ಪುರಸಭೆ ಉಪಾಧ್ಯಕ್ಷೆ ರೇಣುಕಾ ವೀರಪ್ಪ ಪಡಿಗೆ ಪದಗ್ರಹಣ ದಲ್ಲಿ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಭಾಗಿ | ಮಂತ್ರಿ ಯೋಗದ ಇಂಗಿತ ವ್ಯಕ್ತಪಡಿಸಿದ ಚಿಂಚನಸೂರ

ಗುರುಮಠಕಲ್:  2023ರ ವಿಧಾನ ಸಭೆ ಚುನಾವಣೆಯಲ್ಲಿ  ಕ್ಷೇತ್ರದ ಜನರು ತಮಗೆ ಹೆಚ್ಚು ಮತ ನೀಡಿದ್ದಾರೆ. ಪ್ರಚಾರಕ್ಕೆ ತೆರಳದಿದ್ದರೂ ಅಭಿಮಾನ ತೋರಿಸಿದ್ದಾರೆ ಎಂದು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು.

ಗುರುಮಠಕಲ್ ಪುರಸಭೆ ಉಪಾಧ್ಯಕ್ಷೆ ರೇಣುಕಾ ಪಡಿಗೆ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಾವು ಗೆದ್ದರೆ ಮಂತ್ರಿಯೋಗವಿತ್ತು ಎನ್ನುವ ಇಂಗಿತ ವ್ಯಕ್ತಪಡಿಸಿದರು.

ಮತದಾರರರೇ ನನಗೆ ಸರ್ವಸ್ವ. ಅಮೇರಿಕಾ, ಸಿಂಗಾಪೂರ್ ತರಹ ಮಾಡುವ ಕನಸಿತ್ತು. ತನಗೆ ಏನು ಆಸೆಯಿಲ್ಲ. ಸೇವೆಯೇ ನನ್ನ ಕೊನೆಯ ಆಸೆ. 5 ಬಾರಿ ಎಮ್ ಎಲ್ ಎ, 6 ಎಂ ಎಲ್ ಸಿ ಆಗಿರುವ ಹಿರಿಯ ನಾಯಕನಾಗಿದ್ದು , ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಸೋತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗಮ ಅಧ್ಯಕ್ಷ ಸ್ಥಾನ ನೀಡಿ, ಸಂಪುಟ ಸ್ಥಾನ ಮಾನ ನೀಡಿದ್ದಾರೆ. 50 ವರ್ಷಗಳಿಂದ ಬಡವರ ಸೇವೆ ಮಾಡುತ್ತಿರುವೆ. ತಾವು ಗೆದ್ದರೆ ಅಭಿವೃದ್ಧಿಯಲ್ಲಿ ಆಕಾಶದೆತ್ತರಕ್ಕೆ ಹೋಗುತ್ತಿತ್ತು. ನಿಗಮ ಅಧ್ಯಕ್ಷ ಸ್ಥಾನ ನೀಡಿದ್ದು, ಕೆಲಸ ಮಾಡಲು ಹುರುಪು ಬಂದಿದೆ. ಟಿಎ, ಡಿಎ ಸಹ ದೇವಸ್ಥಾನ, ಜನಗಳಿಗೆ ನೀಡಿದ್ದೇನೆ.

ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡುವ ಅಭಿಮಾನಿಗಳ ಬೇಡಿಕೆಯ ಕುರಿತು ಪ್ರತಿಕ್ರಿಯೆ ನೀಡಿ,  ಈ ವಿಚಾರ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದು ರೋಕ್ಷವಾಗಿ ಸಚಿವ ಸ್ಥಾನ ನೀಡಿದರೆ ನಿಭಾಯಿಸಲು ಸಿದ್ಧ ಎನ್ನುವ ಮಾತು ಹಂಚಿ ಕೊಂಡರು. ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಬೇಕು. ನನ್ನನ್ನು ಕಳೆದುಕೊಂಡು ಜನರು ದುಃಖದಲ್ಲಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ಮಾತನಾಡಿ, ಬಾಬುರಾವ್ ಚಿಂಚನಸೂರ ಅವರು 850 ಕೋಟಿ ಅನುದಾನ ತಂದಿದ್ದಾರೆ. ಸಾಹೇಬರು ಗೆದ್ದಿದ್ದರೆ ಇನ್ನೂ ಅಭಿವೃದ್ಧಿ ಆಗುತ್ತಿತ್ತು. ಕ್ಷೇತ್ರದ ಅಭಿವೃದ್ಧಿಗೆ ಕಾಳಜಿಬೇಕು.

