ತಾಲೂಕು ಕೇಂದ್ರದಲ್ಲಿ ಪ್ರಮಾಣ ಪತ್ರ ನೀಡಿ | ವಿಶೇಷ ಚೇತನ ಸ್ನೇಹಿ ಮಾದರಿ ಗ್ರಾಮ ಪಂಚಾಯಿತಿ ಮಾಡಲು ಚಿಂತನೆ | ವಿಶೇಷಚೇತನರ ಪರ ಅಧಿವೇಶನದಲ್ಲಿ ಧ್ವನಿ ಎತ್ತುವೆ- ಕಂದಕೂರ
ಗುರುಮಠಕಲ್: 2 ಕೋಟಿ ಶಾಸಕರ ಅನುದಾನದಲ್ಲಿ ವಿಶೇಷಚೇತನರ ಅಭಿವೃದ್ಧಿಗಾಗಿ ಶೇ.10 (20 ಲಕ್ಷ) ಅನುದಾನ ಮೀಸಲಿರಿಸಿ ಸಂಸ್ಥೆಯ ಸಲಹೆ ಪಡೆದು ಸೌಕರ್ಯ ಕಲ್ಪಿಸಲಾಗುವುದು ಎಂದು ಶಾಸಕ ಶರಣಗೌಡ ಕಂದಕೂರ ಭರವಸೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆರ್.ಪಿ.ಡಿ ಟಾಸ್ಕ್ ಫೋರ್ಸ್ ಸಮಿತಿ, ಗ್ರಾಮೀಣ ಮತ್ತು ನಗರ ಅಂಗವಿಕಲರ ಪುನರ್ವಸತಿ ಕಾರ್ಯಕ್ರಮ ಸಂಯುಕ್ತಾಶ್ರಯದಲ್ಲಿ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ೨೦೧೬ ಅರಿವು, ವಿಕಲಚೇತನರ ಹಕ್ಕೊತ್ತಾಯ ಸಮಾವೇಶ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶೇಷಚೇತನರ ಸಮಸ್ಯೆಗಳು, ಸರ್ಕಾರದ ಯೋಜನೆಗಳ ಸಮರ್ಪಕ ಲಾಭ ಒದಗಿಸಲು ವಿಶೇಷಚೇತನರ ಪರ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ಎಂದರು. ಇಂದು ಸಿದ್ದಗಂಗಾ ಶ್ರೀಗಳ ಜನ್ಮ ದಿನವಿದೆ. ಎಲ್ಲರ ಪರವಾಗಿ ಜನ್ಮದಿನದ ಶುಭಾಶಯಗಳು ತಿಳಿಸಿದರು. ಕಿರಿಯ ಶ್ರೀಗಳು 100 ವರ್ಷ ಪೂರೈಸಲಿ ಎಂದು ಪ್ರಾರ್ಥಿಸಿದರು.
ಆರ್ ಪಿ ಡಿ ಸಂಸ್ಥೆ ಚಿಕಲಚೇತನರಿಗಾಗಿ ಒಳ್ಳೆಯ ಕಾರ್ಯ ಮಾಡುತ್ತಿದೆ. ನಿಮ್ಮ ಸಮಸ್ಯೆ ಆಲಿಸಲು ಸಿಕ್ಕಿದ್ದು ಪುಣ್ಯ ಎಂದು ಶಾಸಕರು ಹೇಳಿದರು. ಸರ್ಕಾರ ಅನುದಾನ ನೀಡುತ್ತಿದೆ. ಸದ್ಬಳಕೆಗೆ ಆಗಬೇಕು. ಶಾಸಕಾಂಗ ಕಾರ್ಯಾಂಗ ಒಟ್ಟಿಗೆ ನಡೆದರೆ ವಿಕಲಚೇತನರಿಗೆ ಸೌಲಭ್ಯ ಕಲ್ಪಿಸುವ ಸಾಧ್ಯ.
ಅಧಿಕಾರಿಗಳು ವಿಶೇಷಚೇತನರ ಕೆಲಸಗಳನ್ನು ತಕ್ಷಣವೇ ಮಾಡಿಕೊಡಬೇಕು. ನಿಮ್ಮ ಕುಟುಂಬಕ್ಕೆ ಪುಣ್ಯ ಬರುತ್ತೆ. ೭ ಸಾವಿರ ವಿಶೇಷ ಚೇತನರಿಗೆ ಹೆಚ್ ಡಿ ಕುಮಾರಸ್ವಾಮಿ ಅವರು ಅವಕಾಶ ನೀಡಿದ್ದಾರೆ.
