ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ 2 ನೇ ಹಂತದ ಲ್ಯಾಪ್ ಟಾಪ್ ವಿತರಣೆ • ಬೂದುರನಲ್ಲಿ ಸಿಡಿಲಿನಿಂದ 65 ಕುರಿ ಮೃತ • ಧೈರ್ಯ ಹೇಳಿದ ಕಂದಕೂರರಿಂದ ವೈಯಕ್ತಿಕ ನೆರವು • ಬೂದುರ ಕುಡಿಯುವ ನೀರು, ರಸ್ತೆ ನಿರ್ಮಾಣಕ್ಕೆ ಸೂಚನೆ
ಗುರುಮಠಕಲ್: ಸಾಮಾನ್ಯ ಜನರ ಅಲೆದಾಟ ತಪ್ಪಿಸಬೇಕು. ಸರ್ಕಾರ ಕಾಗದ ಪತ್ರ ಕಳೆಯದಂತೆ ಡಿಜಿಟಲೀಕರಣ ಗೊಳಿಸುತ್ತಿದೆ ಈ ನಿಟ್ಟಿನಲ್ಲಿ ಅಧಿಕಾರಿ ವೈಜ್ಞಾನಿಕವಾಗಿ ತ್ವರಿತವಾಗಿ ಕಾರ್ಯ ನಿರ್ವಹಿಸಲು ಶಾಸಕ ಶರಣಗೌಡ ಕಂದಕೂರ ಸೂಚಿಸಿದ್ದಾರೆ.
ಗುರುಮಠಕಲ್ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ 2 ನೇ ಹಂತದ 13 ಲ್ಯಾಪ್ ಟಾಪ್ ವಿತರಣೆ ಮಾಡಿ ಮಾತನಾಡಿದರು. ನಮ್ಮಲ್ಲಿ ಅಮಾಯಕ ಜನರಿದ್ದಾರೆ. ಬಡ ಕುಟುಂಬದವರು ಬಂದರೆ ಅಲೆದಾಡಿಸದೇ ಸರ್ಕಾರಿ ಕೆಲಸ ಸಕಾಲಕ್ಕೆ ಮಾಡಿಕೊಡಲು ಸೂಚನೆ ನೀಡಿದರು.
ವಿಎ ಮತ್ತು ಆರ್ ಐ ಗಳು ಸ್ಥಳೀಯವಾಗಿ ಲಭ್ಯವಿರಬೇಕು. ಇರುವುದಕ್ಕೆ ಬೇಕಾದರೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
ಸಿಡಿಲಿಗೆ ಕುರಿ ಸಾವು – ಮಾಲೀಕರಿಗೆ ಧೈರ್ಯ ತುಂಬಿದ ಶಾಸಕರು : ಇತ್ತೀಚೆಗೆ ಸಿಡಿಲಿನಿಂದಾಗಿ ಹಲವರಿಗೆ ಸೇರಿದ ಸುಮಾರು 65 ಕುರಿ ಸಾವನ್ನಪ್ಪಿದ ಬೂದೂರ ಗ್ರಾಮದ ರೈತರು ಕುಟುಂಬಗಳಿಗೆ ಶಾಸಕ ಶರಣಗೌಡ ಕಂದಕೂರ ಧೈರ್ಯ ಹೇಳಿದರು.
ಸರ್ಕಾರದಿಂದ ಜಲ್ಲಪ್ಪ ಅವರಿಗೆ ₹ 88 ಸಾವಿರ, ಸಾಯಪ್ಪ ₹ 56 ಸಾವಿರ, ಸಾಬಣ್ಣ ₹64 ಸಾವಿರ, ನರಸಪ್ಪ ₹56 ಸಾವಿರ ರೂಪಾಯಿಗಳ ಪರಿಹಾರ ಆದೇಶ ಪತ್ರಗಳನ್ನು ವಿತರಿಸಿದರು. ಬಳಿಕ 4 ಜನ ಕುರಿ ಮಾಲೀಕರಿಗೆ ವೈಯಕ್ತಿಕ ಧನ ಸಹಾಯ ಮಾಡಿದರು.
ಮೇ ತಿಂಗಳೊಳಗೆ ರಸ್ತೆ ನಿರ್ಮಿಸಿ : ಬೂದೂರು ಗ್ರಾಮದ ಜನರು ರಸ್ತೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮೇ ತಿಂಗಳಲ್ಲಿ ನಿರ್ಮಾಣ ಮಾಡುವ ಭರವಸೆ ನೀಡಲಾಗಿದೆ. ತ್ವರಿತವಾಗಿ ರಸ್ತೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಫೋನ್ ಮೂಲಕ ಸೂಚಿಸಿದರು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಗ್ರಾ.ಪಂ. ನಿರ್ಲಕ್ಷ್ಯ ವಹಿಸಿದ್ದು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಾ.ಪಂ. ಅಧಿಕಾರಿಗಳಿಗೆ ಕರೆ ಮಾಡಿ ನಾಳೆಯೇ ನೀರಿನ ಸಮಸ್ಯೆ ಪರಿಹರಿಸದಿದ್ದರೆ ಗ್ರಾ.ಪಂ.ಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ, ಗ್ರೇಡ್ 2 ತಹಶೀಲ್ದಾರ್ ನರಸಿಂಹ ಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಶುಭಾಷಶ್ಚಂದ್ರ ಕಟಕಟಿ, ಶರಣು ಆವುಂಟಿ, ಬಸಣ್ಣ ದೇವರಹಳ್ಳಿ, ರವಿ ಗವಿನೋಳ ಸೇರಿದಂತೆ ಅಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.