ಎಂಪಿ ರಾಧಾಕೃಷ್ಣ ಅವರು ಡಾ. ಖರ್ಗೆ ಅವರ ಅಳಿಯ, ದೇಶದಲ್ಲಿ ಮೋದಿ ಬಲ ಕುಗ್ಗುತ್ತಿದೆ. ಖರ್ಗೆ ಅವರಿಗೆ ಪ್ರಧಾನಮಂತ್ರಿಯಾಗುವ ಯೋಗವಿದೆ ಎಂದು ನುಡಿದರು. ಸಂಸದರ ಅನುದಾನದಲ್ಲಿ 20 ಕೋಟಿ ರೂಪಾಯಿಗಳ  ಕ್ರಿಯಾಯೋಜನೆ ಸಿದ್ಧಗೊಳ್ಳುತ್ತಿದೆ. ಶೀಘ್ರವೇ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ ಎಂದರು. ಈ ವೇಳೆ ಸಂಜೀವ ಕುಮಾರ ಚಂದಾಪುರ, ಆನಂದ ಬೋಯಿನಿ, ಬಸವರಾಜಪ್ಪ ಬಾಗ್ಲಿ, ಖಾಜಾ ಮೈನೋದ್ದೀನ್ ಇದ್ದರು.

ಉಪಾಧ್ಯಕ್ಷರ ಪದಗ್ರಹಣ: ಇದಕ್ಕು ಮುನ್ನ ಪುರಸಭೆ ಕಾರ್ಯಾ ಲಯದ ಉಪಾಧ್ಯಕ್ಷರ ಕೋಣೆಯಲ್ಲಿ ರೇಣುಕಾ ಪಡಿಗೆ ಅವರು ಪದಗ್ರಹಣ ಸ್ವೀಕರಿಸಿದರು.

ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಉಪಾಧ್ಯಕ್ಷೆ ರೇಣುಕಾ ಪಡಿಗೆ ಅವರನ್ನು ಸನ್ಮಾನಿಸಿದರು. ಈ ವೇಳೆ ಪುರಸಭೆ ಅಧ್ಯಕ್ಷೆ ಜಯಶ್ರೀ ಆರ್ ಪಾಟೀಲ್, ಸದಸ್ಯರಾದ ರವೀಂದ್ರ ರೆಡ್ಡಿ ಶೇರಿ, ಪಾಪಿರೆಡ್ಡಿ, ಬಾಬು ತಲಾರಿ, ಕೃಷ್ಣ ಮೇದ, ನರ್ಮದಾ, ಪವಿತ್ರ ಮನ್ನೆ, ಪಂಚ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ ಪಲ್ಲಾ ಸೇರಿದಂತೆ ಪ್ರಮುಖರಾದ ಭೀಮಾಶಂಕರ ಪಡಿಗೆ, ರವಿ ಕೋಟಕೊಂಡಿ, ಚಾಂದ ಪಾಷಾ, ಮಾಣಿಕ ಮುಕಡಿ, ಲಿಂಗಪ್ಪ ತಾಂಡೂರಕರ್, ಅಶೋಕ ಸಂಜನೋಳ ಇತರರು ಇದ್ದರು.

ಪುರಸಭೆಯಿಂದ ಸನ್ಮಾನ: ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರಿಗೆ ಪುರಸಭೆಯಿಂದ ಸನ್ಮಾನ ನೆರವೇರಿತು. ಅಧ್ಯಕ್ಷೆ, ಉಪಾಧ್ಯಕ್ಷೆ, ಅಧಿಕಾರಿ ಹಾಗೂ ಸಿಬ್ಬಂದಿಗಳು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!