ಭೋಜಲಿಂಗೇಶ್ವರರ | ಅಂಭಾ ಭವಾನಿ ಪಲ್ಲಕ್ಕಿ ಉತ್ಸವಕ್ಕೆ ಹರಿದು ಬಂದ ಭಕ್ತಸಾಗರ

ಯಾದಗಿರಿ : ಇಲ್ಲಿಗೆ ಸಮೀಪದ ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರರ ಹಾಗೂ ಅಂಭಾ ಭವಾನಿ ದೇವಿಯ ಪಲ್ಲಕ್ಕಿ ಉತ್ಸವ ಮತ್ತು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಹಿರಗಪ್ಪ ತಾತನವರ ಸಮ್ಮುಖದಲ್ಲಿ ಭವ್ಯ ಶೋಭಾಯಾತ್ರೆ ಸೋಮವಾರ ಸೀಗೆ ಹುಣ್ಣಿಮೆ ದಿನದಂದು ಅಪಾರ ಭಕ್ತಸಾಗರದ ಮಧ್ಯೆ ಅದ್ದೂರಿಯಾಗಿ ಜರುಗಿತು.

ಮಧ್ಯಾಹ್ನ ಪೂಜ್ಯರ ನಿವಾಸದಲ್ಲಿ ಶ್ರೀ ಭೋಜಲಿಂಗೇಶ್ವರ ಹಾಗೂ ಅಂಭಾ ಭವಾನಿ ದೇವಿಯ ಪಲ್ಲಕ್ಕಿ ಪೂಜೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗಣ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ನೆರವೇರಿತು. ಬಳಿಕ ಸಕಲ ಮಂಗಳ ವಾದ್ಯಗಳೊಂದಿಗೆ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಭಕ್ತರು ಮೆರವಣಿಗೆಯುದ್ದಕ್ಕೂ ಹೂಮಳೆಗೈದು ಜಯಘೋಷಣೆ ಮೂಲಕ ಭಕ್ತಿ ಸಮರ್ಪಿಸಿದರು. ಪಲ್ಲಕ್ಕಿ ಮೆರವಣಿಗೆಯು ಪೂಜ್ಯರ ನಿವಾಸದಿಂದ ಆರಂಭಗೊಂಡು ಪ್ರಮುಖ ಬೀದಿಗಳ ಮೂಲಕ ಸಾಗಿ ಸಂಜೆ ಶ್ರೀ ಭೋಜಲಿಂಗೇಶ್ವರ ದೇವಸ್ಥಾನವನ್ನು ತಲುಪಿತು.

ಮೆರವಣಿಗೆಯಲ್ಲಿ ಬ್ಯಾಂಡ್-ಬಾಜಾ, ಭಜಂತ್ರಿ, ಡೊಳ್ಳು ಕುಣಿತ, ಕೋಲಾಟ ಹಾಗೂ ಡಿಜೆ ಸೌಂಡ್‌ಗೆ ಯುವಕರು ಕುಣಿದು ಕುಪ್ಪಳಿಸಿದರು. ವಿವಿಧ ಬಣ್ಣಗಳ ಧ್ವಜಗಳು, ಭಜನಾ ತಂಡಗಳು ಹಾಗೂ ಸುಮಂಗಲೆಯರು ಹೊತ್ತ ಕಳಸಗಳು ಭಕ್ತರ ಗಮನ ಸೆಳೆದವು. ಸುಗೂರ ಎನ್ ಗೆಳೆಯರ ಬಳಗದವರ ಕುಣಿತವೂ ನೋಡುಗರಿಗೆ ವಿಶೇಷ ಆಕರ್ಷಣೆಯಾಗಿತ್ತು.

