ಸುರಪುರ ತಾಲೂಕಿನ ಶಾಂತಪುರ ಗ್ರಾಮದ ಬಳಿ ಘಟನೆ | ಖಾಸಗಿ ಬಸ್ – ಕಾರು ಬೆಂಕಿ ಕೆನ್ನಾಲಿಗೆ ಧಗಧಗ | ಅಂದಾಜು 7 ಜನ ಸಜೀವ ದಹನ ಶಂಕೆ
ಯಾದಗಿರಿ: ಅಮವಾಸ್ಯೆ ಎಂದು ದೇವರು ದರ್ಶನಕ್ಕೆ ತೆರಳಿದ ಕುಟುಂಬಕ್ಕೆ ಈ ಅಮಾವಾಸ್ಯೆ ನಿರಾಳವಾಗಿ, ಇಡೀ ಕುಟುಂಬ ದವರನ್ನ ಬಲಿ ಪಡೆದ ಹೃದಯ ವಿದ್ರಾವಕ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ರಭಸಕ್ಕೆ ಎರಡು ವಾಹನಗಳಿಗೆ ಬೆಂಕಿ ತಗುಲಿ ಸುಮಾರು 7 ಜನರು ಮೃತಪಟ್ಟಿದ್ದಾರೆ.
ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಬಳಿ ಗಂಭೀರ ಡಿಕ್ಕಿ ಸಂಭವಿಸಿದ್ದು, ಸುರಪುರ ರಿಂದ ಕಾರು ಸಿರವಾರಕ್ಕೆ ತೆರಳುತ್ತಿತ್ತು ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕಾರಿನಲ್ಲಿ ಸಿರವಾರದ ಸ್ಥಳೀಯ ಜನಪ್ರತಿನಿಧಿ ಒಬ್ಬರು ಕುಟುಂಬ ಸಮೇತ ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದ ವೇಳೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಷ್ಟರಲ್ಲೇ ಡಿಕ್ಕಿಯಿಂದ ಬೆಂಕಿ ಕಾಣಿಸಿಕೊಂಡು ಎರಡು ವಾಹನಗಳಿಗೆ ಆವರಿಸಿದ ಪರಿಣಾಮ ಕಾರಿನಲ್ಲಿದ್ದ ಮೃತ ದೇಹಗಳನ್ನು ಸ್ಥಳೀಯರು ಹೊರತೆಗಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