ಎಡಿಪಿ ಸಂಸ್ಥೆಯ ಸಲಹೆ ಪಡೆದು ತಾಲೂಕು ಮಟ್ಟದ ವಿಶೇಷ ಸಭೆ ಭರವಸೆ. ಸೌಲಭ್ಯಗಳು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಆತ್ಮ ಸ್ಥೈರ್ಯ ಕಳೆದುಕೊಳ್ಳದೇ ಧೈರ್ಯವಾಗಿರಿ, ಸೌಕರ್ಯ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಸುರೇಶ ಭಂಡಾರಿ ಆರ್ ಪಿ ಡಿ ರಾಜ್ಯಾಧ್ಯಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ, ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಅವರ ಹಕ್ಕುಗಳ ಮಾಹಿತಿ ಇದ್ದರೆ ಸೌಲಭ್ಯ ಪಡೆಯಲು ಸಾಧ್ಯ.
೮ ವರ್ಷಗಳಿಂದ ಹಲವು ಕಡೆ ಅರಿವು ಮೂಡಿಸುವ ಕಾರ್ಯ. ಯೋಜನೆ ಮಾಹಿತಿ, ಕಾಯ್ದೆಗಳ ಅರಿವು ಬೇಕು. ಕಾಯ್ದೆ ಬಂದು ೮ ವರ್ಷವಾಗಿದೆ. ಸರ್ಕಾರ ಸಮರ್ಪಕ ಸೌಲಭ್ಯ ನೀಡುತ್ತಿಲ್ಲ, ಅನುದಾನ ನೀಡುತ್ತಿಲ್ಲ, ಸರ್ಕಾರಕ್ಕೆ ನಾವು ಕೊನೆಯ ಆದ್ಯತೆ, ಚುನಾವಣೆ ಸಂದರ್ಭದಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ತೀವ್ರ ಅಸಮಾಧಾನ.
ಶಾಸಕರು ವಿಕಲಚೇತನರ ಪರ ಧ್ವನಿಯಾಗಿ ಸೌಕರ್ಯಗಳನ್ನು ತಲುಪಿಸಲು ಸರ್ಕಾರದ ಗಮನ ಸೆಳೆಯಲು ಮನವಿ ಮಾಡಿದರು. 20 ಬೇಡಿಕೆಗಳ ಈಡೇರಿಕೆಗೆ ಮನವಿಯನ್ನು ಶಾಸಕರಿಗೆ ನೀಡಿದರು.
ಬಾಬು ಎಸ್ ಮಾತನಾಡಿ, ಶೇ. 5 ಅನುದಾನ ಪ್ರತಿ ಇಲಾಖೆಗೂ ಮಂಜೂರಾಗಿದೆ. ಸೌಕರ್ಯ ನೀಡಲು ವ್ಯಯಕ್ತಿಕ ಹಾಗೂ ಸಮುದಾಯ ಅಭಿವೃದ್ಧಿಗೆ ಮೀಸಲಾಗಿದೆ. ಪುರಸಭೆ, ನಗರ ಸಭೆ, ಗ್ರಾ. ಪಂ. ಸರಿಯಾಗಿ ಕ್ರಿಯಾಯೋಜನೆ ಆಗುತ್ತಿಲ್ಲ. ಸಮರ್ಪಕ ಜಾರಿಯಾದರೆ ಅನುಕೂಲವಾಗಲಿದೆ ಎಂದರು.
ಈ ವೇಳೆ ಸಾಧಕರಿಗೆ ಸನ್ಮಾನಿಸಲಾಯಿತು. ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ ಕಟಕಟೆ, ಪುರಸಭೆ ಉಪಾಧ್ಯಕ್ಷೆ ರೇಣುಕಾ ಪಡಿಗೆ, ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಸಂತೋಷ ನೀರಟಿ, ಆರ್ ಪಿಡಿ ಸಮಿತಿ ತಾಲೂಕು ಅಧ್ಯಕ್ಷ ಸಿದ್ಧಣ್ಣಗೌಡ ಪಾಟೀಲ್, ತಹಸೀಲ್ದಾರ ಶಾಂತಗೌಡ ಬೀರಾದಾರ್, ತಾ.ಪಂ. ಇಒ ಅಂಬ್ರೇಷ ಪಾಟೀಲ್, ಸಿದ್ಧಣ್ಣ ಗೌಡ ವಿಕಲಚೇತನ ಕಲ್ಯಾಣಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ರಮೇಶ ದುಂಡಪ್ಪ, ಸಂಪ್ರೀತಾ ದೇವಪುತ್ರ, ಉಮಾನಾಯಕ, ಸೈದಪ್ಪ ಹೊಸಮನಿ, ನಾಗಪ್ಪ ಆವಂಟಿ, ವೀರುಪಾಕ್ಷಪ್ಪ ಗೌಡ ಮಾಲಿಪಾಟೀಲ್, ಈರಣ್ಣ ಬಿರಾದಾರ್, ರಮೇಶ ಕಟ್ಟಿಮನಿ, ಪುರಸಭೆ ಸದಸ್ಯರು, ಗಣ್ಯರು ಇತರರು ಇದ್ದರು.
