ಎಲ್ಲೆಡೆ ಬುದ್ಧ ಪೌರ್ಣಿಮೆ ಆಚರಣೆ | ಬುದ್ಧರ ಆದರ್ಶಗಳ ನಿಟ್ಟಿನಲ್ಲಿ ಜೀವನ ಸಂಕಲ್ಪ
ಯಾದಗಿರಿ : ಗುರುಮಠಕಲ್ ತಾಲೂಕಿನ ನಜರಾಪುರ್ ಗ್ರಾಮದ ಧಬ್ ಧಬ್ ಫಾಲ್ಸ್ ಸಮೀಪದಲ್ಲಿರುವ ಗೌತಮ ಬುದ್ಧನ ಬೆಟ್ಟದಲ್ಲಿ ಮಹಾನ್ ತತ್ವಜ್ಞರಾದ ಗೌತಮ ಬುದ್ಧರ 2570ನೇ ಜಯಂತಿ ಹಾಗೂ ಬುದ್ಧ ಪೂರ್ಣಿಮೆಯ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಸೇರಿ ಗೌತಮ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಕ್ತಿಪೂರ್ವಕವಾಗಿ ನಮನಗಳನ್ನು ಸಲ್ಲಿಸಿದರು. ಬುದ್ಧನ ಶಾಂತಿ, ಕರುಣೆ ಹಾಗೂ ಧರ್ಮದ ಮಹತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನು ಎಲ್ಲರೂ ಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಅಶೋಕ್ ಶನಿವಾರಂ ನಗರ ಆಶ್ರಯ ಸಮಿತಿ ಸದಸ್ಯ ಹಾಗೂ DSS ತಾಲೂಕ ಅಧ್ಯಕ್ಷ, ಮಾದೇವಪ್ಪ ಚಪೆಟ್ಲ, ಪ್ರಕಾಶ್ ನಜರಾಪುರ್, ಅಶೋಕ್ ನಜರಾಪುರ್, ಶ್ರೀಕಾಂತ್ ತಲಾರಿ, ಚಂದ್ರು ನಜರಾಪುರ್, ವೆಂಕಟಪ್ಪ, ಸಂತೋಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೀದರ ಜಿಲ್ಲಾಧಿಕಾರಿಗಳ ಕಛೇರಿ : ಭಗವಾನ್ ಬುಧ್ದರ 2570 ನೇ ಜಯಂತ್ಯೋತ್ಸವ ಅಂಗವಾಗಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭಗವಾನ್ ಬುದ್ಧರ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪುಷ್ಪಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪೂಜ್ಯ ಭಂತೆ ಜ್ಞಾನ ಸಾಗರ ರವರು ತ್ರಿಶರಣ ಪಂಚಶೀಲ ನಡೆಸಿಕೊಟ್ಟರು, ರಾಜಪ್ಪಾ ಗೂನ್ನಳ್ಳಿಕರ್, ಮಹೇಶ ಗೋರನಾಳಕರ್, ಶಿವಕುಮಾರ ನಿಲಿಕಟ್ಟಿ, ವಿನಯಕುಮಾರ ಮಾಳಗೆ, ವಿಜಯಕುಮಾರ ಸೋನಾರೆ, ಬಾಬು ಆಣದೂರೆ, ರಾಜಕುಮಾರ ಗಾದಗಿ, ಪ್ರಸನ್ನ ಡಾಂಗೆ, ಜಗದೀಶ್ವರ ಬಿರಾದರ, ಸಂದೀಪ್ ಕಾಂಟೆ, ಶರಣು ಫುಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂದೆ, ಚುನಾವಣೆ ತಹಶಿಲ್ದಾರ ಮಲಶೇಟ್ಟಿ ಚಿದ್ರಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸುಭಾಷ ರತ್ನಾಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗುರುಮಠಕಲ್ ಪುರಸಭೆ: ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಗೌತಮ ಬುದ್ಧ ಜಯಂತಿ ಆಚರಿಸಲಾಯಿತು. ಮುಖ್ಯಾಧಿಕಾರಿ ಶರಣಪ್ಪ ಎಂ ಅವರು ಪುಷ್ಪನಮನ ಸಲ್ಲಿಸಿದರು. ಪಟ್ಟಣದ ಗಣ್ಯರು, ಪುರಸಭೆ ಸಿಬ್ಬಂದಿ ಮಗಳು ಇದ್ದರು.
