ಅಭಿವೃದ್ಧಿಯ ಹರಿಕಾರ ಶರಣಗೌಡ ಕಂದಕೂರರಿಂದ 990ಲಕ್ಷದ ಕಾಮಗಾರಿಗಳ ಅಡಿಗಲ್ಲು

ಗುರುಮಠಕಲ್ : ಅಭಿವೃದ್ಧಿ ಕಾರ್ಯಗಳಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಬೇಕು ಎಂದು ಶಾಸಕ ಶರಣಗೌಡ ಕಂದಕೂರ ಸೂಚಿಸಿದರು.

ತಾಲೂಕಿನ ಚಿನ್ನಾಕಾರ್ ಕ್ರಾಸ್ ಬಳಿ ಅರಕೇರಾ (ಕೆ) ಕ್ರಾಸ್ ದಿಂದ ಗುರುಮಠಕಲ್ ಪಟ್ಟಣದವರೆಗೆ ಆಯ್ದು ಭಾಗಗಳಲ್ಲಿ ರಸ್ತೆ ಡಾಂಬರೀಕರಣ ಮತ್ತು ಗುರುಮಠಕಲ್ ಪಟ್ಟಣದಲ್ಲಿ ರಸ್ತೆ ಮತ್ತು ಸೇತುವೆ ಅಗಲೀಕರಣ ಸೇರಿದಂತೆ ಬೀದಿ ದೀಪಗಳಿಂದ ನಗರ ಸೌಂದರ್ಯೀಕರಣ ಹಾಗೂ ಪಸಪುಲ, ಧರ್ಮಪುರ, ಗಣಪುರ ಗೇಟ್ ಗಳಲ್ಲಿ ಹೊಸ ಬಸ್ ನಿಲ್ದಾಣಗಳ ಭೂಮಿ ಪೂಜೆ ಕಾಮಗಾರಿ ಅಂದಾಜು ಮೊತ್ತ ₹ 990.00 ಲಕ್ಷಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಳಿಕ ಅಧಿಕಾರಿಗಳೊಂದಿಗೆ ಮಾತನಾಡುವ ವೇಳೆ, ಗ್ರಾಮೀಣ ಪ್ರದೇಶದಲ್ಲಿ ಪಿಡಿಓಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸಮಸ್ಯೆಯಾಗುತ್ತಿದೆ ಈ ಬಗ್ಗೆ ಕ್ರಮವಹಿಸಲು ತಾ.ಪಂ. ಅಧಿಕಾರಿ ಅಂಬ್ರೇಷ ಪಾಟೀಲ್ ಅವರಿಗೆ ಸೂಚನೆ ನೀಡಿದರು.

ಗುರುಮಠಕಲ್ ಪಟ್ಟಣದಲ್ಲಿ ಕೆಲವು ಏರಿಯಾಗಳಲ್ಲಿ ಟ್ಯಾಂಕರ್ ಮೂಲಕ ನೀರು ನೀಡಿದ್ದು, ತಮ್ಮ ಅವಧಿಯಲ್ಲಿ ಹೀಗಾಗುವುದು ನಾನು ಸಹಿಸಲ್ಲ ಎಂದು ಮುಖ್ಯಾಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದರು. ಪುರಸಭೆ ವ್ಯಾಪ್ತಿಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಚರಂಡಿ ಸ್ವಚ್ಛತೆ ಕಾಪಾಡಿ, ಮತ್ತೆ ದೂರು ಬರದಂತೆ ಬಗೆಹರಿಸಲು ತಿಳಿಸಿದರು.

ಗುರುಮಠಕಲ್ ಸೌಂದರ್ಯೀಕರಣ ಕಾಮಗಾರಿಯಲ್ಲಿ 94 ಹೊಸ ವಿದ್ಯುತ್ ಕಂಬ ಸೌಂದರ್ಯಿಕರಣ, ರಸ್ತೆ ವಿಸ್ತರಣೆಯಿದೆ. ಮಳೆಗಾಲ ಇರುವುದರಿಂದ ರಸ್ತೆ ಅಗಲೀಕರಣ ಮಾಡಿ ಎಂದು ಸೂಚನೆ ನೀಡಿದರು.ಅತಿವೃಷ್ಟಿಯಿಂದ ಆಗುವ ಹಾನಿಯ ಕುರಿತು ಕಂದಾಯ ಇಲಾಖೆ ಮಾಹಿತಿ ತಕ್ಷಣ ಸರ್ಕಾರಕ್ಕೆ ನೀಡಿ ಪರಿಹಾರ ಒದಗಿಸಲು ಕ್ರಮವಹಿಸಬೇಕು ಎಂದು ತಹಶೀಲ್ದಾರ್ ಗೆ ಸೂಚನೆ ನೀಡಿದರು. ರಸ್ತೆ ಸಂಚಾರ ವೇಗ ನಿಯಂತ್ರಣ ಜನ ನಿಬೀಡ ಪ್ರದೇಶದಲ್ಲಿ  ಅಪಘಾತ ತಡೆಯಲು ವೈಟ್ ಸ್ರ್ಟಿಪ್ ಹಾಕಲು ಸೂಚನೆ ನೀಡಿದರು.

ಈ ವೇಳೆ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ, ಪಿಚ್ ದೌಲತ್ ಎನ್ ಕೆ, ಮುಖ್ಯಾಧಿಕಾರಿ ಶರಣಪ್ಪ ಎಂ, ಲೋಕೋಪಯೋಗಿ ಇಲಾಖೆ ಎಇಇ ಪರಶುರಾಮ, ಎಇ ಹಣಮಂತ ಸೇರಿದಂತೆ ಪ್ರಮುಖರಾದ ಶುಭಾಶ್ಚಂದ್ರ ಕಟಕಟಿ, ಶರಣು ಅವಂಟಿ, ಬಸ್ಸಣ್ಣ ದೇವರಹಳ್ಳಿ, ಅಜಯ್ ರೆಡ್ಡಿ ಎಲ್ಹೇರಿ, ರವಿ ಗವಿನೋಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!