ಕಲ್ಯಾಣ ಕರ್ನಾಟಕ ಸೇರಿದಂತೆ ನೆರೆಯ ತೆಲಂಗಾಣದಲ್ಲೂ ಹೆಚ್ಚಿದ ರಣ ಬಿಸಿಲು

ಯಾದಗಿರಿ/ನಾರಾಯಣಪೇಟ : ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ರಣ ಬಿಸಿಲಿನ ಆರ್ಭಟ ಹೆಚ್ಚಾಗಿದೆ. ಶುಕ್ರವಾರ 43 ಡಿಗ್ರಿ ಬಿಸಿಲು ದಾಖಲಾಗಿದ್ದು, ಕೆಡದಂತ ಬಿಸಿಲು ತಾಪಕ್ಕೆ ನೆರೆಯ ತೆಲಂಗಾಣದ ನಾರಾಯಣ ಪೇಟ ಜಿಲ್ಲಾ ಕೇಂದ್ರದಲ್ಲಿ ಬುಲೇಟ್ ವಾಹನವೊಂದು ನೋಡಿ ನೋಡುತ್ತಲೇ ಜನರು ಕಣ್ಣೆದುರು ಹೊತ್ತಿ ಉರಿದ ಘಟನೆ ವರದಿಯಾಗಿದೆ.

ನಿತ್ಯ 40 ಡಿಗ್ರಿ ದಾಟುತ್ತಿರುವ ಬಿಸಿಲಿಗೆ ಹೆದರಿ ಜನರು ಮನೆಯಿಂದ ಹೊ ಬಾರದು ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಚೇರಿ ಸಮಯವೇನೋ ಬೆಳಿಗ್ಗೆಯಿಂದ ಮಧ್ಯಾಹ್ನ ವರೆಗೆ ಮಾರ್ಪಡಿಸಲಾಗಿದೆ. ಈ ಮಧ್ಯೆಯೂ ಜನರು ಮನೆಯಿಂದ ಹೊರಬರಲು ಹೆದರುವ ಸ್ಥಿತಿ ಇದೆ.ಸೇಡಂನಲ್ಲಿ ಜನರು ಅತ್ಯಂತ ಬಿಸಿಲು ಶಾಖಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಮಧ್ಯಾಹ್ನದ ಹೊತ್ತು ಹೊರಬಂದರೆ ಇಲ್ಲಿ ತಲೆ ಸುತ್ತಿ ಬೀಳುತ್ತೇವೋ ಎನ್ನುವ ಭಯ ಆವರಿಸಿದೆ. ಇನ್ನೂ ಬಿಸಿಲಿನಿಂದ ರಕ್ಷಣೆ ಪಡೆಯಲು ಕೆಲ ವಾಹನ ಸವಾರರು ನೀರಲ್ಲಿ ನೆನೆಸಿದ ಬಟ್ಟೆ ತಲೆಗೆ ಸುತ್ತಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಂತ್ರಗಾರಿಕೆ ನಡೆಸುತ್ತಿರುವುದು ಕಂಡು ಬಂತು.

ಯಾದಗಿರಿ ನಗರಸಭೆ ಕಾರ್ಯ ಮಾದರಿ : ಗಿರಿ ಜಿಲ್ಲೆಯಲ್ಲಿ ಜನರು ರಣ ಬಿಸಿಲಿನಿಂದ ರಕ್ಷಣೆ ಪಡೆಯಲು ಟ್ರಾಫಿಕ್ ಸಿಗ್ನಲ್ ಬಳಿ ಯಾದಗಿರಿ ನಗರ ಸಭೆ ಅಧಿಕಾರಿಗಳು ನೆರಳು ಪರದೆ ಅಳವಡಿಸುವ ಮೂಲಕ ಜನರು ಸಿಗ್ನಲ್ ಬಳಿಯಾದರು ನಿರಾಳವಾಗಿ ನೆರಳಿನಲ್ಲಿ ನಿಲ್ಲುವಂತಾಗಿದೆ.

ಈ ದಿಸೆಯಲ್ಲಿ ಕಲ್ಯಾಣ ಕರ್ನಾಟಕ ಉಳಿದ ಸ್ಥಳೀಯ ಸಂಸ್ಥೆಗಳು ಜನರಿಗೆ ಕನಿಷ್ಟ ನೆರಳು ನೀಡಲು ಪರದೆ ಅಳವಡಿಸುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ.

Spread the love

Leave a Reply

Your email address will not be published. Required fields are marked *

error: Content is protected !!