300 ಲಕ್ಷಕ್ಕು ಅಧಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದ ಶಾಸಕರು | ಗವಿಸಿದ್ಧಲಿಂಗೇಶ್ವರ ದರ್ಶನ ಪಡೆದ ಶರಣಗೌಡ ಕಂದಕೂರ
ಗುರುಮಠಕಲ್: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ತಮ್ಮ ಧ್ಯೇಯವಾಗಿದೆ. ತಾವು ಅಧಿಕಾರದಲ್ಲಿರಲಿ , ಇಲ್ಲದಿರಲಿ ಕ್ಷೇತ್ರದ ಜನರ ಸೇವೆ ಮಾಡುವುದಾಗಿ ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಚಿಂತನಹಳ್ಳಿ (ಗವಿ ಸಿದ್ಧಲಿಂಗೇಶ್ವರ)ಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2024-25ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಯೋಜನೆ ಅಡಿಯಲ್ಲಿ ಮಂಜೂರಾದ ಗುರುಮಠಕಲ್ ಈ ಮತಕ್ಷೇತ್ರದ ಚಿಂತನಳ್ಳಿ ಗ್ರಾಮದ ಗುಂಡಪ್ಪ ಹಳ್ಳಕ್ಕೆ ಸಿ.ಡಿ. ನಿರ್ಮಾಣ ಕಾಮಗಾರಿಯ (ಅಂದಾಜು ಮೊತ್ತ:10.00 ಲಕ್ಷಗಳು), ಚಿಂತನಳ್ಳಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2 ಕೋಣೆಗಳ ನಿರ್ಮಾಣ ಹಾಗೂ
ಸ್ಟಾರ್ಟ ಕ್ಲಾಸ್ ನಿರ್ಮಾಣ ಕಾಮಗಾಯ (ಅಂದಾಜು ಮೊತ್ತ: 53.00 ಲಕ್ಷಗಳು), ಕಂದಕೂರ ಗ್ರಾಮದ ಎಸ್.ಎಚ್.ಡಿ. ಪಿ. ಮುಖ್ಯ ರಸ್ತೆಯಲ್ಲಿ ಚರಂಡಿ ನಿರ್ಮಾಣ (20 ಲಕ್ಷ) ಮತ್ತು ಸಿ.ಸಿ.ರಸ್ತೆ ನಿರ್ಮಾಣ (70 ಲಕ್ಷ) ಕಾಮಗಾರಿಯ (ಅಂದಾಜು ಮೊತ್ತ: 90.00 ಲಕ್ಷಗಳು), ಚಿಂತನಳ್ಳಿ ಗ್ರಾಮದ ಶ್ರೀ ಗವಿಸಿದ್ದಲಿಂಗೇಶ್ವರ ಮುಖ್ಯ ರಸ್ತೆಯಿಂದ ದೇವಸ್ಥಾನದವರೆಗೆ ಮರು ಡಾಂಬರೀಕರಣ ಕಾಮಗಾರಿಯ (ಅಂದಾಜು ಮೊತ್ತ:100.00 ಲಕ್ಷಗಳು) ಹಾಗೂ ಕಂದಕೂರ ಗ್ರಾಮದಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯ (ಅಂದಾಜು ಮೊತ್ತ:70 ಲಕ್ಷಗಳು) ಕಾಮಗಾರಿ ಚಾಲನೆ ನೀಡಿ ಮಾತನಾಡಿದರು.
ಕಂದಕೂರ ವ್ಯಾಪ್ತಿಯ ಜನರು ತಮ್ಮ ಕುಟುಂಬದ ಜೊತೆಗಿದ್ದೀರಿ, ತಂದೆ ಹಾದಿಯಲ್ಲಿಯೇ ಮೌಲ್ಯಯುತ ರಾಜಕೀಯ ಮಾಡುವೆ ಎಂದರು. ದೊಡ್ಡಪ್ಪ, ತಂದೆಯಂತೆ ತಮಗೂ ಆಶೀರ್ವಾದ ನೀಡಬೇಕು. ನಿಮ್ಮ ಕಷ್ಟಗಳಿಗೆ ಸ್ಪಂದಿಸುವೆ ಎಂದರು.
ಯಾವತ್ತೂ ಕ್ಷೇತ್ರದ ಜನರ ಮನೆ ಮಗನಾಗಿ ಕಣ್ಣೀರು ಒರಿಸುವ ಕಾರ್ಯ ಮಾಡುವೆ. ನಿಮ್ಮೆಲ್ಲರ ವಿಶ್ವಾಸ ಉಳಿಸಿಕೊಳ್ಳುವ ಕಾರ್ಯ ಮಾಡುವುದಾಗಿ ಹೇಳಿದರು.
ಗವಿ ಸಿದ್ಧಲಿಂಗೇಶ್ವರ, ಕೊಂಡಮ್ಮಾಯಿ, ದರ್ಗಾ ಇರುವುದು ಪುಣ್ಯವಂತರು, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯ ಜವಾಬ್ದಾರಿ ಯೂ ತಮ್ಮ ಮೇಲಿದೆ ಎಂದರು. ಯುವಕರಿಗೆ ಅವಕಾಶಗಳಿ ದ್ದಲ್ಲಿ ಕೆಲಸ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ವೇಳೆ ಕಂದಕೂರ ಗ್ರಾ.ಪಂ.ಅಧ್ಯಕ್ಷೆ ಶಂಕ್ರಮ್ಮ, ಉಪಾಧ್ಯಕ್ಷೆ ಸಾಬವ್ವ, ಮಾಜಿ ತಾ.ಪಂ.ಅಧ್ಯಕ್ಷ ಈಶ್ವರ ನಾಯಕ, ಅಧಿಕಾರಿ ಗಳಾದ ಶಿವಕುಮಾರ ಹುಡೇದ, ಕಿರಣ ಕುಮಾರ್, ಶರಣ ಬಸವ, ರಾಧಿಕ ಸೇರಿದಂತೆ ಪ್ರಮುಖರಾದ ಮಲ್ಲಿಕಾರ್ಜುನ ಅರುಣಿ, ಜೈರಾಮ್ ರೆಡ್ಡಿ, ಪಂಪನಗೌಡ, ಸುರೇಶ ರಾಠೋಡ, ನಾಗೇಶ್ ಗದ್ದುಗೆ ಇತರರು ಇದ್ದರು.
