ಪ್ರಯಾಣಿಕನ ಬ್ಯಾಗ್ ಮರಳಿಸಿದ ಗುರುಮಠಕಲ್ ಘಟಕದ ಅಧಿಕಾರಿಗಳು

ಗುರುಮಠಕಲ್ :  ಗಡಿ ಜಿಲ್ಲೆಯ ಗುರುಮಠಕಲ್ ಸಾರಿಗೆ ಘಟಕದ ಸಿಬ್ಬಂದಿಗಳು ಮತ್ತೊಮ್ಮೆ 54 ಸಾವಿರ ರೂಪಾಯಿ ಇರುವ ಬ್ಯಾಗ್ ಒಂದನ್ನು ಪ್ರಯಾಣಿಕನಿಗೆ ಮರಳಿಸಿದ್ದು, ವಾರದೊಳಗೆ ಎರಡನೇ ಪ್ರಾಮಾಣಿಕತೆ ಮೆರೆದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಘಟಕದ ಬೆಂಗಳೂರಿನಿಂದ ಗುರುಮಠಕಲ್ ಗೆ ಬರುವಾಗ ಬಸ್ ನಲ್ಲಿ ತೆಲಂಗಾಣ ನಾರಾಯಣ ಪೇಟ ಮೂಲದ ಮೋತಿಲಾಲ ಎನ್ನುವ ಪ್ರಯಾಣಿಕರು ಯಾದಗಿರಿ ಬಸ್ ನಿಲ್ದಾಣದಲ್ಲಿ ತಮ್ಮ ಬ್ಯಾಗ್ ಮರೆತು ಇಳಿದಿದ್ದರು.

ಅದನ್ನು ಗಮನಿಸಿದ ನಿರ್ವಾಹಕ ಅಶೋಕ ಮತ್ತು ಚಾಲಕರಾದ ವಿಶ್ವನಾಥ ಮತ್ತು ಚಂದ್ರಶೇಖರ ಅವರು ಘಟಕ ವ್ಯವಸ್ಥಾಪಕರಿಗೆ ವಿಷಯ ತಿಳಿಸಿದ್ದರು. ಕೆಲ ಸಮಯದ ನಂತರ ಪ್ರಯಾಣಿಕ ಮೋತಿಲಾಲ ಅವರು ಘಟಕದ ವ್ಯವಸ್ಥಾಪಕರಿಗೆ ಸಂಪರ್ಕಿಸಿದಾಗ ಅವರನ್ನು ಘಟಕದ ಕಛೇರಿಯಲ್ಲಿ ಪ್ರಯಾಣಿಕರ ದಾಖಲಾತಿಗಳು ಮತ್ತು ₹54000 ಇರುವ ಬ್ಯಾಗನ್ನು ಮರಳಿಸಿದ್ದಾರೆ. ಘಟಕ ವ್ಯವಸ್ಥಾಪಕ ಪ್ರವೀಣ ಯರನಾಳ, ಅಧಿಕಾರಿಗಳಾದ ಶರಣಪ್ಪ ಹೂಗಾರ ಪ್ರಕಾಶರೆಡ್ಡಿ, ಸಾಯಿರೆಡ್ಡಿ ಚಪೆಟ್ಲಾ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!