ಧರ್ಮಪುರ ಬೋರಬಂಡ ಮಧ್ಯ ಭಾಗದ ಬೆಟ್ಟದ ತಿರುವು ರಸ್ತೆ ಅಗಲಿಕರಣಕ್ಕೆ ವಾರದ ಗಡುವು | ರಸ್ತೆ ತಡೆದು ಪ್ರತಿಭಟನೆ ಎಚ್ಚರಿಕೆ  ನೀಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ

ಗುರುಮಠಕಲ್ : ತಾಲೂಕಿನ ಗಡಿ ಭಾಗದ ಧರ್ಮಪೂರ ಮತ್ತು ಬೋರಬಂಡ ಮಧ್ಯದ ಭಾಗದ ಬೆಟ್ಟದ ತಿರುವು ರಸ್ತೆ ಇದೀಗ ವಾಹನ ಸವಾರರಿಗೆ ಅಪಾಯದ ಕೇಂದ್ರವಾಗಿದೆ.

ಯಾದಗಿರಿ-ಗುರುಮಠಕಲ್ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ದಿನನಿತ್ಯ ವಾಹನಗಳ ಸಂಚಾರ ದಟ್ಟನೆ ಹೆಚ್ಚಾಗುತ್ತಿದೆ. ಅವೈಜ್ಞಾನಿಕ ರಸ್ತೆ ವಿನ್ಯಾಸದಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸ್ಥಳಕ್ಕೆ ಬೇಟಿ ನೀಡಿ ಪರಿಶಿಲಿಸಿದ ನಂತರ ವಾಹನ ಸವಾರರ ಜೊತೆ ಚರ್ಚಿಸಿ ಮಾತನಾಡಿದ ಅವರು ಪ್ರಮುಖ ನಗರಗಳಿಗೆ ತೆರಳುವ ಭಾರಿ ವಾಹನಗಳ ಓಡಾಟಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಧರ್ಮಪೂರ ಬೋರಬಂಡದ ಮಧ್ಯದಲ್ಲಿರುವ ಬೆಟ್ಟದ ತಿರುವು ರಸ್ತೆ ಆಪಾಯಕಾರಿಯಾಗಿ ಪರಿಣಮಿಸಿದೆ. ಬೆಟ್ಟದ ಇಳಿಜಾರು ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ತಿರುವು ರಸ್ತೆ, ರಾತ್ರಿ ವೇಳೆ ಅಮಾಯಕ ಜೀವಗಳು ಬಲಿಯಾಗುವ ಸಾಧ್ಯತೆ ಹೆಚ್ಚು, ಬಹಳಷ್ಟು ಬಾರಿ ಚಾಲಕರು ನಿಯಂತ್ರಣ ಕಳೆದುಕೊಂಡು ವಾಹನಗಳು ತಡೆಗೋಡೆಗೆ ಡಿಕ್ಕಿ ಹೊಡೆದು ಬೆಟ್ಟದ ಕೆಳಭಾಗಕ್ಕೆ ಉರುಳಿ ಬಿದ್ದರು ಪ್ರಾಣ ಕಳೆದುಕೊಂಡರು ಎಚ್ಚತ್ತು ಕೊಳ್ಳದ ಜಿಲ್ಲಾಡಳಿತ ಹೀಗಾಗಿ ಈ ಪ್ರದೇಶದಲ್ಲಿ ರಸ್ತೆ ಅಗಲೀಕರಣ, ಸಮರ್ಪಕ ಸೂಚನಾ ಫಲಕಗಳು, ರಕ್ಷಣಾತ್ಮಕ ತಡೆಗೋಡೆ ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಅಪಘಾತಗಳಿಗೆ ಆಹ್ವಾನವಾಗುವ ತಿರುವು ರಸ್ತೆ ಬಹಳ ವರ್ಷಗಳಿಂದ ಜಿಲ್ಲಾಡಳಿತ ಮತ್ತು ಸರ್ಕಾರದ ರಸ್ತೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕಿತ್ತು. ಆದರೆ ಸಮಸ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ ಈ ಭಾಗದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಧರ್ಮಪೂರ ಬೆಟ್ಟದ ತಿರುವು ರಸ್ತೆಯ ಆಪಾಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯು ಶೀಘ್ರ ಕಾಮಗಾರಿ ಕೈಗೊಂಡು ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲಿಸಬೇಕು ಎಂದಿರುವ ಅವರು, ತಿರುವು ಸ್ಥಳದಲ್ಲೇ ರಸ್ತೆ ತಡೆದು ಹೋರಾಟ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!