ಹನುಮಾನ್ ದೇವಸ್ಥಾನದ ಆವರಣದಲ್ಲಿ ಸುಗೂರ ಎನ್ ಗೆಳೆಯರ ಬಳಗದ ವತಿಯಿಂದ ಭಕ್ತರಿಗೆ ಅನ್ನಪ್ರಸಾದ ಸೇವೆ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಭೋಜಲಿಂಗೇಶ್ವರ ಹಾಗೂ ಅಂಭಾ ಭವಾನಿ ದೇವಿಯ ದರ್ಶನ ಪಡೆದರು. ದೇವಸ್ಥಾನದ ಸುತ್ತಮುತ್ತ ಭಕ್ತರಿಂದ ಕಿಕ್ಕಿರಿದ ಜನಸ್ತೋಮ ಕಂಡು ಬಂತು, ದೇವಸ್ಥಾನವು ವಿಶೇಷ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶ್ರೀಮಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಹಿರಗಪ್ಪ ತಾತನವರ ದರ್ಶನ ಪಡೆದು ಪುನೀತರಾದರು.

ಈ ಸಂದರ್ಭದಲ್ಲಿ ಈರಣ್ಣ ಬಲಕಲ್ ಎಲ್‌ಐಸಿ ಯಾದಗಿರಿ, ಮಲ್ಲಪ್ಪ ಅರಿಕೇರಿ ಯಾದಗಿರಿ, ಶಂಕರಗೌಡ ಮಾಸ್ತರ ಲಿಂಗಸುಗೂರು, ಮಹಾಂತೇಶಗೌಡ ಲಿಂಗಸುಗೂರು, ಪ್ರಭು ಹೂಗಾರ, ನರೇಂದ್ರ ಗುತ್ತಿ, ಮಹಾದೇವಪ್ಪ ಸಾಹುಕಾರ್, ರಾಮಲಿಂಗಯ್ಯ ಸ್ವಾಮಿ, ಜಗದೀಶ್ ಶಾಸ್ತ್ರಿ ಹಲಕಟ್ಟಿ. ಸೋಮಣ್ಣಗೌಡ ತುಮಕೂರು, ಶರಣಗೌಡ ಬೆನಕನಹಳ್ಳಿ, ಮಹೇಶ ಪಾಟೀಲ್, ಭೀಮರೆಡ್ಡಿಗೌಡ ಕುರಾಳ, ವಿಶ್ವನಾಥ ರೆಡ್ಡಿ ಸುಗೂರ ಎನ್, ಶರಣಗೌಡ ವಕೀಲರು, ಸಿದ್ದುಗೌಡ ಬೆನಕನಹಳ್ಳಿ, ಶರಣಗೌಡ ತುಮಕೂರು, ಸಂಗಾರೆಡ್ಡಿಗೌಡ ಮಾಲಿಪಾಟೀಲ್, ಪರ್ವತರೆಡ್ಡಿಗೌಡ ಕರಣಗಿ, ಬಸ್ಸುಗೌಡ ಮಾಲಿಪಾಟೀಲ್, ಮಹಾದೇವ ರೆಡ್ಡಿ ತುಮಕೂರು, ಬಸ್ಸು ಪಾಟೀಲ್ ಮಾರಡಗಿ, ಮಲ್ಲಿನಾಥ ಚಿನ್ನಾಪೊಟೋ ಸ್ಟುಡಿಯೋ, ಬಸವರಾಜ ಹಡಪದ ಸುಗೂರ, ಸಾಬಣ್ಣ ಚಿತ್ರಕಲಾ ಶಿಕ್ಷಕರು, ಸಿದ್ದುಗೌಡ ಕುರಾಳ, ಪ್ರವೀಣ ಪಾಟೀಲ್ ತುಮಕೂರು, ಭಾಬು ಪಾಟೀಲ್, ರಾಜೇಂದ್ರ ನಾಯ್ಕೋಡಿ, ಶಂಕರ ಬೇನಿಗಿಡ, ಅಯ್ಯಪ್ಪ ಪೂಜಾರಿ. ಬಾಸುಮೀಯ್ಯಾ ಬಂಟ್ನಳ್ಳಿ ಇತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!