ಕಾಳೆಬೆಳಗುಂದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಚಾವಣಿ ಶಿಥಿಲ | ಶೀಘ್ರ ಹೊಸ ಕಟ್ಟಡ ನಿರ್ಮಾಣವಾಗುವರೆಗೆ ಪ್ರತ್ಯೇಕ ಸ್ಥಳದಲ್ಲಿ ಪಾಠ ಮಾಡಿ

ಗುರುಮಠಕಲ್: ಎಂತಹ ನಿಷ್ಕಾಳಜಿ ನೋಡಿ, ಅಕ್ಷರ ಕಲಿಯಲು ಬರುವ ಈ ಪುಟ್ಟ ಮಕ್ಕಳಿಗೆ ಜೀವ ಭಯ ಕಾಡುತ್ತಿದೆ. ಯಾವಾಗ ಏನಾಗುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ.

ಈ ಕಥೆ ಯಾದಗಿರಿ ಜಿಲ್ಲೆಯ ಕಾಳಬೆಳಗುಂದಿ ಸರ್ಕಾರಿ ಶಾಲೆಯದ್ದು, ಕಳೆದ ಒಂದು ವರ್ಷದಿಂದ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಹಾಳಾಗಿ ಛತ್ತಿನ ಸಿಮೆಂಟ್ ಉದುರಿ ಮಕ್ಕಳ ತಲೆ ಮೇಲೆ ಬೀಳುವ ಅಪಾಯ ಹಿಂದೆ ಸ್ಥಿತಿಯಲ್ಲಿ  ಮಕ್ಕಳಿಗೆ ದಿನನಿತ್ಯ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಬಂದಿದೆ.

ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂಡರೂ ಕೂಡ ಯಾವುದೇ ರೀತಿಯ ಪ್ರಯೋಜನೆ ಆಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಕ್ಕಳಿಗೆ ಪರ್ಯಾಯವಾಗಿ ವಿದ್ಯಾಭ್ಯಾಸ ಮಾಡಲು ಬೇರೆ ಕಡೆ ಅನುಕೂಲ ಮಾಡಿಲ್ಲ, ಆ ಶಾಲೆಯಲ್ಲಿ ಹೆಚ್ಚುವರಿ ಕಟ್ಟಡವು ಸಹ ಇಲ್ಲದಿರುವು ತೀರಾ ಅನಾನುಕೂಲವಾಗಿದೆ.

ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾಡಳಿತ ಯಾದಗಿರಿ ಕಲ್ಯಾಣ ಕರ್ನಾಟಕ 2023-24 ನೇ ಸಾಲಿನ ಕೆ ಕೆ ಆರ್ ಡಿ ಬಿ ಯ ಅಕ್ಷರ ಅವಿಸ್ಕಾರ ಮೈಕ್ರೋ ಯೋಜನೆಯಡಿ  ಶಾಲಾ ಕೊಠಡಿಗಳ ದುರಸ್ತಿ ಹಾಗೂ ಇತರ ಕಾಮಗಾರಿ ಗಳಿಗೆ ಅನುದಾನ ಮಂಜೂರಾಗಿದೆ.

ಅಂದಾಜು ಮೊತ್ತ SCP. 1.44 ಲಕ್ಷ TSP 0.39 ಲಕ್ಷ GEN. 1.17 ಲಕ್ಷ ಹೀಗೆ ಒಟ್ಟು 3 ಲಕ್ಷ ನಿರ್ಮಾಣಕ್ಕಾಗಿ ಕೆ ಆರ್ ಐ ಡಿ ಎಲ್ ಗೆ ಕಾಮಗಾರಿಯನ್ನು ವಹಿಸಿದ್ದು ಆದರೆ ಬಂದಿರುವ ಅನುದಾನ ಕಟ್ಟಡದ ಮಾಡುವುದಕ್ಕೆ ಆಗುವುದಿಲ್ಲ ಎಂದು ಬೇರೆ ಕ್ರೀಡಾ ಸಾಮಗ್ರಿಗಳು ಇನ್ನಿತರ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.

ಆದರೆ ಈಗ ಶಾಲೆಯ ಹೊಸ ಎರಡು ಕೋಠಡಿಗಳ ನಿರ್ಮಾಣಕ್ಕೆ ಅನುದಾನ ಬಂದಿದ್ದು, ಬೇಗನೆ ಹಳೆಯ ಕಟ್ಟಡವನ್ನು ಬೀಳಿಸಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಬೇಕು. ಶಿಕ್ಷಣ ಇಲಾಖೆ ನಾಳೆಯಿಂದ ದುರಸ್ತಿ ಇರುವ ಕಟ್ಟಡಗಳಿಗೆ ಬೀಗ ಹಾಕಿ ಗ್ರಾಮದಲ್ಲಿ ಬೇರೆ ಸ್ಥಳದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಗಡಿ ಭಾಗದ ಶಾಲಾ ಮಕ್ಕಳಿಗೆ ಶೀಘ್ರವೇ ಕಟ್ಟಡ ನಿರ್ಮಾಣ ಮಾಡಬೇಕು. ಮಕ್ಕಳಿಗೆ ಅನಾಹುತ ಜರುಗಿದರೆ ಇದಕ್ಕೆ ಶಿಕ್ಷಣ ಇಲಾಖೆಯೇ ನೇರ ಹೊಣೆಯಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ತಾಲೂಕ ಅಧ್ಯಕ್ಷ ಶರಣಬಸಪ್ಪ ಎಲ್ಹೇರಿ ಹೇಳಿದ್ದಾರೆ. ತ್ವರಿತ ಕ್ರಮವಹಿಸಲು ದೇವಸಿಂಗ್ ಠಾಕೂರ್, ಮೌನೇಶ್ ಮಾಧ್ವಾರ, ತಾಯಪ್ಪ ಚೇಳಿಮೆಲಿ. ರಾಜು ಕಲಾಲ್, ಲಕ್ಷ್ಮಣ್ ಬಾಗಿಲಿ ಆಗ್ರಹಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!