ಯಾದಗಿರಿ: ಬಣಜಿಗ ಸಮಾಜದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರನ್ನಾಗಿ ನಗರದ ನಿವಾಸಿಯಾದ ಮಂಜುಳಾ ಗೂಳಿ ಅವರನ್ನು ಬಣಜಿಗ ಸಮಾಜದ ಜಿಲ್ಲಾ ಅಧ್ಯಕ್ಷರಾದ ಸಂಗಪ್ಪ ಲಾಳಸಂಗಿ ಅವರು ನೇಮಕ ಮಾಡಿದ್ದಾರೆ.
ನಗರದ ಅಮೃತೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಿಳಾ ಸದಸ್ಯರ ಸಭೆಯಲ್ಲಿ ಭಾಗವಹಿಸಿ ನೇಮಕ ಮಾಡಿದ್ದಾರೆ.
ತಕ್ಷಣವೇ ತಮ್ಮ ಜವಾಬ್ದಾರಿಯನ್ನು ತೆಗೆದುಕೊಂಡು ತಾವು ಸಮಾಜದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು
ಈ ಸಂದರ್ಭದಲ್ಲಿ ಅಂಬಿಕಾ ಮಹಾಮನಿ, ಲಕ್ಷ್ಮೀ ಪಾಟೀಲ್, ಬಸಮ್ಮ ಬೆಳಗೇರಿ, ಅಂಬೀಕಾ ಬೆಳಗೇರಿ, ಸವಿತಾ ಕಂದಕೂರ್, ಪವಿತ್ರಾ, ಸವಿತಾ ಮಾಲಿ ಪಾಟೀಲ್ ಸೇರಿದಂತೆ ಮತ್ತಿತರರು ಮಹಿಳೆಯರು ಭಾಗವಹಿಸಿದರು.
