ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ | ಭವ್ಯ ರಥೋತ್ಸವ
ಗುರುಮಠಕಲ್: ವರಮಹಾಲಕ್ಷ್ಮೀ ಹಬ್ಬದ ದಿನ ಅಸಂಖ್ಯಾತ ಭಕ್ತರು ಪಾಲ್ಗೊಂಡು ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ದೇವಿ ಸುಂದರಿಗೆ ಆಯುರಾರೋಗ್ಯ, ಸಕಲ ಐಶ್ವರ್ಯ ಕೊಟ್ಟು ಸನ್ಮಂಗಲ ಕರುಣಿಸಲಿ ಎಂದು ನರೇಂದ್ರ ರಾಠೋಡ ಹೇಳಿದರು.
ಸುಕ್ಷೇತ್ರ ಬೋರಬಂಡ ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು. ಸುಕ್ಷೇತ್ರದಲ್ಲಿ ಕಳೆದ 3 ವರ್ಷಗಳಿಂದ ಸಾಮೂಹಿಕ ಪೂಜಾ ಆಯೋಜನೆ ಮಾಡಲಾಗುತ್ತಿದೆ ಎಂದರು.
ಬೆಳಗ್ಗೆಯಿಂದಲೇ ಸುಪ್ರಭಾತ ಸೇವಾ, ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವರಿಗೆ ಪಂಚಾಮೃತ ಅಭಿಷೇಕ ಅಲಂಕಾರ ಸೇವಾ, ಶ್ರೀ ವರಮಹಾಲಕ್ಷ್ಮಿ ಪೂಜೆ ಜರುಗಿತು. ನೂರಾರು ಭಕ್ತರ ಮದ್ಯೆ ಅದ್ದೂರಿ ರಥೋತ್ಸವದಲ್ಲಿ ಜಯಘೋಷ ಮೊಳಗಿತು.
ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ದಂಪತಿಗಳು ಪಾಲ್ಗೊಂಡಿದ್ದರು. ಬಳಿಕ ಮಹಾ ಮಂಗಳಾರತಿ, ತದನಂತರದಲ್ಲಿ ತೀರ್ಥಪ್ರಸಾದ ವಿತರಣೆಯಾಯಿತು.
ಈ ವೇಳೆ ಲಕ್ಷ್ಮೀ ಬಾಯಿ ನರೇಂದ್ರ ರಾಠೋಡ ದಂಪತಿ, ಅನಂತಪ್ಪ ಯದ್ಲಾಪುರ, ಕಾಶಿನಾಥ ರಾಠೋಡ, ಮೋನಪ್ಪ ರಾಠೋಡ, ರಮೇಶ್ ಪವಾರ್, ರಾಜು, ಅಯ್ಯಪ್ಪ ದಾಸ, ಸುರೇಶ ಚಿನ್ನ ರಾಠೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
