ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಗುರುಮಠಕಲ್ ರಿಂದ | ಬೃಹತ್ ಉಚಿತ ಆರೋಗ್ಯ, ಕಣ್ಣಿನ ತಪಾಸಣೆ ಶಿಬಿರ | ಆರೋಗ್ಯ ಇಲಾಖೆ, ವಿವಿಧ ಆಸ್ಪತ್ರೆಗಳ ಸಹಯೋಗ | 500 ಜನರು ಭಾಗಿ
ಗುರುಮಠಕಲ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ಜನ್ಮದಿನ ನಿಮಿತ್ಯ ತಾಲೂಕು ಸರ್ಕಾರಿ ನೌಕರರ ಸಂಘ, ಆರೋಗ್ಯ ಇಲಾಖೆ ಹಾಗೂ ಮಲ್ಲಾರೆಡ್ಡಿ ನಾರಾಯಣ ಮಲ್ಟಿ ಸ್ಪೇಶಿಯಾಲಿಟಿ ಆಸ್ಪತ್ರೆ ಹೈದ್ರಾಬಾದ ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ, ಕಣ್ಣಿನ ತಪಾಸಣೆ ಶಿಬಿರ ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೆರವೇರಿತು.
ಈ ವೇಳೆ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಅವರ ಜನ್ಮದಿನ ನಿಮಿತ್ಯ ಈ ಭಾಗದ ಬಡ ಜನರ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಭಾಗಿಯಾಗಿ ಹೃದಯ ರೋಗ, ಕ್ಯಾನ್ಸರ್, ಎದೆ ನೋವು, ಕಣ್ಣಿನ ತಪಾಸಣೆ, ಉಸಿರಾಟ ತೊಂದರೆ, ಉಚಿತ ಕನ್ನಡಕ, ವೇಗ ಹೃದಯಬಡಿತ ಸೇರಿದಂತೆ ಹಲವು ಕಾಯಿಲೆಗಳ ತಪಾಸಣೆಗೆ ಒಳಪಟ್ಟರು. ಕಣ್ಣಿನ ತಪಾಸಣೆ- 106, ಪೊರೆ ಚಿಕಿತ್ಸೆ/ಕ್ಯಾಟ್ರಾಕ್ಟ್ -35, ಸ್ಕ್ರೀನಿಂಗ್(Screening)- 155, ಮ್ಯಾಮೊಗ್ರಾಫಿ -7, 7 ಪ್ರಕರಣಗಳ ಗಡ್ಡೆಗಳು(lumps) ಸೇರಿದಂತೆ ಸಾಮಾನ್ಯ ಪ್ರಕರಣಗಳು-146 ಒಟ್ಟು 449 ಜನರನ್ನು ಪರೀಕ್ಷಿಸಲಾಯಿತು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ್ ನೀರೆಟಿ, ತಾ.ಪಂ. ಅಧಿಕಾರಿ ಅಂಬರೀಶ್ ಪಾಟೀಲ್, ಆಡಳಿತ ವೈದ್ಯಾಧಿಕಾರಿ ಡಾ. ನೀಲಾಂಬಿಕ, ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಎಸ್ ಬಿ ಐ ಶಾಖೆ ವ್ಯವಸ್ಥಾಪಕ ರಾಜೇಶ್ ಜೋಶಿ, ಸಂಘದ ರಾಜ್ಯ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಣಿಕ್ಯಪ್ಪ, ಶ್ರೀನಿವಾಸ ಮಡಿವಾಳ, ಪ್ರಶಾಂತ್ ಬಡಿಗೇರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದರು. ಇದಕ್ಕೂ ಮೊದಲು ಪುರಸಭೆಯ 24 ಪೌರಕಾರ್ಮಿಕರಿಗೆ ಉಚಿತವಾಗಿ ರೇನ್ ಕೋರ್ಟ್ ಮತ್ತು ಪ್ಯಾಂಟ್ ವಿತರಣೆ ಮಾಡಲಾಯಿತು.
