ಶಹಾಪೂರ ತಾಲೂಕಿನ ನಡೆದ ಜೆ.ಜೆ.ಎಂ ಅವ್ಯವಹಾರ | ವಿಶೇಷ ತನಿಖಾ ತಂಡ ರಚಿಸಿ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ದೂರು | ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ

ಯಾದಗಿರಿ:  ಶಹಾಪೂರ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗದಡಿ ಜೆ.ಜೆ.ಎಂ ಯೋಜನೆ 2020-21 ರಿಂದ 2024-25 ಮೊದಲನೇ ಮತ್ತು ನಾಲ್ಕನೇಯ ಫೇಸ್‌ವರೆಗೆ ಇರುವ ಕಾಮಗಾರಿಯಲ್ಲಿ ಅಕ್ರಮ ವ್ಯವಹಾರ ನಡೆದಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಯಿತು.

ಈ ಕುರಿತು ಫೆ.12 ರಂದು ರಾಜ್ಯಪಾಲರು ಹಾಗೂ ಸಚಿವ ಪ್ರಿಯಂಕಾ ಖರ್ಗೆ, ಪಂಚಾಯತ್ ರಾಜ್ ಇಲಾಖೆ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಸಂಘಟನೆಯಿಂದ ದಾಖಲೆ ಸಮೇತ ದೂರು ನೀಡಲಾಗಿದ್ದು, ಉದಾಹರಣೆಗೆ ಶಹಾಪೂರ ತಾಲೂಕಿನ ವನದುರ್ಗ ಗ್ರಾಮದಲ್ಲಿ ಅಂದಾಜು ಮೊತ್ತ 9489.15 ಇದ್ದು, ಒಟ್ಟು ಖರ್ಚು 397.88 ಕೋಟಿಯ ಕಾಮಗಾರಿ ಮುಕ್ತಾಯಗೊಂಡಿದೆ. ಗ್ರಾ.ಪಂ.ಗೆ ಹಸ್ತಾಂತರಗೊಂ ಡಿದೆ. ಹರ್ ಗರ್ ಜಲ್ ಪೂರ್ಣಗೊಂಡಿರುತ್ತದೆ.

ಅಣಬಿ ಗ್ರಾಮದಲ್ಲಿ ಒಟ್ಟು ಎಫ್.ಎಸ್.ಟಿಸಿ ಸಂಖ್ಯೆ: 993 ಎಂಇದ್ದು ಅಂದಾಜು ಮೊತ್ತ 446.88ಕೋಟಿ ಎಂದಿದ್ದು , ಗುತ್ತಿಗೇದಾರ ರಾಮರಾವ್ ಕುಲ್ಕರ್ಣಿ ಶಾರದಳ್ಳಿ ಇದ್ದು ಪ್ರಗತಿ ವರದಿಯಲ್ಲಿ ಆಗ್ರಿಮೆಂಟ್ ಸಂಖ್ಯೆ ಮತ್ತು ದಿನಾಂಕ ಖಾಲಿ ಎಂದು ದಾಖಲೆ ಹೇಳುತ್ತದೆ . ಒಟ್ಟು ಪೈಪಲೈನ್ 12,730 ಮುಕ್ತಾಯಗೊಂಡ ಒಟ್ಟು ಖರ್ಚು 230.34ಕೋಟಿ ಎಂದು ಮತ್ತು ಕಾಮಗಾರಿ ಮುಕ್ತಾಯಗೊಂಡಿದೆ ಎಂದಿರುತ್ತದೆ.

ಹೀಗೆ ಬಾಣತಿಹಾಳ, ಗುಂಡಹಳ್ಳಿ, ಕೋಡಾಲ, ಕೊಂಗಂಡಿ ಎಸ್.ಆರ್. ಪರಸಾಪೂರ, ಕದರಾಪೂರ ಹಾಗೂ ವಡಗೇರಾ ತಾಲೂಕಿನ ಗೊಂಡೆನೋರ ಗ್ರಾಮದಲ್ಲಿ ನೀರು ಕಾಣದೇ ಜನ ಖಾಲಿ ಕೊಡ ಪ್ರದರ್ಶನ ಮಾಡಿದ್ದಾರೆ.

