ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲು | ಅಸ್ಸಾಂನಲ್ಲಿ ಹ್ಯಾಟ್ರಿಕ್ ಹೀರೋ ಹಿಮಂತ ಬಿಸ್ವ ಗೆ ಜೈ ಎಂದ ಮತದಾರ

ಯಾದಗಿರಿ: ಪಶ್ಚಿಮ ಬಂಗಾಳ, ಪುದುಚೇರಿ ಹಾಗೂ ಅಸ್ಸಾಂ ನಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದ ಹಿನ್ನೆಲೆ ಯಾದಗಿರಿ ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ ಮಾಡಲಾಯಿತು. ಪಶ್ಚಿಮ ಬಂಗಾಳದಲ್ಲಿ ಪಡೆದ ಜಯಕ್ಕಾಗಿ ದೀದಿ ಹೋದ್ರು, ದುರ್ಗಾ ಬಂದರು ಎಂಬ ಘೋಷಣೆಯೊಂದಿಗೆ ಸಂಭ್ರಮಾಚರಣೆ ನಡೆಸಿದರು.

ನಗರದ ಸುಭಾಷ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಈ ವೇಳೆ, ಬಿಜೆಪಿ ಪಕ್ಷಕ್ಕೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಜಯಕಾರ ಹಾಕಿದರು.

ಈ ವೇಳೆ‌ ಮಾತನಾಡಿದ ಮುಖಂಡರು ನಮ್ಮ ದೇಶದಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಮತದಾರರು ಸ್ಪಷ್ಟವಾಗಿ, ಮೋದಿ ಜೀ ಹಾಗೂ ಭಾರತೀಯ ಜನತಾ ಪಕ್ಷದ ಪರವಾಗಿ ನಿಲುವನ್ನು ವ್ಯಕ್ತಪಡಿಸುವುದನ್ನು ಫಲಿತಾಂಶದ ಮೂಲಕ ನೋಡುತ್ತಿದ್ದೇವೆ ಎಂದಿದ್ದಾರೆ.

ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಎನ್ ಡಿ ಎ ನಾಲ್ಕು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಬಹುದಾಗಿದೆ. ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆ ಸ್ಪಷ್ಟವಾಗಿ ಕಾಣುತ್ತಿದೆ. ಅಸ್ಸಾಂನಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿ ಮತ್ತೊಮ್ಮೆ ಸರ್ಕಾರ ರಚನೆ ಮಾಡುತ್ತಿದ್ದೇವೆ.

ಪುದುಚೇರಿಯಲ್ಲಿ ಸಹ ಎರಡನೇ ಬಾರಿ ಸರ್ಕಾರ ರಚನೆ ಮಾಡುತ್ತಿದ್ದೇವೆ. ತಮಿಳುನಾಡಿನಲ್ಲಿಯೂ ಎನ್ಡಿಎ ಬೆಂಬಲದಿಂದ ಸರ್ಕಾರ‌ ರಚನೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು. ಗುರುಮಠಕಲ್ ನಲ್ಲಿಯೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಪಟ್ಟರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ, ಹಿರಿಯ ಮುಖಂಡೆ ನಾಗರತ್ನ ಕುಪ್ಪಿ, ಅಲೆಮಾರಿ ಅರೆಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ,  ಪರುಶುರಾಮ ಕುರುಕುಂದಿ, ಚಂದುಲಾಲ ಚೌದರಿ, ವೆಂಕಟರೆಡ್ಡಿ ಅಬ್ಬೆತುಮಕೂರು, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ್ ಪಾಟೀಲ್, ಯುಡ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ್, ಡಾ.ಶರಣರಡ್ಡಿ ಕೊಡ್ಲ, ಶ್ರೀದೇವಿ ಶೆಟ್ಟಿಹಳ್ಳಿ, ರಮಾದೇವಿ ಕಾವಲಿ, ಸ್ವಾಮಿದೇವ ದಾಸನಕೇರಿ, ವೆಂಕಟಪ್ಪ ಅವಂಗಾಪುರ, ರಮೇಶ್ ದೊಡಮನಿ, ರಾಜುಸ್ವಾಮಿ ಅನಂಪಲೀ, ಅಪ್ಪಣ್ಣ ಜೈನ್, ಮಂಜುನಾಥ ಜಡಿ, ಗೊವಿಂದಪ್ಪ ಖಾನಾಪುರ, ಚನ್ನವಿರಯ್ಯ ಸ್ವಾಮಿ, ಲಕ್ಷ್ಮೀಪುತ್ರ ಮಾಲಿಪಾಟೀಲ, ಮೋನೇಶ ಬೇಳಿಗೇರ, ದೇವಿಂದ್ರಪ್ಪ ಯರಗೊಳ, ಮಹದೇವಪ್ಪ ಗಣಪುರ, ಸಾಬು ಬಗಲಿ, ಮಲ್ಲುಸ್ವಾಮಿ ಗುರುಸುಣಗಿ, ಶಿವರಾಜ ಗುತ್ತೇದಾರ್, ಸಾಲು ಯಡ್ಡಳ್ಳಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!