2023ರಲ್ಲಿ ಮಂಡಳಿ ಘೋಷಣೆ | ಅನುದಾನವೂ ಇಲ್ಲ, ಅಧ್ಯಕ್ಷ ಯಾರು ನೇಮಕವೂ ಇಲ್ಲ | ಶರಣಪ್ಪ ಅಸಮಾಧಾನ
ಗುರುಮಠಕಲ್: 2023 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹೂಗಾರ ನಿಗಮ ಮಂಡಳಿ ಸ್ಥಾಪಿಸಿದ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಿಗಮ ಅನುಷ್ಠಾನಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಅಖಂಡ ಕರ್ನಾಟಕ ಹೂಗಾರ್ ಮಹಾಸಭಾದ ಸಲಹಾ ಸಮಿತಿ ಅಧ್ಯಕ್ಷ ಶರಣಪ್ಪ ಹೂಗಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಣ್ಣ ಸಮಾಜವಾದ ಹೂಗಾರ್ ಸಮಾಜದ ನಿಗಮ ಮಂಡಳಿಗೆ ಯಾವುದೇ ಅನುದಾನ ಮಿಸಲಿಟ್ಟಿಲ್ಲ ಹಾಗೂ ಅಧ್ಯಕ್ಷರ ನೇಮಕದಲ್ಲೂ ಹಿಂದೇಟು ಹಾಕಲಾಗಿದೆ ಎಂದಿರುವ ಅವರು, ರಾಜ್ಯದ ನೂತನ ಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್ ಅವರಾದರೂ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಿ, ನಿಗಮ ಮಂಡಳಿ ಅನುಷ್ಠಾನಗೊಳಿಸಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಬಸವರಾಜ ರಾಯಚೂರ್ ರವರನ್ನು ಹಿಂದುಳಿದ ಹೂಗಾರ್ ಸಮಾಜದ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲು ಆಗ್ರಹಿಸಿದ್ದಾರೆ. ಕಡೆಗಣಿಸುತ್ತ ಹೋದರೆ ಮುಂದಿನ ದಿನಗಳಲ್ಲಿ ಸಮಾಜದಿಂದ ಹೋರಾಟದ ಮಾಡಬೇಕಾಗುತ್ತದೆ ಎಂದಿದ್ದಾರೆ.