ಇಂಜನೀಯರ್ ಚನ್ನವೀರಯ್ಯಸ್ವಾಮಿ ಶಹಾಪೂರ ಮತಕ್ಷೇತ್ರದ ಕಾಮಗಾರಿಗಳಿಗೆ ಏಕ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 15 ರಿಂದ 20 ವರ್ಷಗಳಿಂದ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿದ್ದು,  ಕಳೆದ ಮೂರು ವರ್ಷಗಳ ಹಿಂದೆ ಹೋತಪೇಠ ಗ್ರಾಂ.ಪಂನಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಲುಷಿತ ನೀರು ಕುಡಿದು ಸಾವನ್ನಪ್ಪಿದರು. ಸಂಬಂಧಪಟ್ಟ ಇಂಜನೀಯರ್ ಚನ್ನವೀರಯ್ಯಸ್ವಾಮಿ ಅಮಾನತ್ತು ಮಾಡಲಾಯಿತು. ಆದರೂ ಕಾರ್ಯನಿರ್ವಹಿಸಿ ಅಮಾನತ್ತುಗೊಂಡ ಸ್ಥಳದಲ್ಲಿ ಮುಂದುವರೆಯಕೂಡದೆಂಬ ನಿಯಮವಿದೆ.  ಆದರೆ ಈ ಭ್ರಷ್ಟ ಇಂಜನೀಯರ್ ಅದೇ ಸ್ಥಳದಲ್ಲಿ ತನ್ನ ಪ್ರಭಾವ ಬೀರಿ ಪುನಃ ಕಾರ್ಯನಿರ್ವಹಿಸುತ್ತಾ ಮುಂದುವರೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ವ್ಯಕ್ತಿಗೆ ಯಾವುದೇ ಕಾನೂನಿನ ಭಯವಿಲ್ಲ. ಎಲ್ಲಾ 197 ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ಮಾಡಿ ಎಲ್ಲಾ ಕಾಮಗಾರಿ ಗಳನ್ನು ಉನ್ನತ ಮಟ್ಟದ ತನಿಖಾ ತಂಡ ನೇಮಿಸಿ ಹಲವು ವರ್ಷಗಳಿಂದ ಅಂತಹ ಅಕ್ರಮದಲ್ಲಿ ತೊಡಗಿರುವ ಈ ಮೇಲಿನ ಇಂಜನೀಯರ್‌ಗಳು ಹಾಗೂ ಭಾರಿ ಪ್ರಮಾಣದಲ್ಲಿ ಹಣ ಲೂಟಿ ಮಾಡಿದ ಈ ಮೇಲಿನ ಗುತ್ತಿಗೆದಾರರನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಿ ಸಾರ್ವಜನಿಕ ಹಣ ದುರ್ಭಳಕೆ ಮತ್ತು ವಂಚನೆ ಪ್ರಕರಣಗಳ ಅಡಿಯಲ್ಲಿ ಇವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.

ಈ ವೇಳೆ ನಿಂಗಣ್ಣ ಕದ್ರಾಪುರ್ ದಲಿತ ಮತ್ತು ಮೈನಾರಿಟಿ ಜಿಲ್ಲಾಧ್ಯಕ್ಷರು, ಇಸ್ಮಾಯಿಲ್ ತಿಮ್ಮಪುರಿ, ಸುನಿಲ್ ಹಳೆ ಸಾಗರ್, ಬಸವರಾಜ್ ನಾಟೇಕಾರ್ DSS ತಾಲೂಕ ಅಧ್ಯಕ್ಷರು, ನಾಗು ಯಜ್ಞದೊಡ್ಡಿ, ಹನುಮಂತ ಪರಶುರಾಮ್ ಸಿಂಗನಹಳ್ಳಿ, ರಾಜು ಗೋಗಿ, ಮೌನೇಶ್ ಜಾರಕಿಹೊಳಿ,  ವಿಶ್ವರಾಜ , ಭೋಜಪ್ಪ ಮುಂಡಾಸ್, ಮರಿಯಪ್ಪ ಗೋಲಗೇರಿ, ಸೋಪಣ್ಣ ಗೋಲಗೇರಿ, ಅಮ್ಲಪ್ಪ ಮದ್ನಾಳ, ಅಂಬರೀಶ್ ಶಿರವಾಳ ಸೇರಿದಂತೆ ಇತರರು ಭಾಗವಹಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!