೇಕಿದೆ.

Spread the love

Leave a Reply

Your email address will not be published. Required fields are marked *

error: Content is protected !!