ಪತ್ರಕರ್ತರಿಗಾಗಿ ಉಚಿತ ಆರೋಗ್ಯ-ನೇತ್ರ ಚಿಕಿತ್ಸಾ ಶಿಬಿರ 28ಕ್ಕೆ
ಯಾದಗಿರಿ: ವೈದ್ಯರ ದಿನಾಚರಣೆಯ ಅಂಗವಾಗಿ ನಗರದ ಆಶೀರ್ವಾದ ಆಸ್ಪತ್ರೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪತ್ರಕರ್ತರಿಗಾಗಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಜೂನ್ 28ರಂದು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ಬೆಳಿಗ್ಗೆ 10ಕ್ಕೆ ನಗರದ ತಹಸೀಲ್ದಾರ ಕಚೇರಿ ಎದುರಿಗಿರುವ ಆಶೀರ್ವಾದ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದೆ ಎಂದರು.
ಆಸ್ಪತ್ರೆಯ ಮುಖ್ಯಸ್ಥರೂ ಆದ ಹಿರಿಯ ವೈದ್ಯ ಡಾ. ಸಿ.ಎಂ. ಪಾಟೀಲ ಅವರು ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಿದ್ದಾರೆ ಎಂದು ಹೇಳಿದರು.
ರೋಗ ನಿರ್ಣಯಕ್ಕೆ ಅಗತ್ಯವಿರುವ ರಕ್ತ ಪರೀಕ್ಷೆ, ಇಸಿಜಿ, ಬಿಪಿ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು ಎಂದರು. ಶಹಾಪುರದ ದೃಷ್ಟಿ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಹಾಗೂ ನೇತ್ರತಜ್ಞ ಡಾ. ಎಚ್. ಭೀಮರೆಡ್ಡಿ ಪಾಟೀಲ ಅವರ ನೇತೃತ್ವದಲ್ಲಿ ನೇತ್ರ ತಪಾಸಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಅಗತ್ಯವಿರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಶಸ್ತ್ರಚಿಕಿತ್ಸೆಗೆ ಪ್ರತ್ಯೇಕ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಹೇಳಿದರು. ಹಿರಿಯ ವೈದ್ಯ ಸಿ.ಎಂ. ಪಾಟೀಲ್ ಅವರು ಪತ್ರಕರ್ತರ ಸೇವೆ ಮನಗಂಡು ಶಿಬಿರವನ್ನು ನಡೆಸಲು ಸಹಕರಿಸಿದ್ದಾರೆ ಎಂದರು. ಶಿಬಿರ ಮುಗಿದ ಬಳಿಕ ವೈದ್ಯರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಲು ಅವಕಾಶವಿದೆ ಎಂದು ಹೇಳಿದರು.
ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ವಡಗೇರಾ, ಗುರುಮಠಕಲ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪತ್ರಕರ್ತರು ಶಿಬಿರದ ಸದುಪಯೋಗ ಪಡೆಯಬೇಕು ಎಂದರು.
ಶಿಬಿರಕ್ಕೆ ಬರುವ ಪತ್ರಕರ್ತರು ಕಡ್ಡಾಯವಾಗಿ ಸಂಘದ ಈ ವರ್ಷದ ಕಾಡ್ ೯ ಕಡ್ಡಾಯಯ ತೆಗೆದುಕೊಂಡು ಬರಬೇಕು. ಗುರುತಿನ ಚೀಟಿ ಇಲ್ಲದವರಿಗೆ ಶಿಬಿರದ ಪ್ರಯೋಜನ ಪಡೆಯಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ನಿತ್ಯ ಒತ್ತಡದಲ್ಲಿ ಕೆಲಸ ಮಾಡುವ ನಾವು ಆರೋಗ್ಯದ ಕಡಗೆ ಗಮನ ಹರಿಸುವುದು ತುಂಬ ಅಗತ್ಯವಿದೆ. ಜಿಲ್ಲೆಯ ಎಲ್ಲ ಪತ್ರಕರ್ತರು ಆಗಮಿಸುವ ಮೂಲಕ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ಉಚಿತ ನೇತ್ರ ಶಸ್ತ್ರ ಚಿಕಿತ್ಸೆ : ನೇತ್ರ ತಪಾಸಣೆ ಬಳಿಕ ಅಗತ್ಯವಿರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಶಸ್ತ್ರಚಿಕಿತ್ಸೆಗೆ ಪ್ರತ್ಯೇಕ ದಿನಾಂಕ ನಿಗದಿ ಮಾಡಲಾಗಿತ್ತದೆ. ಒಂದು ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಲು ಸುಮಾರು 40 ಸಾವಿರ ರೂಪಾಯಿ ಬೇಕಾಗುತ್ತದೆ. ಅಂತಹುದರಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲು ಮಂದಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ಖಾಲಿ ಹೊಟ್ಟೆಯಲ್ಲಿ ಹಲವು ಪರೀಕ್ಷೆ ಮಾಡಿಸಿ: ಶಿಬಿರಕ್ಕೂ ಮುನ್ನ 8ರ ಸುಮಾರಿಗೆ ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಕಾಯಿಲೆ ಟೆಸ್ಟ್ ಮಾಡಿಸಬಹುದು, ಮೂತ್ರ ಪರೀಕ್ಷೆ, ರಕ್ತ ಪರೀಕ್ಷೆ, ಬಿಪಿ ಪರೀಕ್ಷೆ, ಇಸಿಜಿ, ಹೃದಯ ಸಂಬಂಧಿ ಕಾಯಿಲೆ ಪರೀಕ್ಷೆ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬಹುದು.
ಆರೋಗ್ಯ ಕುರಿತು ಸಂವಾದ: ಶಿಬಿರ ಮುಗಿದ ಬಳಿಕ ನಮ್ಮ ಜೀವನ ಶೈಲಿ ಹೇಗಿರಬೇಕು ಎಂಬ ಕುರಿತು ವೈದ್ಯರೊಂದಿಗೆ ಸಂವಾದ ನಡೆಯಲಿದೆ ನಮ್ಮ ಆಹಾರ ಪದ್ಧತಿ ಹೇಗಿರಬೇಕು, ನಮ್ಮಆರೋಗ್ಯ ಹೇಗೇ ಕಾಪಾಡಿಕೊಳ್ಳಬೇಕು, ಹೃದಯ ಸಂರಕ್ಷಣೆ ಹೇಗೆ?, ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುವುದು ಹೇಗೆ?, ನೇತ್ರ ಸಂರಕ್ಷಣೆಗೆ ಮದ್ದು ಏನು? ಔಷಧಿ ಇಲ್ಲದೇ ಬಿಪಿ ನಿಯಂತ್ರಣ ಮಾಡುವುದು ಹೇಗೇ? ಎಷ್ಟೊತ್ತು ವಾಯು ವಿಹಾರ ಮಾಡಬೇಕು, ಲೈಫ್ ಸ್ಟೈಲ್ ಹೇಗಿರಬೇಕು, ಹೀಗೆ ಹತ್ತಾರು ವಿಷಯಗಳ ಕುರಿತು ವೈದ್ಯರೊಂದಿಗೆ ನೇರವಾಗಿ ಚರ್ಚಿಸಿ ಪರಿಹಾರ ಪಡೆಯಬಹುದು ಎಂದರು.
